ಹೊಸ ತಾ.ಪಂ.ಗಳ ಅಸ್ತಿತ್ವಕ್ಕೆ ಸಕಲ ಸಿದ್ಧತೆ
Team Udayavani, Mar 17, 2020, 7:00 AM IST
ಹೆಬ್ರಿ ತಾಲೂಕು ಕಚೇರಿ
ಉಡುಪಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತಾಲೂಕುಗಳಲ್ಲಿ ತಹಶೀಲ್ದಾರ್‌ಗಳ ನೇಮಕವಾದ ಬಹು ಸಮಯದ ಬಳಿಕ ಪ್ರತ್ಯೇಕ ತಾ.ಪಂ.ಗಳು ಕಾರ್ಯಾರಂಭ ಮಾಡಲಿವೆ. ಇದಕ್ಕಾಗಿ ಹೊಸ ತಾ.ಪಂ.ಗಳಿಗೆ ಕಾರ್ಯನಿರ್ವಹಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೈಂದೂರು ತಾ.ಪಂ.ಗೆ ಮಾತ್ರ ಪೂರ್ಣಕಾಲೀನ ಕಾರ್ಯ ನಿರ್ವಹಣಾಧಿಕಾರಿಯನ್ನು ನೇಮಿಸಲಾಗಿದ್ದರೆ ಉಳಿದಂತೆ ಕಾಪು, ಬ್ರಹ್ಮಾವರ, ಹೆಬ್ರಿ ತಾ.ಪಂ.ಗಳಿಗೆ ಹೆಚ್ಚುವರಿ ಪ್ರಭಾರವಾಗಿ ನಿಯೋಜನೆ ಮಾಡಲಾಗಿದೆ.
ಲೆಕ್ಕಾಧಿಕಾರಿಗಳು, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕರು, ತಾಲೂಕು ಯೋಜನಾಧಿಕಾರಿ, ಲೆಕ್ಕ ಅಧೀಕ್ಷಕರು, ಸಿಬಂದಿ ಇತ್ಯಾದಿ ಹುದ್ದೆಗಳನ್ನು ಸೃಜಿಸಲಾಗಿದೆ.
ನೂತನ ತಾ.ಪಂ. ಕಚೇರಿ, ಬಜೆಟ್ ಹಂಚಿಕೆ, ಖಜಾನೆ 2 ಅಸ್ತಿತ್ವ, ಕಚೇರಿ ನಾಮಫಲಕ ಇತ್ಯಾದಿಗಳನ್ನು ಎ. 1ರಿಂದ ಜಾರಿಗೊಳಿಸುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಇನ್ನು ಮುಂದೆ ಆಯಾ ತಾ.ಪಂ. ವ್ಯಾಪ್ತಿಯ ಗ್ರಾ. ಪಂ., ತಾ.ಪಂ. ಕ್ಷೇತ್ರಗಳು ಅದೇ ತಾ.ಪಂ.ನಡಿ ಕಾರ್ಯನಿರ್ವಹಿಸಲಿವೆ. ಹೊಸ ತಾ.ಪಂ.ಗಳಿಗೆ ತಾ.ಪಂ. ಕ್ಷೇತ್ರ ಗಳನ್ನು ವಿಂಗಡಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು ಅಲ್ಲಿಂದ ಅಧಿಕೃತ ಆದೇಶ ಬರಬೇಕಾಗಿದೆ. ಬಳಿಕ ಆಯಾ ತಾ.ಪಂ.ನಡಿ ಬರುವ ತಾ.ಪಂ. ಸದಸ್ಯರ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ ಮತ್ತು ಆ ಸದಸ್ಯರು ನೂತನ ತಾ.ಪಂ. ಅಧ್ಯಕ್ಷರನ್ನೂ ಆಯ್ಕೆ ಮಾಡಲಿದ್ದಾರೆ.
ಗ್ರಾ.ಪಂ.ಗಳ ಹಂಚಿಕೆ
ಎಲ್ಲ ತಾ.ಪಂ.ಗಳಿಗೆ ಹಿಂದಿನ ತಾ.ಪಂ.ಗಳಲ್ಲಿದ್ದ ತಾ.ಪಂ., ಗ್ರಾ.ಪಂ.ಗಳನ್ನು ಬೇರ್ಪಡಿಸಿ ಹಂಚಿಕೆ ಮಾಡಲಾಗಿದೆ. ಅದರಂತೆ ಉಡುಪಿ ತಾ.ಪಂ.ಗೆ 16, ಕಾಪುವಿಗೆ 16, ಕಾರ್ಕಳಕ್ಕೆ 27, ಕುಂದಾಪುರಕ್ಕೆ 47, ಬ್ರಹ್ಮಾವರಕ್ಕೆ 27, ಬೈಂದೂರಿಗೆ 18, ಹೆಬ್ರಿಗೆ 9 ಗ್ರಾ.ಪಂ.ಗಳು ಹಂಚಿಕೆಯಾಗಿವೆ. ಆದರೆ ಇದರಲ್ಲಿ ಬೈಂದೂರು ತಾಲೂಕಿನ ಕೇಂದ್ರದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ಅಸ್ತಿತ್ವಕ್ಕೆ ಬರುವ ಕಾರಣ ಆ ವ್ಯಾಪ್ತಿಯ ಬೈಂದೂರು, ಯಡ್ತರೆ, ಪಡುವರಿ ಈ ಮೂರು ಗ್ರಾ.ಪಂ.ಗಳು ಕಡಿಮೆಯಾಗಿ 15 ಗ್ರಾ.ಪಂ.ಗಳು ಮಾತ್ರ ಉಳಿದುಕೊಳ್ಳಲಿವೆ. ಇದೇ ರೀತಿ ಈಗ ಪ್ರಕ್ರಿಯೆಯಲ್ಲಿರುವ ಬ್ರಹ್ಮಾವರದ ಪುರಸಭೆ, ಹೆಬ್ರಿಯ ಪಟ್ಟಣ ಪಂಚಾಯತ್‌ಗಳು ಅಸ್ತಿತ್ವಕ್ಕೆ ಬಂದಲ್ಲಿ ಬ್ರಹ್ಮಾವರದಿಂದ ನಾಲ್ಕು ಗ್ರಾ.ಪಂ., ಹೆಬ್ರಿಯಲ್ಲಿ ಎರಡು ಗ್ರಾ.ಪಂ.ಗಳು ತಾ.ಪಂ. ವ್ಯಾಪ್ತಿಯ ಒಟ್ಟು ಗ್ರಾ.ಪಂ.ಗಳ ಲೆಕ್ಕದಿಂದ ಕಡಿಮೆಯಾಗಲಿವೆ.
ಹೊಸ ತಾ.ಪಂ. ಕ್ಷೇತ್ರಗಳ ಹಂಚಿಕೆ
ಹೊಸ ತಾ.ಪಂ.ಗಳಿಗೆ ತಾ.ಪಂ. ಕ್ಷೇತ್ರಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಿ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
ಕಾಪು ತಾ.ಪಂ.
ಕಾಪು ತಾ.ಪಂ.ನಲ್ಲಿ ಕಟಪಾಡಿ, ಕೋಟೆ, ಶಂಕರಪುರ, ಉಚ್ಚಿಲ, ಶಿರ್ವ, ಬೆಳ್ಳೆ, 108 ಕಳತ್ತೂರು, ಮುದರಂಗಡಿ, ಪಡುಬಿದ್ರಿ, ಹೆಜಮಾಡಿ, ಪಲಿಮಾರು, ಎಲ್ಲೂರು ಈ 12 ತಾ.ಪಂ. ಕ್ಷೇತ್ರಗಳಿವೆ.
ಉಡುಪಿ ತಾ.ಪಂ.
ಉಡುಪಿ ತಾಲೂಕು. ಪಂ.ನಲ್ಲಿ ಕಲ್ಯಾಣಪುರ, ತೆಂಕನಿಡಿಯೂರು, ತೋನ್ಸೆ, ನಿಡಂಬೂರು, ಕಡೆಕಾರು, ಅಲೆವೂರು, 80 ಬಡಗಬೆಟ್ಟು, ಮಣಿಪುರ, ಅಂಜಾರು, ಹಿರಿಯಡಕ, ಪೆರ್ಡೂರು, ಭೈರಂಪಳ್ಳಿ, ಉದ್ಯಾವರ ಈ 13 ತಾ.ಪಂ. ಕ್ಷೇತ್ರಗಳು ಉಳಿದು ಕೊಳ್ಳಲಿವೆ.
ಬೈಂದೂರು ತಾ.ಪಂ.
ಬೈಂದೂರು ತಾ.ಪಂ.ನಲ್ಲಿ ಶಿರೂರು 1, ಶಿರೂರು 2, ಉಪ್ಪುಂದ, ಬಿಜೂರು, ಕೊಲ್ಲೂರು, ಕಾಲೊ¤àಡು, ಖಂಬದಕೋಣೆ, ಕಿರಿಮಂಜೇಶ್ವರ, ಮರವಂತೆ, ನಾಡ, ಹಳ್ಳಿಹೊಳೆ ಈ 11 ತಾ.ಪಂ. ಕ್ಷೇತ್ರಗಳಿವೆ. ಈ ಪಟ್ಟಿಯಿಂದ ಈಗಾಗಲೇ ಇದ್ದ ಪಡುವರಿ, ಯಡ್ತರೆ, ಬೈಂದೂರು ತಾ.ಪಂ. ಕ್ಷೇತ್ರಗಳನ್ನು ಕೈಬಿಡಲಾಗಿದೆ. ಇಲ್ಲಿ ಪಟ್ಟಣ ಪಂಚಾಯತ್ ಅಸ್ತಿತ್ವಕ್ಕೆ ಬಂದ ಬಳಿಕ ತಾ.ಪಂ., ಜಿ.ಪಂ., ಗ್ರಾ.ಪಂ. ಚುನಾವಣೆಗಳು ನಡೆಯುವುದಿಲ್ಲ.
ಕುಂದಾಪುರ ತಾ.ಪಂ.
ಕುಂದಾಪುರ ತಾ.ಪಂ.ನಲ್ಲಿ ಆಲೂರು, ತ್ರಾಸಿ, ಗಂಗೊಳ್ಳಿ, ವಂಡ್ಸೆ, ಕರ್ಕುಂಜೆ, ಸಿದ್ದಾಪುರ, ಆಜ್ರಿ, ಕಾವ್ರಾಡಿ, ಹೆಮ್ಮಾಡಿ, ಶಂಕರ ನಾರಾಯಣ, ಬಸ್ರೂರು, ಕೋಣಿ, ಕೋಟೇಶ್ವರ, ಹಂಗಳೂರು, ಬೀಜಾಡಿ, ಕುಂಭಾಶಿ, ಬೇಳೂರು, ಕಾಳಾವರ, ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ, ಅಮಾಸೆಬೈಲು ಈ 22 ತಾ.ಪಂ. ಕ್ಷೇತ್ರಗಳು ಉಳಿದುಕೊಳ್ಳಲಿವೆ.
ಬ್ರಹ್ಮಾವರ ತಾ.ಪಂ.
ಬ್ರಹ್ಮಾವರ ತಾ.ಪಂ.ನಲ್ಲಿ ಚೇರ್ಕಾಡಿ, ನೀಲಾವರ, ಉಪ್ಪೂರು, ಚಾಂತಾರು, ವಾರಂಬಳ್ಳಿ, ಹಾರಾಡಿ, ಐರೋಡಿ, ಕಾಡೂರು, ಕೊಕ್ಕರ್ಣೆ, ನಾಲ್ಕೂರು, ಶಿರಿಯಾರ, ಮಣೂರು, ಕೋಟ, ಬಾರಕೂರು, ಮಂದಾರ್ತಿ, ಸಾೖಬ್ರಕಟ್ಟೆ ಈ 16 ತಾ.ಪಂ. ಕ್ಷೇತ್ರಗಳಿವೆ. ಬ್ರಹ್ಮಾವರದಲ್ಲಿ ಪುರಸಭೆ ಪ್ರಸ್ತಾವವಿರುವ ಕಾರಣ ಚಾಂತಾರು, ವಾರಂಬಳ್ಳಿ, ಹಾರಾಡಿ ಈ ಮೂರು ಕ್ಷೇತ್ರಗಳು ಲುಪ್ತವಾಗುವ ಸಾಧ್ಯತೆಗಳಿವೆ.
ಹೆಬ್ರಿ ತಾ.ಪಂ.
ಹೆಬ್ರಿ ತಾ.ಪಂ.ನಲ್ಲಿ ಚಾರ, ನಾಡ್ಪಾಲು, ಹೆಬ್ರಿ, ಮುದ್ರಾಡಿ, ವರಂಗ, ಬೆಳ್ವೆ ಈ ಆರು ತಾ.ಪಂ. ಕ್ಷೇತ್ರಗಳು ಬರಲಿವೆ. ಇದರಲ್ಲಿ ಬೆಳ್ವೆ ಕ್ಷೇತ್ರ ಕುಂದಾಪುರ ತಾಲೂಕು ವ್ಯಾಪ್ತಿಯಿಂದ ಹೆಬ್ರಿಗೆ ಬಂದಿದೆ. ಚಾರ ಮತ್ತು ಹೆಬ್ರಿ ಗ್ರಾ.ಪಂ.ಗಳನ್ನು ಸೇರಿಸಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವಿರುವುದರಿಂದ ಇವೆರಡು ತಾ.ಪಂ. ಕ್ಷೇತ್ರಗಳು ಲುಪ್ತಗೊಳ್ಳುವ ಸಾಧ್ಯತೆಗಳಿವೆ.
ಕಾರ್ಕಳ ತಾ.ಪಂ.
ಕಾರ್ಕಳ ತಾ.ಪಂ.ನಲ್ಲಿ ಮರ್ಣೆ, ಹಿರ್ಗಾನ, ಮಾಳ, ಮುಡಾರು, ನಲ್ಲೂರು, ಈದು, ಮಿಯ್ನಾರು, ಸಾಣೂರು, ಮುಂಡ್ಕೂರು, ಬೆಳ್ಮಣ್ಣು, ನಿಟ್ಟೆ, ಬೋಳ, ಕುಕ್ಕುಂದೂರು, ಎರ್ಲಪಾಡಿ, ಕಲ್ಯಾ ಈ 15 ತಾ.ಪಂ. ಕ್ಷೇತ್ರಗಳು ಉಳಿದುಕೊಳ್ಳಲಿವೆ.
ಸರಕಾರದ ನಿರ್ದೇಶಾನುಸಾರ ಎ. 1ರಿಂದ ಹೊಸ ತಾ.ಪಂ.ಗಳು ಕಾರ್ಯಾರಂಭ ಮಾಡಲಿವೆ. ಇದಕ್ಕಾಗಿ ಎಲ್ಲ ತಾ.ಪಂ.ಗಳಿಗೆ ಕಾರ್ಯನಿರ್ವಹಣಾಧಿಕಾರಿಗಳನ್ನು ನಿಯೋಜಿಸಲಾಗಿದೆ.
– ಕಿರಣ್ ಪೆಡ್ನೆಕರ್, ಉಪಕಾರ್ಯದರ್ಶಿಗಳು, ಜಿ.ಪಂ., ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಮತ್ತೆ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.