ಅಯೋಧ್ಯೆ ಭೂಮಿ ವಾಪಸ್: ಮುತಾಲಿಕ್ ವಿಶ್ವಾಸ
Team Udayavani, Oct 7, 2019, 6:30 AM IST
ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನೂರಕ್ಕೆ ನೂರು ವಿಶ್ವಾಸ ಇದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ರವಿವಾರ ನಡೆದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದತ್ತಮಾಲಾ ಕಾರ್ಯಕ್ರಮದಲ್ಲಿ 5 ಸಾವಿರ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಶೋಭಾಯಾತ್ರೆ, ಧರ್ಮಸಭೆ, ದತ್ತಹೋಮ, ಗಣಹೋಮ ನಡೆಯಲಿದೆ.
1990ರ ಗಲಭೆಯಲ್ಲಿ ಜಮ್ಮುಕಾಶ್ಮೀರದಿಂದ ಓಡಿ ಬಂದ ರಾಹುಲ್ ಕೌಲ್ ಭಾಗವಹಿಸಿ ರಾಜ್ಯದಲ್ಲಿ 370ನೇ ವಿಧಿ ರದ್ದು ಮಾಡಿರುವುದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಲಿ¨ªಾರೆ ಎಂದರು.
ದಸರಾ ವೇದಿಕೆಯಲ್ಲಿ ಚಂದನ್ -ನಿವೇದಿತಾ ಪ್ರೇಮ ನಿವೇದನೆಯ ಕುರಿತು ಪ್ರತಿಕ್ರಿಯಿಸಿ, ಸರಕಾರಿ ವೇದಿಕೆಯಲ್ಲಿ ಪ್ರಸ್ತಾವ ಮಾಡಬಾರದೆಂಬ ನಿಯಮ ಎಲ್ಲಿದೆ ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳು ನೆರೆ ಪರಿಹಾರ ತರಿಸುವಲ್ಲಿ ಪೂರ್ಣ ಶ್ರಮಿಸಿ¨ªಾರೆ. ಕೇಂದ್ರ ಸರಕಾರ ಈಗ ನೀಡಿರುವ 1,200 ಕೋ.ರೂ. ಪರಿಹಾರ ಸಾಕಾಗದು. ಮುಂದೆ
ಒಳ್ಳೆದಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಸೂಲಿಬೆಲೆಗೆ ದೇಶದ್ರೋಹಿ ಪಟ್ಟ ತಪ್ಪು ಚಕ್ರವರ್ತಿ ಸೂಲಿಬೆಲೆಯನ್ನು ದೇಶದ್ರೋಹಿ ಅಂದದ್ದು ತಪ್ಪು. ಅವರಿಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದೆ. ಅವರನ್ನು ನಾನು ಬೆಂಬಲಿಸುತ್ತೇನೆ. ಸಂಘ ಪರಿವಾರ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಬೇಕುಎಂದು ಮುತಾಲಿಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.