ಸೀಮಿತ ಸಂಖ್ಯೆಯಲ್ಲಿ ಖಾಸಗಿ ಬಸ್ ಸಂಚಾರ
Team Udayavani, Jul 2, 2021, 5:10 AM IST
ಉಡುಪಿ: ಜಿಲ್ಲಾದ್ಯಂತ ಗುರುವಾರದಿಂದ ಖಾಸಗಿ ಬಸ್‌ಗಳು ಸೀಮಿತ ಸಂಖ್ಯೆಯಲ್ಲಿ ಪ್ರಯಾಣ ಮಾಡಿದವು. ಮೊದಲ ದಿನವಾದ ಕಾರಣ ಪ್ರಯಾಣಿಕರ ಕೊರತೆ ಕಂಡುಬಂತು.
ಬಸ್‌ಗಳಲ್ಲಿ ಕೋವಿಡ್ ನಿಯಮಾವಳಿಗಳನ್ನೆಲ್ಲ ಪಾಲಿಸಲಾಗಿತ್ತು. ಆದರೆ ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಈ ಹಿಂದಿನಂತೆಯೇ ದರವನ್ನು ನಿಗದಿಪಡಿಸಲಾಗಿತ್ತು.
ಬಸ್ ಸಂಚರಿಸಿದ ಮಾರ್ಗಗಳು:
ಮಲ್ಪೆ, ತೊಟ್ಟಂ, ಹೂಡೆ ಭಾಗಗಳಿಗೆ 4, ಕೆಮ್ಮಣ್ಣು-ಹೂಡೆ ಭಾಗಕ್ಕೆ 2, ಮಣಿಪಾಲ, ಆತ್ರಾಡಿ, ಪರ್ಕಳ ಭಾಗಕ್ಕೆ 2, ಅಲೆವೂರು-ಮೂಡುಬೆಳ್ಳೆ ಮಾರ್ಗಕ್ಕೆ 1 ಸಿಟಿ ಬಸ್‌ಗಳು ಸಂಚರಿಸಿದವು. ಮಣಿಪಾಲ- ಉಡುಪಿ- ಮಂಗಳೂರು-ಕುಂದಾಪುರ-ಹೆಬ್ರಿ ಭಾಗಗಳಿಗೆ ಒಟ್ಟು 23 ಎಕ್ಸ್‌ಪ್ರೆಸ್ ಬಸ್‌ಗಳು ಸಂಚರಿಸಿದವು. ಹಾಗೆಯೇ ಕಾಪು- ಪಡುಬಿದ್ರಿ- ಮೂಲ್ಕಿ- ಶಂಕರಪುರ- ಮಂಚಕಲ್- ಕಾರ್ಕಳ ಭಾಗಗಳಿಗೆ ಉಡುಪಿಯಿಂದ 5 ಬಸ್‌ಗಳು ಸಂಚರಿಸಿದವು.
ಪ್ರಯಾಣಿಕರು ಕಡಿಮೆ:
ಗುರುವಾರದಿಂದ ಬಸ್ ಸಂಚಾರ ಆರಂಭಗೊಂಡರೂ ಪ್ರಯಾಣಿಕರ ಸಂಖ್ಯೆ ವಿರ ಳವಾಗಿತ್ತು. ಬೆಳಗ್ಗೆ ಹಾಗೂ ಸಂಜೆ ವೇಳೆ ಬಿಟ್ಟರೆ ಉಳಿದಂತೆ ಬಸ್‌ಗಳಲ್ಲಿ ಪ್ರಯಾಣಿಕರೇ ಇರಲಿಲ್ಲ. ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಹಂತ-ಹಂತವಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ವಾಹನ ಮಾಲಕರದ್ದು.
ಶನಿವಾರ, ರವಿವಾರ ಬಸ್ ಓಡಾಟ ಅನುಮಾನ :
ಜಿಲ್ಲಾದ್ಯಂತ ಜು.5ರ ವರೆಗೆ ಲಾಕ್‌ಡೌನ್, ರಾತ್ರಿ ಕರ್ಫ್ಯೂ ಇರುವುದರಿಂದ ಶನಿವಾರ ಹಾಗೂ ರವಿವಾರ ಜನರ ಓಡಾಟ ಕಡಿಮೆ ಇರುತ್ತದೆ. ಈ ದಿನದಂದು ಬಸ್‌ಗಳನ್ನು ಓಡಿಸುವ ಬಗ್ಗೆ ಮಾಲಕರು ಇದುವರೆಗೂ ತೀರ್ಮಾನಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸಲಾಗುವುದು ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.