ಕೊಲ್ಲೂರಿನಲ್ಲಿ ಬರಿದಾದ ವಸತಿ ಗೃಹಗಳು
Team Udayavani, Mar 19, 2020, 5:34 AM IST
ಕೊಲ್ಲೂರು: ಸರಳ ರೀತಿಯಲ್ಲಿ ವಿರಳ ಭಕ್ತರ ನಡುವೆ ನಡೆದ ರಥೋತ್ಸವದ ಆನಂತರ ಇದೀಗ ಬುಧವಾರದಂದು ಇನ್ನಷ್ಟು ಕುಂದಿದ್ದು ಬೆರಳೆಣಿಕೆಯ ಮಂದಿಯ ಸಮಕ್ಷಮದಲ್ಲಿ ತೆಪ್ಪೋತ್ಸವಕ್ಕೆ ಅಣಿಯಾಗಿದೆ.
ಸರಕಾರದ ಆದೇಶದಂತೆ ಉತ್ಸವದ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ರದ್ದುಗೊಂಡಿತ್ತು. ಭಕ್ತರ ಮೇಲೆ ನಿರ್ಬಂಧ ಹೇರಲಾಗಿದ್ದರಿಂದ ಅನೇಕ ಭಕ್ತರು ಕೊಲ್ಲೂರು ಕ್ಷೇತ್ರ ದರ್ಶನ ಮೊಟಕುಗೊಳಿಸಿದ್ದರು.
ಯಾತ್ರಾರ್ಥಿಗಳೇ ಬರುತ್ತಿಲ್ಲ!
ಯಾತ್ರಾರ್ಥಿಗಳ ಸಂಖ್ಯೆ ಕಡಿಮೆ ಯಾಗಿರುವುದರಿಂದ ಅನೇಕ ಖಾಸಗಿ ವಸತಿ ಗೃಹಗಳ ಮಾಲಕರು ತಾತ್ಕಾಲಿಕ ನೆಲೆಯಲ್ಲಿ ಕೊರೊನಾ ವೈರಸ್ ಭೀತಿ ಕಡಿಮೆಯಾಗುವ ತನಕ ಮುಚ್ಚಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.
ಮಾರಣಕಟ್ಟೆ: ವಿಶೇಷ ಪೂಜೆಗಳು ತಾತ್ಕಾಲಿಕ ರದ್ದು
ಮಾರಣಕಟ್ಟೆ : ಸರಕಾರದ ನಿರ್ದೇಶನದಂತೆ ಮಾ. 19ರಿಂದ ಮುಂದಿನ ನಿರ್ದೇಶನದ ತನಕ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಸೇವಾ ರೂಪದ ಪೂಜೆ ನಡೆಯುವುದಿಲ್ಲ ಹಾಗೂ ಪ್ರತಿದಿನ ನಡೆಯುವ ಅನ್ನ ಸಂತರ್ಪಣೆ ಸೇವೆಯನ್ನು ಕೂಡ ರದ್ದು ಮಾಡಲಾಗಿದೆ. ದೇವರ ಪ್ರಸಾದ ತೀರ್ಥ ವಿತರಣೆ ಮತ್ತು ಹಣ್ಣು ಕಾಯಿ ಸೇವೆಯನ್ನು ಮುಂದಿನ ಆದೇಶ ದವರೆಗೆ ನಿಲ್ಲಿಸ ಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.