ಜಿಲ್ಲಾಧಿಕಾರಿ ಕಚೇರಿ ಎದುರು ಸರಕಾರಿ ಹುದ್ದೆ ಆಗ್ರಹಿಸಿ ಧರಣಿ
Team Udayavani, Dec 11, 2018, 2:45 AM IST
ಉಡುಪಿ: ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವಡ್ಡರ್ಸೆ ಗ್ರಾಮದ ದೇವೇಂದ್ರ ಸುವರ್ಣ ಸೋಮವಾರ ಸಾಂಕೇತಿಕ ಧರಣಿ ನಡೆಸಿದ್ದಾರೆ. ದೇವೇಂದ್ರ ಸುವರ್ಣ ಅವರು ಅಪಘಾತದಲ್ಲಿ ಶಾಶ್ವತ ಅಂಗವಿಕಲರಾಗಿದ್ದಾರೆ. ಅವರ ಸಹೋದರ (ತಮ್ಮ) ಶಶಿಧರ ಸುವರ್ಣ ಮೆಸ್ಕಾಂನಲ್ಲಿ ಕರ್ತವ್ಯ ನಿರತರಾಗಿರುವಾಗಲೇ ಮೃತಪಟ್ಟಿದ್ದರು. ಅವರ ಇಡೀ ಕುಟುಂಬವು ಅವರ ತಮ್ಮನನ್ನೇ ಅವಲಂಬಿತವಾಗಿತ್ತು. ಈ ಕಾರಣ ಮಾನವೀಯ ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ತನಗೆ ಸರಕಾರಿ ಹುದ್ದೆ ನೀಡುವಂತೆ 4 ವರ್ಷಗಳಿಂದ ಪ್ರಯತ್ನಿಸಿದರೂ ಫಲಕಾರಿಯಾಗದ ನೆಲೆಯಲ್ಲಿ ದೇವೇಂದ್ರ ಸುವರ್ಣರು ಧರಣಿ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ 5 ಬಾರಿ ಭಾಗವಹಿಸಿದ್ದಲ್ಲದೆ, ಮುಖ್ಯಮಂತ್ರಿಗಳ ಮನೆಗೆ ಖುದ್ದಾಗಿ 10 ಬಾರಿ ಭೇಟಿ ನೀಡಿ ಸಮಸ್ಯೆಯನ್ನು ತೋಡಿಕೊಂಡಿದ್ದೇನೆ. ಇದುವರೆಗೂ ಅಂಗವಿಕಲನಾದ ನನಗೆ ಮಾನವೀಯತೆ ತೋರದೆ 20 ಬಾರಿ ಬೆಂಗಳೂರಿಗೆ ನನ್ನನ್ನು ತಿರುಗಿಸಿ ಅವಮಾನಿಸಿದ್ದಲ್ಲದೆ, ನನ್ನ ಆರ್ಥಿಕ ಪರಿಸ್ಥಿತಿ ಕುಂಠಿತವಾಗುವಂತೆಯೂ ಮಾಡಿದ್ದಾರೆ. ಇದರಿಂದ ಸಾಕಷ್ಟು ಮಾನಸಿಕ ನೋವನ್ನು ಅನುಭವಿಸುತ್ತಿದ್ದೇನೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.