ರಾಮರಾಜ್ಯದಿಂದ ರಾಷ್ಟ್ರಕ್ಕೆ ಸುಭಿಕ್ಷೆ
Team Udayavani, Dec 28, 2018, 10:49 AM IST
ಉಡುಪಿ: ರಾಮರಾಜ್ಯದ ಆಡಳಿತ ಆದರ್ಶಪ್ರಾಯವಾದುದು. ಇದನ್ನು ಜಾರಿ ಗೊಳಿಸಿದರೆ ದೇಶ ಮತ್ತು ಜಗತ್ತಿಗೆ ಸುಭಿಕ್ಷೆಯಾಗಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.
ಶ್ರೀಕೃಷ್ಣ ಮಠಕ್ಕೆ ಗುರುವಾರ ಭೇಟಿ ನೀಡಿ ದೇವರ ದರ್ಶನದ ಬಳಿಕ ಪರ್ಯಾಯ ಶ್ರೀ ಪಲಿಮಾರು ಮಠದಿಂದ ಗೌರವ ಸ್ವೀಕರಿಸಿ ಮತ್ತು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಗೌರವ ಸಲ್ಲಿಸಿ ಮಾತನಾಡಿದರು.
ಆದರ್ಶ ಆಡಳಿತವಾದ ರಾಮ ರಾಜ್ಯದ ನೀತಿಯು ಪ್ರಜೆಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕು ಮತ್ತು ಹೇಗೆ ಆಡಳಿತ ನಡೆಸಬೇಕು ಎಂಬುದಕ್ಕೆ ಮಾದರಿ. ಈ ಆದರ್ಶವನ್ನು ಪಾಲಿಸಿದರೆ ಜಗತ್ತು ಸುಖೀಯಾಗಿ ಇರಬಲ್ಲದು ಎಂದರು. ಶ್ರೀಕೃಷ್ಣ ದರ್ಶನಕ್ಕೆ ಆಹ್ವಾನಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ರಾಷ್ಟ್ರಪತಿಗಳು, ಇದು ಸೌಭಾಗ್ಯದ ಕ್ಷಣ ಎಂದು ಬಣ್ಣಿಸಿದರು.
ಉಡುಪಿ ಸಂಗಮ ಕ್ಷೇತ್ರ
ರಾಷ್ಟ್ರಪತಿಗಳನ್ನು ಶ್ರೀಕೃಷ್ಣನ ಸುಮಾರು ಒಂದೂವರೆ ಅಡಿ ಎತ್ತರದ ಪಂಚಲೋಹದ ಪ್ರತಿಮೆ, ಶಾಲು, ಹಾರದೊಂದಿಗೆ ಸಮ್ಮಾ ನಿಸಿದ ಪರ್ಯಾಯ ಶ್ರೀ ಪಲಿಮಾರು ಸ್ವಾಮೀಜಿಯವರು, ಉತ್ತರದಲ್ಲಿ ಹಲವು ದಕ್ಷಿಣದಲ್ಲಿ ಹಲವು ನದಿಗಳು ಹರಿಯುತ್ತಿವೆ, ಏತನ್ಮಧ್ಯೆ ಉಡುಪಿ ಉತ್ತರ-ದಕ್ಷಿಣಗಳನ್ನು ಜೋಡಿಸುವ ಸಂಗಮ ಕ್ಷೇತ್ರವಾಗಿದೆ ಎಂದರು. ರಾಷ್ಟ್ರಪತಿಯವರ ಆಗಮನಕ್ಕೆ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ರಾಷ್ಟ್ರಪತಿಯವರು ಪರ್ಯಾಯ ಸ್ವಾಮೀಜಿಯವರನ್ನು ಶಾಲು ಹೊದೆಸಿ ಗೌರವಿಸಿದರು. ಶ್ರೀ ಪೇಜಾವರ ಹಿರಿಯ, ಕಿರಿಯ, ಶ್ರೀ ಕಾಣಿಯೂರು, ಶ್ರೀ ಸೋದೆ, ಶ್ರೀಅದಮಾರು ಕಿರಿಯ ಸ್ವಾಮೀಜಿಯವರು ಉಪಸ್ಥಿತರಿದ್ದರು. ವಾದ್ಯಘೋಷ, ವೇದ ಘೋಷಗಳೊಂದಿಗೆ ರಾಷ್ಟ್ರಪತಿ ದಂಪತಿಯವರನ್ನು ಸ್ವಾಗತಿಸಲಾಯಿತು. ಪಲಿಮಾರು ಶ್ರೀಗಳು ರಾಮರಾಜ್ಯದ ಆಡಳಿತವನ್ನು ಉಲ್ಲೇಖೀಸಿ ದೇಶದಲ್ಲಿ ಅಂತಹ ಆಡಳಿತ ಬರಲಿ ಎಂದರು.
ರಾಷ್ಟ್ರಪತಿ ಭವನಕ್ಕೆ ಆಹ್ವಾನ
ಪೇಜಾವರ ಶ್ರೀಗಳು ಈ ಇಳಿ ವಯಸ್ಸಿನಲ್ಲಿಯೂ ವೀಲ್ ಚೆಯರ್ ಸಹಾಯವಿಲ್ಲದೆ ಓಡಾಡುತ್ತಾರೆಯೇ ಎಂದು ಸಹಾಯಕರನ್ನು ಕೇಳಿದ ರಾಷ್ಟ್ರಪತಿಯವರು, ಶ್ರೀಗಳನ್ನು ರಾಷ್ಟ್ರಪತಿ ಭವನಕ್ಕೆ ಬರುವಂತೆ ಆಹ್ವಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.