ವಿಕಲ ಚೇತನರಿಗೆ ಉದ್ಯೋಗ ಅವಕಾಶ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಭರವಸೆ
Team Udayavani, Aug 3, 2017, 6:15 AM IST
ಉಡುಪಿ: ವಿಕಲ ಚೇತನ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅವರಿಗೆ ಉದ್ಯೋಗ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಅವರು ಆ. 2ರಂದು ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಎಂಜಿನಿಯರ್ ಇಂಡಿಯಾ ಲಿಮಿಟೆಡ್ ಅವರ ಸಿಎಸ್‌ಆರ್ ಯೋಜನೆಯಡಿ ಅಲಿಮೊRà ಬೆಂಗಳೂರು, ಜಿಲ್ಲಾಡಳಿತ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಇವರ ಸಹಕಾರದೊಂದಿಗೆ ಜಿಲ್ಲೆಯ ಅರ್ಹ 371 ಸಂತ್ರಸ್ತರಿಗೆ 40 ಲಕ್ಷ ರೂಪಾಯಿ ಮೌಲದ್ಯ ವಿವಿಧ ಸಲಕರಣೆಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕಿಗೆ ಬಹುದೊಡ್ಡ ಆಶಾಕಿರಣ
ವಿಕಲಚೇತನರಿಗಾಗಿ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿರುವ ವೆಲ್ಲೂರು ಶ್ರೀನಿವಾಸ್ ಅವರು ಹೊಸ ಯೋಜನೆಯೊಂದನ್ನು ಮುಂದಿಟ್ಟಿದ್ದಾರೆ. ಇದರಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ವಿಂಗಡಿಸಲು ಅಗಾಧವಾದ ಮಾನವ ಸಂಪನ್ಮೂಲದ ಅಗತ್ಯವಿದ್ದು, ಅದಕ್ಕೆ ವಿಕಲಚೇತನರನ್ನು ಉಪಯೋಗಿಸಿಕೊಳ್ಳುವ ಇರಾದೆ ಇದೆ. ಕುಳಿತಲ್ಲಿಯೇ ಸುಲಭವಾಗಿ ಕೆಲಸ ಮಾಡಬಹುದಾದ ಈ ಉದ್ಯೋಗ ವಿಕಲಚೇತನರ ಬದುಕಿಗೆ ಬಹುದೊಡ್ಡ ಆಶಾಕಿರಣವಾಗಲಿದೆ. ಉದ್ಯೋಗದಲ್ಲಿ ಆಸಕ್ತಿ ಇರುವ ವಿಕಲಚೇತನರು ಅರ್ಜಿಯನ್ನು ಸಲ್ಲಿಸಬೇಕೆಂದು ಎಂದು ಅವರು ಹೇಳಿದರು.
ಅಲಿಮೊRàದ ಘಟಕದ ಮುಖ್ಯಸ್ಥ ಅನುಪಮ್ ಪ್ರಕಾಶ್ ಶಿಖರೋಪನ್ಯಾಸ ನೀಡಿದರು. ಇಐಎಲ್‌ನ ವಿಜಯ ಶಾಸಿŒ, ಕೆ. ಸ್ವಾಮಿನಾಥನ್, ಐಆರ್‌ಸಿಎಸ್ ರಾಜ್ಯ ಸಭಾಪತಿ ಬಸೂÅರು ರಾಜೀವ ಶೆಟ್ಟಿ, ಉಡುಪಿ ಘಟಕದ ಸಭಾಪತಿ ಡಾ| ಉಮೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಐಆರ್‌ಸಿಎಸ್ ಉಡುಪಿ ಘಟಕದ ಜತೆ ಕಾರ್ಯದರ್ಶಿ ಜಿ.ಸಿ. ಜನಾರ್ದನ್ ಸ್ವಾಗತಿಸಿ, ಡಿಡಿಡಬ್ಲೂಒನ ನಿರಂಜನ ಭಟ್ ವಂದಿಸಿದರು. ಡಿಡಿಆರ್‌ಸಿಯ ಸಂಯೋಜಕ ಸುಧೀಂದ್ರ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.