ಉಪ್ಪುಂದ: ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಶಿಕ್ಷಕರನ್ನು ವರ್ಗಾವಣೆ ಮಾಡಿ ಸರಕಾರಿ ಶಾಲೆ ಮುಚ್ಚುವ ಹುನ್ನಾರ; ಹೆತ್ತವರ ಆಕ್ರೋಶ
Team Udayavani, Jun 29, 2019, 5:28 AM IST
ಉಪ್ಪುಂದ: ಶಿಕ್ಷಕರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಉಪ್ಪುಂದ ಪ್ರೌಢಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಜೂ. 28ರಂದು ಪ್ರತಿಭಟನೆ ನಡೆಸಿದರು.
ಉಪ್ಪುಂದ ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ 287 ಹುಡುಗರು ಹಾಗೂ 325 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. 16 ಅಧ್ಯಾಪಕರು ಇದ್ದಾರೆ. ಇದರಲ್ಲಿ 5 ಶಿಕ್ಷಕರನ್ನು ಶಿಕ್ಷಣ ಇಲಾಖೆ ಏಕಾಏಕಿ ವರ್ಗಾವಣೆ ಆದೇಶ ಹೊರಡಿಸಿರುವುದು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿದೆ.
ಸರಕಾರಿ ಶಾಲೆ
ಮುಚ್ಚುವ ಹುನ್ನಾರ?
ಸರಕಾರದ ನಿಯಮದಂತೆ 612 ವಿದ್ಯಾರ್ಥಿಗಳಿಗೆ 17 ಶಿಕ್ಷಕರು ಇರಬೇಕು. ಪ್ರಸ್ತುತ ಇರುವುದು 16 ಶಿಕ್ಷಕರು. ಒಂದು ಶಿಕ್ಷಕರ ಕೊರತೆಯ ನಡುವೆ ಪಾಠ ಮಾಡುತ್ತಿರುವುದರ ನಡುವೆ ಕನ್ನಡ ವಿಭಾಗ, ಇಂಗ್ಲಿಷ್, ಹಿಂದಿ, ವಿಜ್ಞಾನ ಹಾಗೂ ಸಮಾಜ ವಿಭಾಗದ ಶಿಕ್ಷರನ್ನು ವರ್ಗಾವಣೆ ಮಾಡಲಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಲಿದೆ. ಅಲ್ಲದೇ ಶಾಲಾ ಎಸ್‌ಡಿಎಂಸಿ ಹಾಗೂ ಶಿಕ್ಷಕರ ಪ್ರಯತ್ನದಿಂದಾಗಿ 2019ನೇ ಸಾಲಿನ ದಾಖಲಾತಿಯಲ್ಲಿ 80 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಇವುಗಳ ನಡುವೆ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು. ವಿದ್ಯಾರ್ಥಿಗಳೊಂದಿಗೆ ಹೆತ್ತವರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರಿ ಶಾಲೆಯನ್ನು ಉಳಿಸಬೇಕಾದ ಸರಕಾರವೇ ಶಿಕ್ಷಕರನ್ನು ವರ್ಗಾಯಿಸುವ ಮೂಲಕ ಶಿಕ್ಷರ ಕೊರತೆ ಉಂಟುಮಾಡಿ ಖಾಸಗಿ ಶಾಲೆಗಳಿಗೆ ಬೆಂಬಲ ನೀಡುವುದು ಇದರ ಮೂಲ ಉದ್ದೇಶವಾಗಿದೆ. ಸಮಾಜಕ್ಕೆ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸದಂತೆ ಮಾಡುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಡವಾಗಿ ಆಗಮಿಸಿದ ಕ್ಷೇತ್ರ ಶಿಕ³Òಣಾಧಿ ಕಾರಿ ಶಿಕ್ಷಕರ ಕೊಠಡಿಯಲ್ಲಿ ಕುಳಿತು ಮಾತನಾಡುತ್ತಿರುವುದನ್ನು ತಿಳಿದ ಹೆತ್ತವರು ನಾವು ಬಿಸಿಲಿನಲ್ಲಿ ಇದ್ದೇವೆ ನೀವು ಹೊರಗೆ ಬಂದು ಮಕ್ಕಳೊಂದಿಗೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಸದಸ್ಯರು, ಹೆತ್ತವರು ಪಾಲ್ಗೊಂಡರು.
ಶಿಕ್ಷಕರ ವರ್ಗಾವಣೆ ಕುರಿತು ಪಿಎಂ ನರೇಂದ್ರ ಮೋದಿ ಹಾಗೂ ರಾಜ್ಯದ ಶಿಕ್ಷಣ ಸಚಿವರಿಗೆ ಸಮಸ್ಯೆ ತಿಳಿಸಿದ್ದೇವೆ. ಯಾವುದೇ ಸ್ಪಂದನೆ ಇಲ್ಲ. 5 ಶಿಕ್ಷಕರನ್ನು ವರ್ಗಾವಣೆ ಮಾಡಿರುವುದರಿಂದ 612 ವಿದ್ಯಾರ್ಥಿಗಳಿಗೆ 11 ಶಿಕ್ಷಕರಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. 5 ಶಿಕ್ಷಕರ ವರ್ಗಾವಣೆ ರದ್ದು ಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟನೆ ಕೈಗೊಳ್ಳುತ್ತೇವೆ.
-ಶ್ರೀವರ್ಷಾ, ವಿದ್ಯಾರ್ಥಿನಿ
ವರ್ಗಾವಣೆ ಮಾಡುವುದಿಲ್ಲ
ವಿದ್ಯಾರ್ಥಿಗಳ ಹಾಗೂ ಪಾಲಕರ ನೋವು ಅರ್ಥವಾಗುತ್ತದೆ. ನಿಮ್ಮ ಬೇಡಿಕೆಯನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ, ಮನವರಿಕೆ ಮಾಡಿ ಅವರ ಸಲಹೆ ಪಡೆದುಕೊಂಡು ಕ್ರಮ ಕೈಗೊಳ್ಳುತ್ತೇನೆ. ಇಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ.
– ಜ್ಯೋತಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.