ಆಹಾರ ಅರಸಿ ಬಂದು ಉರುಳಿಗೆ ಬಿದ್ದ ಚಿರತೆಯ ರಕ್ಷಣೆ
ರಾಜ್ಯ ಹೆದ್ದಾರಿಯ ಪಳ್ಳಿ ಪೇಟೆ ಸಮೀಪ ಮುಖ್ಯ ರಸ್ತೆ
Team Udayavani, Jan 21, 2020, 5:24 AM IST
ಪಳ್ಳಿ: ಪಳ್ಳಿ ಪೇಟೆಯ ಸಮೀಪ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಜ.20ರಂದು ಸಂಭವಿಸಿದೆ.ಕಾರ್ಕಳ ಪಳ್ಳಿ ಮಾರ್ಗವಾಗಿ ಉಡುಪಿ ರಾಜ್ಯ ಹೆದ್ದಾರಿಯ ಪಳ್ಳಿ ಪೇಟೆ ಸಮೀಪ ಮುಖ್ಯ ರಸ್ತೆಯ ಬಳಿ ಯಾರೋ ಅಪರಿಚಿತರು ಇರಿಸಿದ್ದ ಉರುಳಿಗೆ ಚಿರತೆ ಬಿದ್ದಿದೆ.
ರಾತ್ರಿ ಆಹಾರಕ್ಕಾಗಿ ಸಂಚರಿಸುವ ಸಂದರ್ಭ ಉರುಳಿಗೆ ಚಿರತೆಯು ಬಿದ್ದಿದ್ದು ಬೆಳಗ್ಗೆ ಚಿರತೆಯ ನರಳಾಟನ್ನು ಕಂಡು ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತತ್‌ಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಚಿರತೆಯ ರಕ್ಷಣಾ ಕಾರ್ಯದಲ್ಲಿ ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್ ಜಿ.ಡಿ., ಬೈಲೂರು ಉಪ ವಲಯ ಅರಣ್ಯಾಧಿಕಾರಿ ಹುಕ್ರಪ್ಪ ಗೌಡ, ಅರಣ್ಯ ರಕ್ಷಕರಾದ ಪ್ರತಾಪ್ ಬಿ., ಶ್ರೀಧರ್, ಸಂಜೀವ ಭಾಗಿಯಾಗಿದ್ದಾರೆ.
ಬಳಿಕ ಮಂಗಳೂರಿನಿಂದ ಅರಿವಳಿಕೆ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಅರಿವಳಿಕೆ ನೀಡಿ ಚಿರತೆಯನ್ನು ಉರುಳಿನಿಂದ ಬಿಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಪಿಲಿಕುಳ ಉದ್ಯಾನವನ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಗೆ ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಸತ್ಯಾನಂದ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ್ ಪ್ರಭು, ಸಂದೀಪ್ ಅಮೀನ್ ಹಾಗೂ ಗ್ರಾಮಸ್ಥರು ಸಹಕರಿಸಿದರು.
2 ದಿನಗಳ ಹಿಂದೆ ಕಲ್ಯಾ ಪರಿಸರದಲ್ಲಿ ಚಿರತೆ ಹಾವಳಿ ಕುರಿತು ಉದಯವಾಣಿ ಸುದಿನವು ವರದಿ ಪ್ರಕಟಿಸಿತ್ತು. ಇದೀಗ ಪಳ್ಳಿ ಪರಿಸರದಲ್ಲಿ ಚಿರತೆ ಉರುಳಿಗೆ ಬಿದ್ದಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.