ಕುಂದಾಪುರ ತಾಲೂಕು ಪ್ರಗತಿ ಪರಿಶೀಲನ ಸಭೆ


Team Udayavani, Feb 28, 2017, 5:03 PM IST

parisheelana-sabhe.jpg

ಕುಂದಾಪುರ: ಕುಂದಾಪುರ ತಾಲೂಕು ಪ್ರಗತಿ ಪರಿಶೀಲನ ಸಭೆ ಫೆ. 27ರಂದು ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ  ಜರಗಿತು.

ಕೆಎಸ್ಸಾರ್‌ಟಿಸಿ ಇನ್ನಷ್ಟು  ಹೆಚ್ಚುವರಿ ಮಾರ್ಗದಲ್ಲಿ  ಬಸ್ಸು  ಸಂಚಾರ ಹಾಗೂ ಸಮಯ ಬದಲಾವಣೆಗೆ, ಹೆಚ್ಚು ಗ್ರಾಮಲೆಕ್ಕಿಗರ ನಿಯೋಜನೆಗೆ, ತೆರಿಗೆ ಪರಿಷ್ಕರಣೆ ಕುರಿತು ಮಾಹಿತಿ ನೀಡುವ ಕುರಿತು, ಆರೋಗ್ಯ ಕೇಂದ್ರಗಳ ಸಮಸ್ಯೆಗಳ ಕುರಿತು, ಬೈಂದೂರು ನೂತನ ಕೆಎಸ್ಸಾಆರ್‌ಟಿಸಿ ಬಸ್ಸು ನಿಲ್ದಾಣ ಹಾಗೂ ಡಿಪೋ ನಿರ್ಮಾಣ ಹಾಗೂ ಮರವಂತೆಯ ಕಡಲ್ಕೊರೆತದ ಬಗ್ಗೆ  ಸಭೆಯಲ್ಲಿ  ಚರ್ಚೆ ನಡೆಯಿತು.

ಕೆಎಸ್ಸಾರ್‌ಟಿಸಿ  ಬಸ್ಸು ಸಂಚಾರ ಸಮಸ್ಯೆ
ಬೈಂದೂರಿನ ಕೆರ್ಗಾಲ್‌ನಲ್ಲಿ  ಸರಕಾರಿ ಬಸ್ಸುಗಳನ್ನು  ನಿಲುಗಡೆಗೊಳಿಸಲಾಗುತ್ತಿಲ್ಲ  ಎಂದು ಜಿ.ಪಂ. ಸದಸ್ಯೆ ಗೌರಿ ದೇವಾಡಿಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದರೆ ಕುಂದಾಪುರ ಡಿಪೋ ಮೆನೇಜರ್‌ ಪ್ರಕಾರ ಬೆಳಗ್ಗೆ 4ರಿಂದ 5 ಬಸ್ಸುಗಳು ಕೆರ್ಗಾಲಿನಲ್ಲಿ ನಿಲುಗಡೆಗೊಳಿಸುತ್ತಾರೆ. ಇಲ್ಲಿ ನಿಲುಗಡೆಗೊಳಿಸದೇ ಇದ್ದಲ್ಲಿ ಪತ್ರಿಕಾ ಹೇಳಿಕೆ ನೀಡುವುದರ ಮೂಲಕ ಬಸ್ಸು  ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಪ್ರಸ್ತುತ ನಾಡದಲ್ಲಿ ಸಂಚರಿಸುತ್ತಿರುವ ಕೆಎಸ್ಸಾರ್‌ಟಿಸಿ ಬಸ್ಸು  ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ.  ಆದ್ದರಿಂದ ಆಲೂರು-ನಾಡ ಗುಡ್ಡೆಯಂಗಡಿ ಮಾರ್ಗದಲ್ಲಿ ಹೊಸ ಎರಡು ಬಸ್ಸುಗಳನ್ನು ಆರಂಭಿಸಬೇಕು  ಎಂದು ಬಾಬು ಹೆಗ್ಡೆ ಕೇಳಿಕೊಂಡರಲ್ಲದೇ,   ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಬಸ್ಸುಗಳು ಸಂಚರಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಸಮಯ ಬದಲಾಯಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಕುಂದಾಪುರದಿಂದ ಎಂ. ಕೋಡಿಗೆ ಸರಕಾರಿ ಬಸ್ಸುಗಳನ್ನು ಆರಂಭಿಸಬೇಕು ಎಂದು ಜಿ.ಪಂ.ಸದಸ್ಯೆ ಲಕ್ಷ್ಮೀ  ಮಂಜು ಬಿಲ್ಲವ ಕೇಳಿಕೊಂಡರು. ಸದಸ್ಯರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು ಆವಶ್ಯಕತೆ ಇರುವ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸದೇ  ಸರಿಯಾದ ಸಮಯ ಹಾಗೂ ಮಾರ್ಗಗಳನ್ನು ಹೊರತುಪಡಿಸಿ ಖಾಸಗಿಯವರಿಗೆ ಅನುಕೂಲಮಾಡಿಕೊಟ್ಟು  ಕೆ.ಎಸ್‌.ಆರ್‌.ಟಿ.ಸಿ. ನಷ್ಟವಾಗುವಂತೆಯಾಗುತ್ತಿದೆ. ಈ ನಿಟ್ಟಿನಲ್ಲಿ  ಜನರ ಬೇಡಿಕೆಯ ಮಾರ್ಗದಲ್ಲಿ ಹಾಗೂ ಹೆಚ್ಚು ಆದಾಯ ಬರುವ ಮಾರ್ಗದಲ್ಲಿ ಬಸ್ಸುಗಳನ್ನು ಬಿಡುವಂತೆ  ಅಧಿಕಾರಿಗಳು ಗಮನಹರಿಸಬೇಕು. ಈ ಬಗ್ಗೆ  ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರಲ್ಲದೇ ಹೆಮ್ಮಾಡಿಯನ್ನು ಕೇಂದ್ರವಾಗಿಟ್ಟುಕೊಂಡು ಸರಕಾರಿ ಬಸ್ಸುಗಳು ನಿಲುಗಡೆಯಾಗುವಂತೆ ಆಗಬೇಕು. ಹೆಮ್ಮಾಡಿಗೆ ಸುತ್ತಮುತ್ತಲಿನ ಪ್ರದೇಶಗಳಾದ ಕಟ್‌ಬೆಲೂ¤ರು, ವಂಡ್ಸೆ, ಕುಂದಬಾರಂದಾಡಿ , ಹಕ್ಲಾಡಿ ಮೊದಲಾದ ಪ್ರದೇಶಗಳಿಂದ ಅನೇಕ ಪ್ರಯಾಣಿಕರು ದೂರದ ಊರುಗಳಿಗೆ ಪ್ರಯಾಣಿಸಲು ಬರುತ್ತಾರೆ. ಆದ್ದರಿಂದ ಹೆಚ್ಚಿನ ಬಸ್ಸುಗಳನ್ನು  ಹೆಮ್ಮಾಡಿಯಲ್ಲಿ ನಿಲುಗಡೆಗೊಳಿಸಬೇಕು ಎಂದು ಸೂಚನೆ ನೀಡಿದರು.

ನಾಡಕ್ಕೆ ಬೆಂಗಳೂರು ಬಸ್ಸನ್ನು ಬಿಡುವಂತೆ ಕೆಎಸ್ಸಾಆರ್‌ಟಿಸಿ  ಅಧ್ಯಕ್ಷರು ಮನಸ್ಸು ಮಾಡಬೇಕು ಎಂದು  ತಾ.ಪಂ. ಉಪಾಧ್ಯಕ್ಷ ಪ್ರವೀಣ್‌ ಕುಮಾರ್‌ ಕಡೆR  ಕೇಳಿಕೊಂಡರು ಜಿ.ಪಂ. ಸದಸ್ಯ ಶಂಕರ ಪೂಜಾರಿ ಕಾಲ್ತಿಡು-ಖಂಬದಕೋಣೆೆಗೆ ಒಂದು ಬಸ್ಸಿನ ಆವಶ್ಯಕತೆ ಇದೆ  ಎಂದರು.

ತೆರಿಗೆ ಪರಿಷ್ಕರಣೆ ಹೆಚ್ಚಳ: ಮಾಹಿತಿಗೆ ಕೋರಿಕೆ 
ತೆರಿಗೆ ಪರಿಷ್ಕರಣೆ  ಮಾಡಲು ಕಾಯಿದೆ ಇದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸಭೆಯಲ್ಲಿ  ನಿರ್ಧಾರ ತೆಗೆದುಕೊಂಡು  ತೆರಿಗೆಯನ್ನು ನಿಗದಿಪಡಿಸಬೇಕು. ಆದರೆ ಯಾವುದೇ ಮಾಹಿತಿ ಇಲ್ಲದೇ ಆರು ಪಟ್ಟು ತೆರಿಗೆ ಹೆಚ್ಚಿಸಲಾಗಿದೆ ಇದಕ್ಕೆ ಕಾರಣಗಳೇನು, ಇದಕ್ಕೆ  ಮಾರ್ಗದರ್ಶನ ನೀಡಬೇಕಾಗಿತ್ತು ಎಂದು ಸದಸ್ಯ ಪ್ರಸನ್ನ  ಕುಮಾರ್‌ ಶೆಟ್ಟಿ ಆಗ್ರಹಿಸಿದರು. ಉತ್ತರಿಸಿದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮುಂದಿನ ಎಪ್ರಿಲ್‌ನಿಂದ ಈ ಬಗ್ಗೆ ಸ್ಪಷ್ಟ ನೀತಿ ಸಂಹಿತೆಯನ್ನು ಅಳವಡಿಸಿ ತೆರಿಗೆ ಪರಿಷ್ಕರಣೆೆಯ ಬಗ್ಗೆ  ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬಂದಿ ಕೊರತೆ
ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯವಾಗಿ ಸಿಬಂದಿ ಕೊರತೆಯ ಸಮಸ್ಯೆ ಬಗ್ಗೆ ಹೇಳಿಕೊಂಡರು. ಹಟ್ಟಿಯಂಗಡಿಯಲ್ಲಿ ಹೊಸ ಕಟ್ಟಡ‌ದ ಬೇಡಿಕೆ ಹಾಗೂ ನಬಾರ್ಡ್‌ನಿಂದ ಮಂಜೂರಾಗಿರುವ ಮೊತ್ತದ ಬಗ್ಗೆ ವೈದ್ಯಾಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಂಡ ಬಗ್ಗೆ  ಸಭೆಯ ಗಮನಕ್ಕೆ ತಂದರು.  ಶಿರೂರಿನಲ್ಲಿ ದಡಾರ ಮತ್ತು ರೆಬೆಲ್ಲಾ  ಕುರಿತು ವಾಟ್ಸಾಪ್‌ನಲ್ಲಿ  ತಪ್ಪು ಮಾಹಿತಿಯಿಂದಾಗಿ ಜನರು ಭಾಗವಹಿಸಲಿಲ್ಲ. ಆದರೆ ಈ ಬಗ್ಗೆ  ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೊಡಲು ವ್ಯವಸ್ಥೆ ಮಾಡಲಾಯಿತು ಎಂದು ಶಿರೂರು ವೈದ್ಯಾಧಿಕಾರಿಗಳು ಹೇಳಿದರು.

ಮರವಂತೆಯಲ್ಲಿ ಕಡಲ್ಕೊರೆತ: ಕ್ರಮಕ್ಕೆ ಆಗ್ರಹ
ಮರವಂತೆಯ ಹೊರ ಬಂದರು ಪ್ರದೇಶದಲ್ಲಿ ನಿರಂತರ ಕಡಲ್ಕೊರೆತ ಉಂಟಾಗುತ್ತಿದ್ದು ಇದರಿಂದ ಮನೆಗಳಿಗೆ ಸಮಸ್ಯೆಯಾಗಿದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಬಾಬು ಶೆಟ್ಟಿ ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು  ಹಾಗೂ ಪಿಡಬ್ಲ್ಯುಡಿ  ಅಧಿಕಾರಿಗಳಲ್ಲಿ ಚರ್ಚೆ ನಡೆಸಲಾಗಿದ್ದು ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು  ಎಂದು ಶಾಸಕರು ಹೇಳಿದರು.

ಬೈಂದೂರಿನಲ್ಲಿ  ಕೆಎಸ್ಸಾಆರ್‌ಟಿಸಿ ಡಿಪೋ
ಬೈಂದೂರಿನಲ್ಲಿ ಕೆಎಸ್ಸಾಆರ್‌ಟಿಸಿ ಡಿಪೋ  ಹಾಗೂ ಬಸ್ಸು ನಿಲ್ದಾಣವನ್ನು ನಿರ್ಮಿಸಲು ಜಾಗವನ್ನು ಕಂಡುಕೊಳ್ಳಲಾಗಿದ್ದು ಈ ಜಾಗಕ್ಕೆ ಬೇಲಿ ಹಾಕಿಸಿ  ಜಾಗವನ್ನು ಕೆಎಸ್ಸಾಆರ್‌ಟಿಸಿಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಜಿ.ಪಂ. ಸದಸ್ಯ ಸುರೇಶ್‌ ಬಟ್ವಾಡಿ ಅವರು ಈ ಜಾಗದಲ್ಲಿ ಈಗಾಗಲೇ ಐಆರ್‌ಡಿಯವರು  ಚತುಷ್ಪಥ ಕಾಮಗಾರಿಯ ಮಣ್ಣುಗಳನ್ನು ತುಂಬಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅದು ತಮ್ಮ ಜಾಗ ಎಂದು ಹೇಳಿಕೊಳ್ಳುವ ಮೊದಲು ಈ ಜಾಗಕ್ಕೆ ಸೂಕ್ತ ಬೇಲಿ ಅಳವಡಿಸಿ ಎಂದು ಶಾಸಕರನ್ನು ಕೇಳಿಕೊಂಡರು. ಡಿಪೋ ಮಾಡುವ ಜಾಗದ ಕುರಿತು ತಕರಾರು ಇದ್ದರೆ ತಿಳಿಸುವಂತೆ ಶಾಸಕರು ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ ಹಾಗೂ ಸುರೇಶ್‌ ಬಟ್ವಾಡಿಯವರನ್ನು  ಕೇಳಿದರು. ಬೈಂದೂರಿನ ಅಭಿವೃದ್ಧಿಗೆ ನಮ್ಮ ಅಡ್ಡಗಾಲು ಇಲ್ಲ. ಅಥವಾ ಡಿಪೋ ಮಾಡಲು ನಮ್ಮ ವಿರೋಧವಿಲ್ಲ ಎಂದು ಬಾಬು ಶೆಟ್ಟಿ ಹೇಳಿದರು.

ಕಟ್‌ಬೆಲೂ¤ರಿನ ಕೆಲವಡೆ ಉಪ್ಪು ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿ.ಪಂ. ಸದಸ್ಯೆ ಶೋಭಾ ಪುತ್ರನ್‌ ಕೇಳಿಕೊಂಡರು. ಕಿನಾರಾ ಬೀಚ್‌ ಬಳಿ ತುಂಡಾದ ವಿದ್ಯುತ್‌ ಕಂಬಗಳ ದುರಸ್ತಿ ಕಾರ್ಯಮಾಡಬೇಕು ಎಂದು ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ ಕೇಳಿಕೊಂಡರು.

ಸಭೆಯ ಅಧ್ಯಕ್ಷತೆಯನ್ನು  ಶಾಸಕ ಕೆ. ಗೋಪಾಲ ಪೂಜಾರಿ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಜಯಶ್ರೀ  ಮೊಗವೀರ, ತಹಶೀಲ್ದಾರ್‌  ಜಿ.ಎಂ. ಬೋರ್ಕರ್‌, ತಾ.ಪಂ. ಕಾರ್ಯಾನಿರ್ವಹಣಾಧಿಕಾರಿ  ಚೆನ್ನಪ್ಪ ಮೊಲಿ  ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮ ಲೆಕ್ಕಿಗರ ವರ್ಗಾವಣೆ ಸಲ್ಲದು   
ಗ್ರಾಮಗಳ ಅಭಿವೃದ್ಧಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಗ್ರಾಮ ಲೆಕ್ಕಿಗರನ್ನು ವರ್ಗಾವಣೆಗೊಳಿಸುವುದರ ಮೂಲಕ ಸುಮಾರು 3-4 ಗ್ರಾಮಗಳಿಗೆ ಓರ್ವರಂತೆ ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯ ಕುಂಠಿತ ಗೊಂಡಿದೆ. ಗ್ರಾಮ ಲೆಕ್ಕಿಗರು ಗ್ರಾಮದಲ್ಲಿ ಕೆಲಸಮಾಡುವುದನ್ನು ಬಿಟ್ಟು  ತಾಲೂಕು ಕಚೇರಿಗಳಲ್ಲಿ ಕೆಲಸ ನಿರ್ವಹಿ ಸುವುದು ಸರಿಯೇ ಎಂದು ಸದಸ್ಯ ಬಾಬು ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ತಹಶೀಲ್ದಾರ್‌ ಈಗಾಗಲೇ ತಾಲೂಕಿನಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇವೆ. ಸುಮಾರು 24 ಗ್ರಾಮ ಲೆಕ್ಕಿಗರ ಕೊರತೆ ಯನ್ನು ಕಂಡುಕೊಳ್ಳುತ್ತಿದ್ದೇವೆ. ಸಿಬಂದಿಯ ನಿಯೋಜನೆ ಆಗುತ್ತಾ ಇಲ್ಲ.  ಕೂಡಲೇ ಈಗಾಗಲೇ ತಾಲೂಕು ಕಚೇರಿಯಲ್ಲೂ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಿಗರನ್ನು ನಿಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಟಾಪ್ ನ್ಯೂಸ್

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.