ಕಬ್ಬಿನಾಲೆ: ಕೊಂಕಣಾರಬೆಟ್ಟು ಶಾಲಾ ಕಾಂಪೌಂಡ್ ಕುಸಿತ
ಖಾಸಗಿ ಪೈಪ್ ಲೈನ್ ಅವಾಂತರ
Team Udayavani, Jul 30, 2019, 5:29 AM IST
ಹೆಬ್ರಿ: ಕಬ್ಬಿನಾಲೆ ಗ್ರಾಮದಲ್ಲಿ ಖಾಸಗಿ ಮೊಬೈಲ್ ಕಂಪೆನಿಯ ಪೈಪ್‌ಲೈನ್ ಕಾಮಗಾರಿ ಸಂದರ್ಭ ಶಾಲಾ ಕಾಂಪೌಂಡಿನ ಹತ್ತಿರದಲ್ಲೇ ಭಾರೀ ಆಳದ ಅಗೆತ ಮಾಡಿದ ಪರಿಣಾಮ ಕೊಂಕಣಾರಬೆಟ್ಟು ಶಾಲಾ ಕಾಂಪೌಂಡ್ ಸಂಪೂರ್ಣ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಂಪೆನಿಯ ನಿರ್ಲಕ್ಷ
ಶಾಲೆಯ ಆವರಣಗೋಡೆಯ ಸಮೀಪ ಹೊಂಡಗಳನ್ನು ಮಾಡುತ್ತಿರುವಾಗಲೇ ಗೋಡೆ ಸ್ವಲ್ಪ ಕುಸಿತಕಂಡಿದ್ದು ಗ್ರಾಮಸ್ಥರ ಒತ್ತಾಯದ ಮೇರೆಗೆ ಕಲ್ಲನ್ನು ಹಾಕಿ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಆದರೆ ಮತ್ತೆ ಅಲ್ಲಿಯೇ ಹೊಂಡಗಳನ್ನು ತೋಡಿದ್ದರಿಂದ ಕಾಂಪೌಂಡ್ ಮತ್ತೆ ಸಂಪೂರ್ಣ ಕುಸಿತಗೊಂಡಿದೆ. ಘಟನೆ ನಡೆದು ಹಲವು ದಿನಗಳು ಕಳೆದರೂ ಖಾಸಗಿ ಕಂಪೆನಿಯಾಗಲಿ, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತವಾಗಲಿ ದುರಸ್ತಿಗೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯ ಬದಿಯಲ್ಲಿ ಶಾಲೆ ಇರುವುದರಿಂದ ನಿತ್ಯ ವಾಹನ ಸಂಚಾರದಿಂದ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಊರಿನವರು ಶ್ರಮದಾನದಿಂದ ಈ ಶಾಲೆಗೆ ಅಗಲವಾದ ಮೈದಾನ ಹಾಗೂ ಕಂಪೌಂಡ್ ನಿರ್ಮಾಣ ಮಾಡಿದ್ದರು.
ದುರಸ್ತಿಗಾಗಿ ಶಾಲೆಯಿಂದ ಮನವಿ
ಕಾಂಪೌಂಡ್ ದುರಸ್ತಿಗಾಗಿ ಶಾಲೆಯಿಂದ ಪಂಚಾಯತ್‌ಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆದರೆ ಅದರ ದುರಸ್ತಿಗೆ ಬೇಕಾಗುವಷ್ಟು ಅನುದಾನ ಪಂಚಾಯತ್‌ನಿಂದ ಲಭ್ಯವಿಲ್ಲದ ಕಾರಣ ಪ್ರಕೃತಿ ವಿಕೋಪದ ಅಡಿಯಲ್ಲಿಯೇ ದುರಸ್ತಿ ಮಾಡಬೇಕಾಗುತ್ತದೆ.
-ಶಶಿಕಲಾ ಡಿ. ಪೂಜಾರಿ, ಅಧ್ಯಕ್ಷರು ಗ್ರಾ.ಪಂ. ಮುದ್ರಾಡಿ
ಬೇಜವಾಬ್ದಾರಿಯಿಂದ ಕಾಂಪೌಂಡ್ ಕುಸಿತ
ಖಾಸಗಿ ಕಂಪೆನಿಯವರು ಶಾಲಾ ಕಾಂಪೌಂಡ್‌ನ ಹತ್ತಿರದಲ್ಲೇ ಅಗೆತ ಮಾಡುತ್ತಾರೆ ಎಂದು ಗೊತ್ತಿದ್ದರೂ ಶಾಲಾ ಸಿಬಂದಿ, ಶಿಕ್ಷಣ ಇಲಾಖೆ, ಸ್ಥಳೀಯ ಜನಪ್ರತಿನಿಧಿ, ಸ್ಥಳೀಯ ಪಂಚಾಯತ್‌ಗಳಾಗಲೀ ಈ ಬಗ್ಗೆ ಮುತುವರ್ಜಿ ವಹಿಸಿ ಕಾಂಪೌಂಡ್‌ನಿಂದ ಸ್ವಲ್ಪ ದೂರದಲ್ಲಿ ಅಗೆಯುವಂತೆ ವಿನಂತಿಸಿದ್ದರೆ ಹೀಗಾಗುತ್ತಿರಲಿಲ್ಲ. ಸ್ಥಳೀಯ ಸಂಸ್ಥೆ ಹಾಗೂ ಮುಖಂಡರ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ.
-ಶ್ರೀಕರ ಭಾರಧ್ವಜ್ ಕಬ್ಬಿನಾಲೆ,
ಸಾಮಾಜಿಕ ಕಾರ್ಯಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.