ಪಾಂಚಜನ್ಯ ಮೊಳಗಿಸಿದ ಮೋದಿ ಮತ್ತೆ ಉಡುಪಿಯತ್ತ…
Team Udayavani, Apr 30, 2018, 10:59 AM IST
ಉಡುಪಿ: ಹಿಂದಿನೆರಡು ಚುನಾವಣೆಗಳಲ್ಲಿ ಉಡುಪಿಗೆ ಆಗಮಿಸಿದ್ದ ಮೋದಿ ಈಗ ಮತ್ತೆ ಆಗಮಿಸುತ್ತಿದ್ದಾರೆ. 2004 ಮತ್ತು 2008ರ ಚುನಾವಣೆಯಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆಗ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ್ದರು. ಆ ಎರಡೂ ಬಾರಿ ರಘುಪತಿ ಭಟ್ ಗೆದ್ದಿದ್ದರು. ಈಗಲೂ ಅವರೇ ಬಿಜೆಪಿ ಅಭ್ಯರ್ಥಿ, ಮೋದಿ ಮಾತ್ರ ಪ್ರಧಾನಿ.
2004ರಲ್ಲಿ ಬಂದಾಗ ಚಿತ್ತರಂಜನ್ ಸರ್ಕಲ್‌ನಲ್ಲಿ ಮಧ್ಯಾಹ್ನದ ಸಭೆಯಲ್ಲಿ ಮೋದಿ ಪಾಲ್ಗೊಂಡಿದ್ದರೆ, 2008ರಲ್ಲಿ ಮಲ್ಪೆಯ ಕಡಲ ತೀರದಲ್ಲಿ ಮುಸ್ಸಂಜೆ ಪ್ರಚಾರ ನಡೆಸಿದ್ದರು.
ವೇದಿಕೆಯನ್ನೇ ಹೊತ್ತರು
ಮಲ್ಪೆಯಲ್ಲಿ 80×60 ಅಡಿಯ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಕೇಂದ್ರದಿಂದ ಹಿಂದಿನ ದಿನ ರಾತ್ರಿ
ಬಂದ ತಂಡ ಭದ್ರತೆ ದೃಷ್ಟಿಯಿಂದ ಇದರಲ್ಲಿ ಸಭೆ ನಡೆಸಲು ಆಗುವುದಿಲ್ಲ ಎಂದು ತಿಳಿಸಿತು. ಇಡೀ ವೇದಿಕೆಯನ್ನು ಸ್ಥಳಾಂತರಿಸಬೇಕಿತ್ತು. ವೇದಿಕೆ ನಿರ್ಮಿಸಿದವರು ಇದು ಆಗದ ಕೆಲಸ ಎಂದಾಗ 300 ಮೊಗವೀರ ಯುವಕರು ಸೇರಿ ಹೊತ್ತು ಸ್ಥಳಾಂತರಿಸಿದರು.
ಸೂರ್ಯ ಮುಳುಗುವ ಹಾಗೆ…
“ಆಗ ಮುಸ್ಸಂಜೆ. ಸೂರ್ಯ ಮುಳುಗುವ ಹಾಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತದೆ ಎಂದು ಮೋದೀಜಿ
ಹೇಳಿದ್ದರು. ಈಗಲೂ ಅದೇ ಲಕ್ಷಣ ಕಾಣುತ್ತಿದೆ. ಮೋದಿ ಆಗ ಮುಖ್ಯ ಮಂತ್ರಿ, ಈಗ ಪ್ರಧಾನಿ’ ಎಂದು ನೆನಪಿಸಿಕೊಳ್ಳುತ್ತಾರೆ ರಘುಪತಿ ಭಟ್.
ಉಡುಪಿ ಶಂಖ ಗುಜರಾತ್‌ನಲ್ಲಿ
ಮಲ್ಪೆ ಕಾರ್ಯಕ್ರಮಕ್ಕೆ ಪಾಂಚಜನ್ಯವನ್ನು ತಂದುಕೊಟ್ಟವರು ನಗರ ಬಿಜೆಪಿ ಅಧ್ಯಕ್ಷರಾಗಿದ್ದ ಕೆ. ರಾಘವೇಂದ್ರ ಕಿಣಿ. ಭದ್ರತಾ ಸಿಬಂದಿ ಆ ಶಂಖವನ್ನು ಕೊಂಡೊಯ್ದರು. ಶಂಖ ಮರಳಿ ಪಡೆಯಲು ಕಿಣಿ ಅವರು ಪ್ರಯತ್ನಿಸಿದರೂ ಸಫಲವಾಗಲಿಲ್ಲ. 2010ರಲ್ಲಿ ಅವರು ಗುಜರಾತ್‌ಗೆ ಹೋದಾಗ ಹೊಸ ವಿಷಯ ತಿಳಿಯಿತು. ಪ್ರತಿ ವಿಜಯದಶಮಿಯಂದು ನರೇಂದ್ರ ಮೋದಿ ದೇಶಾದ್ಯಂತ ಬಂದ ಉಡುಗೊರೆಗಳನ್ನು ಏಲಂ ಹಾಕಿ ಬಂದ ಹಣವನ್ನು ಕ್ಯಾನ್ಸರ್‌ಪೀಡಿತರು, ರೋಗಿಗಳಿಗೆ ಬಳಸುತ್ತಾರೆ. “ಈ ಶಂಖವನ್ನೂ ಒಬ್ಬರು ಏಲಂನಲ್ಲಿ ಖರೀದಿಸಿದ್ದು ತಿಳಿದು ತೃಪ್ತಿಯಾಯಿತು. ಎಂದು ರಾಘವೇಂದ್ರ ಕಿಣಿ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.