ಸಂಪರ್ಕ ಸೇತುವೆ ಇಲ್ಲದೆ ಸಮಸ್ಯೆ 


Team Udayavani, Aug 11, 2021, 3:50 AM IST

ಸಂಪರ್ಕ ಸೇತುವೆ ಇಲ್ಲದೆ ಸಮಸ್ಯೆ 

ಹೊಳೆ ದಾಟಿಸುವ ದೋಣಿ ನಿಂತು ಹಲವು ವರ್ಷವಾಯಿತು. ಸಂಪರ್ಕ ಸೇತುವೆಯೂ ನಿರ್ಮಾಣ ಆಗಿಲ್ಲ. ಊರೂರು ಸುತ್ತು ಬಳಸಿ ಹೋಗಬೇಕಾದ ದುಸ್ಥಿತಿ ಇಲ್ಲಿಯದ್ದು.  ಶೀಘ್ರ ಇಲ್ಲೊಂದು ಸಂಪರ್ಕ ಸೇತುವೆ ನಿರ್ಮಾಣವಾದರೆ ಇಲ್ಲಿನವರಿಗೆ ಹೆಚ್ಚಿನ ಅನುಕೂಲವಾದೀತು.

ಕಟಪಾಡಿ: ತುಳುನಾಡಿನ ರಾಜಧಾನಿಯಾಗಿ ಗುರುತಿಸಲ್ಪಟ್ಟಿದ್ದ‌ ಉದ್ಯಾವರ ಗ್ರಾಮದ  ಪಡುಕರೆ, ಕನಕೋಡ, ತೆಂಕೊಪ್ಲ  ಪ್ರದೇಶವು ಉದ್ಯಾವರ ಪೇಟೆಗೆ ಬಲು ದೂರದಲ್ಲಿದೆ. ಗ್ರಾಮಾಡಳಿತದ ಕೇಂದ್ರ ಬಿಂದುವಾಗಿರುವ ಪಂಚಾಯತನ್ನು ತಲುಪಲು ಸುಮಾರು ಹತ್ತು  ಕಿ.ಮೀ. ಸುತ್ತುಬಳಸಿ ತಲುಪಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದೆ.

420ಕ್ಕೂ ಅಧಿಕ ಮತದಾರರು:

ಇಲ್ಲಿ ಸುಮಾರು 600ರಷ್ಟು ಜನಸಂಖ್ಯೆ ಇದ್ದು, 114 ಮನೆಗಳಿವೆೆ. ಸುಮಾರು 420ಕ್ಕೂ ಮಿಕ್ಕಿದ ಮತದಾರರು ಇದ್ದಾರೆ. ಕುಡಿಯುವ ನೀರಿನ ಮೂಲವನ್ನೇ ಹೊಂದಿರದ ಈ ಪ್ರದೇಶದ 97 ಮನೆಗಳಿಗೆ ಕುಡಿಯುವ ನಳ್ಳಿ ನೀರಿನ ಸಂಪರ್ಕವನ್ನು ಗ್ರಾ.ಪಂ. ಹೆಚ್ಚಿನ ನಿಗಾ ವಹಿಸಿ ಇಲ್ಲಿ ಹರಿಯುವ ಪಾಪನಾಶಿನಿ ಹೊಳೆಯ ಮೂಲಕ ಪೈಪ್‌ಲೈನ್‌ ಅಳವಡಿಸಿ  ವರ್ಷವಿಡೀ ಪೂರೈಸಬೇಕಾದ ಆವಶ್ಯಕತೆ ಹೊಂದಿದೆ. ಇಬ್ಬರು ವಾರ್ಡ್‌ ಸದಸ್ಯರನ್ನು ಹೊಂದಿದೆ.

ಮೀನುಗಾರಿಕೆಯೇ ಜೀವಾಳವಾಗಿರುವ ಈ ಪ್ರದೇಶವು ಪಂ. ವ್ಯಾಪ್ತಿಯಲ್ಲಿದ್ದರೂ ಪಂಚಾಯತ್‌ ಕಚೇರಿಯಿಂದ ದೂರ ಉಳಿದುಕೊಂಡು ಯಾವುದೇ ಅಗತ್ಯ ಸೌಲಭ್ಯಗಳ ಇಲ್ಲಗಳೇ ಇರುವ  ವಾರ್ಡ್‌ ನಂ. 13 ಪಡುಕರೆ, ಉದ್ಯಾವರ ಪಂಚಾಯತ್‌ನಲ್ಲಿದೆ. ಸಮರ್ಪಕ ಸಂಪರ್ಕವೇ ಇಲ್ಲದೆ  ಸವಲತ್ತುಗಳಿಗಾಗಿ ಪರದಾಟ ನಡೆಸುವ ಮೂಲಕ ಉದ್ಯಾವರ ಪಡುಕರೆ ಎಂಬ ಪ್ರದೇಶವು ಅತ್ತಲಿಂದ ಕಡಲು-ಇತ್ತಲಿಂದ ಪಾಪನಾಶಿನಿ ಹೊಳೆಯಿಂದ ಆವೃತವಾಗಿದ್ದು ನೇರ ಸಂಪರ್ಕವಿಲ್ಲದೆ ಅನಾಥ ಸ್ಥಿತಿಯಲ್ಲಿರುವಂತೆ ಕಂಡು ಬರುತ್ತಿದೆ.

ಗ್ರಾಮ ಕೇಂದ್ರದಿಂದ 10 ಕಿ.ಮೀ. ದೂರ  :

ಪಡುಕರೆ, ಕನಕೋಡ, ತೆಂಕೊಪ್ಲ  ಭಾಗದ ಗ್ರಾಮಸ್ಥರಿಗೆ ಯಾವುದೇ ಸರಕಾರಿ ಸವಲತ್ತುಗಳನ್ನು ಪಡೆಯಲು  ಉದ್ಯಾವರ ಗ್ರಾ.ಪಂ., ಮೆಸ್ಕಾಂ ಕಚೇರಿ, ಪಶುವೈದ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಿಕ್ಷಣ, ಶಾಲೆಗಳು, ಬ್ಯಾಂಕ್‌, ಅಂಚೆ ಕಚೇರಿ, ಸಹಿತ ಇತರ ಸರಕಾರಿ ಕಚೇರಿಗಳಿಗೆ ಸೌಲಭ್ಯ ಕ್ಕಾಗಿ ಉದ್ಯಾವರವನ್ನು ತಲುಪಲು  ಸುಮಾರು 10 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಾದ ಅನಿವಾರ್ಯ ಇದೆ.

ಇಲ್ಲಿನ ಗ್ರಾಮಸ್ಥರು ಕೋಟೆ ಗ್ರಾ.ಪಂ. ವ್ಯಾಪ್ತಿಯ  ಮಟ್ಟು ಸೇತುವೆಯ ಮೂಲಕ (ಲಘು ವಾಹನ ಬಳಕೆ ಮಾತ್ರ ಸಾಧ್ಯ) ಕಟಪಾಡಿ ಪೇಟೆಗೆ ತಲುಪಿ ಮತ್ತೆ ರಾಷ್ಟ್ರೀಯ ಹೆದ್ದಾರಿ 66ರ ಮೂಲಕವೇ ಉದ್ಯಾವರವನ್ನು  ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಮತ್ತೂಂದೆಡೆ ದೂರದ ಮಲ್ಪೆ ಭಾಗಕ್ಕೆ ಸಂಚರಿಸಬೇಕಾದರೆ ಕಿದಿಯೂರು, ಕಡೆಕಾರು ಭಾಗವಾಗಿ ಸುತ್ತುಬಳಸಿ ಕ್ರಮಿಸಬೇಕಾಗಿದೆ.

ಸೇತುವೆಯೇ ಪರಿಹಾರ :

ಈ ಮೊದಲು ಪಡುಕರೆ ಭಾಗದ ಸಂಪರ್ಕಕ್ಕೆ ದೋಣಿಯನ್ನು ಬಳಸಲಾಗುತ್ತಿದ್ದು ಮಳೆಗಾಲದಲ್ಲಿ ಗಾಳಿ ಮತ್ತು ಹೊಳೆಯ ಆಳವು ಅಪಾಯಕಾರಿಯಾಗಿದ್ದು  ಕಳೆದ ಸುಮಾರು 9 ವರ್ಷಗಳ ಹಿಂದೆಯೇ ಇದನ್ನು ನಿಲ್ಲಿಸಲಾಗಿದೆ. ಪಡುಕರೆ ಪ್ರದೇಶವನ್ನು  ಸುವ್ಯವಸ್ಥಿತಗೊಳಿಸಲು ಪಿತ್ರೋಡಿ-ಕಲಾೖಬೈಲು ಭಾಗದಿಂದ ಸುಮಾರು 300 ಮೀ.ನಷ್ಟು ಉದ್ದದ ಸುವ್ಯವಸ್ಥಿತ ಸಂಪರ್ಕ ಸೇತುವೆ ನಿರ್ಮಾಣವಾದಲ್ಲಿ  ಜ್ವಲಂತ  ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಲು ಸಾಧ್ಯ.  ಆಗ ಪಡುಕರೆಯು ಉದ್ಯಾವರಕ್ಕೆ ಬಹಳಷ್ಟು ಹತ್ತಿರವಾಗುತ್ತದೆ. ಇಲ್ಲಿನವರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.

ದರ್ಬಾರ್‌ ನಿಲ್ಲಿಸಿದ ಶಾಲೆ  :

ಈ ಭಾಗದಲ್ಲಿ ಯಾವುದೇ ಶಾಲೆಗಳು ಕಾರ್ಯಾಚರಿಸುತ್ತಿಲ್ಲ. ಇದ್ದ 1 ಸರಕಾರಿ ಹಿರಿಯ ಪ್ರಾಥಮಿಕ (ದರ್ಬಾರ್‌) ಶಾಲೆಯು ತನ್ನ  ದರ್ಬಾರನ್ನು ನಿಲ್ಲಿಸಿದೆ. ಇದೀಗ ಮತಗಟ್ಟೆ ಯಾಗಿ ಚುನಾವಣೆಯ ಸಂದರ್ಭ ಮಾತ್ರ ಬಳಕೆಯಾಗುತ್ತಿದೆ.

ಪ್ರವಾಸಿಗರಿಗೂ ಅನುಕೂಲ :

ಕಡಲ್ಕೊರೆತ, ನದಿ ಕೊರೆತ ಸಹಿತ ಇತರೇ ತುರ್ತು ಸಂದರ್ಭಗಳಲ್ಲಿ ಸುರಕ್ಷಾ ಕ್ರಮ ನಿರ್ವಹಣೆಗೆ ಸಂಪರ್ಕ ಸೇತುವೆ ನಿರ್ಮಾಣ ತೀರಾ ಆವಶ್ಯಕ. ಅಲ್ಲಿನ ಗ್ರಾಮಸ್ಥರಿಗೆ ತೊಂದರೆ ಆಗಬಾರದೆಂದು ಸಿಬಂದಿಯೇ ಮನೆಮನೆಗೆ ತೆರಳಿ ಮನೆ ತೆರಿಗೆ ಮತ್ತು ನೀರಿನ ತೆರಿಗೆ ಪಡೆಯಲಾಗುತ್ತದೆ. ಮೀನುಗಾರಿಕೆ ಅವಲಂಬಿತರು ಅಧಿಕವಾಗಿದ್ದು, ಸುತ್ತುಬಳಸಿ ಸಂಪರ್ಕಿಸುವ ಸ್ಥಿತಿ ಇದೆ. ನೇರ ಸಂಪರ್ಕ ಸೇತುವೆ ಆದಲ್ಲಿ ಗ್ರಾಮಸ್ಥರಿಗೂ, ಪ್ರವಾಸಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. -ರಾಜೇಶ್‌ ಶ್ರೀಯಾನ್‌, ಉದ್ಯಾವರ ಗ್ರಾ.ಪಂ. ಸದಸ್ಯ

 ಪ್ರವಾಸೋದ್ಯಮಕ್ಕೆ  ಹಿನ್ನಡೆ:

ಪಡುಕರೆ ಕಡಲ ಕಿನಾರೆಯು ಹೆಚ್ಚು ಆಕರ್ಷಿತವಾಗಿದ್ದು, ಈ ಭಾಗದಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಸಂಪರ್ಕ ಸೇತುವೆ  ನಿರ್ಮಾಣಗೊಂಡಲ್ಲಿ  ಕ್ರಮಿಸುವ ಹಾದಿ ಬಹಳಷ್ಟು ಸುಲಭ. ಆದರೆ ಮೂಲ ಸೌಕರ್ಯಗಳಿಲ್ಲದೆ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. -ಕೃಷ್ಣ ಜಿ. ಕೋಟ್ಯಾನ್‌,

 ಉದ್ಯಾವರ ಗ್ರಾ.ಪಂ. ಮಾಜಿ ಸದಸ್ಯ

 

-ವಿಜಯ ಆಚಾರ್ಯ, ಉಚ್ಚಿಲ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.