ಬಂಡಿಮಠದಲ್ಲಿ ಪೋಲಾಗುತ್ತಿದೆ ನೀರು … ಕೇಳುವವರಿಲ್ಲ ಯಾರೂ !
ಶಿಥಿಲಗೊಂಡಿರುವ ಕಲ್ಲೊಟೆ ರಸ್ತೆ ಬಳಿಯ ಸಂಪ್
Team Udayavani, Mar 26, 2019, 6:30 AM IST
ಕಾರ್ಕಳ: ಹನಿ ನೀರು ಅಮೂಲ್ಯ ವಾಗಿರುವ ಈ ಬೇಸಗೆಯಲ್ಲೂ ಕಾರ್ಕಳದ ಬಂಡಿಮಠ ಸಂಪ್‌ನಿಂದ ಭಾರೀ ಪ್ರಮಾಣದ ನೀರು ಹರಿದು ಪೋಲಾಗುತ್ತಿರುವ ದೃಶ್ಯ ಕಂಡುಬರುತ್ತಿದೆ.
ಬಿರು ಬಿಸಿಲಿಗೆ ಕೆರೆಬಾವಿ ನೀರು ಬತ್ತಿ ನೀರಿಗಾಗಿ ಪರಿತಪಿಸುತ್ತಿರುವ ಈ ಸಮಯದಲ್ಲಿ ಪುರಸಭಾ ವ್ಯಾಪ್ತಿಯ ಕಲ್ಲೊಟೆ ರಸ್ತೆ ಪಕ್ಕದಲ್ಲಿರುವ ಸಂಪ್ ಅಡಿಪಾಯ ಶಿಥಿಲಗೊಂಡು ನೀರು ಸಂಪ್‌ನಿಂದ ಯಥೇತ್ಛವಾಗಿ ಹರಿದು ಚರಂಡಿ ಸೇರುತ್ತಿದೆ.
ಬೃಹತ್ ಟ್ಯಾಂಕ್
10 ಲಕ್ಷ ಲೀ. ನೀರು ತುಂಬುವ ಸಾಮರ್ಥ್ಯ ಹೊಂದಿರುವ ಬೃಹತ್ ಟ್ಯಾಂಕ್‌ಗೆ ಪಕ್ಕದಲ್ಲೇ ಇರುವ ಸಂಪ್‌ನಿಂದ ಪಂಪ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಟ್ಯಾಂಕ್ ತುಂಬಲು 7 ಗಂಟೆ ಸಮಯಾವಕಾಶ ಬೇಕಾಗಿರುವ ಕಾರಣ 7 ಗಂಟೆ ಕಾಲ ನಿರಂತರವಾಗಿ ಭಾರೀ ಪ್ರಮಾಣದಲ್ಲಿ ಜೀವಜಲ ಪೋಲಾಗುತ್ತಿದೆ. ಅದಲ್ಲದೇ ಟ್ಯಾಂಕ್‌ನಲ್ಲೂ ನೀರು ಸೋರಿಕೆಯಾಗಿ ಮಳೆನೀರು ಬಿದ್ದಂತೆ ಸುರಿಯುತ್ತಿದೆ.
ಮುಂಡ್ಲಿಯಿಂದ ನೀರು
ಕಾರ್ಕಳ ಪುರಸಭಾ ವ್ಯಾಪ್ತಿಗೆ ದುರ್ಗ ಗ್ರಾಮದ ಮುಂಡ್ಲಿ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದೆ. ಪುರಸಭಾ ವ್ಯಾಪ್ತಿಗೆ ಮುಂಡ್ಲಿ ಜಲಾಶಯವೇ ನೀರಿನ ಮೂಲ. ಮುಂಡ್ಲಿ ಜಲಾಶಯದಲ್ಲೂ ಹೂಳು ತುಂಬಿದ್ದ ಕಾರಣ ನೀರಿನ ಶೇಖರಣೆ ಪ್ರಮಾಣ ಎಂದಿನಂತಿಲ್ಲ.
ಪರಿಣಾಮ ಬೀರಲಿದೆ
ನೀರಿನ ಬವಣೆ ಎಲ್ಲೆಡೆ ಅತಿಯಾಗಿಯೇ ಕಂಡುಬರುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ನೀರನ್ನು ವೃಥಾ ಪೋಲು ಮಾಡುವುದರಿಂದ ಸದ್ಯವೇ ಘೋರ ಪರಿಣಾಮ ಎದುರಿಸಬೇಕಾದ ಸ್ಥಿತಿ ಬರಬಹುದು. ನೀರಿನ ಮಿತಬಳಕೆ, ನೀರಿನ ಸಂರಕ್ಷಣೆ, ಜಾಗೃತಿ ಕಾರ್ಯಾಗಾರ ನಡೆಸುತ್ತಿರುವ ಆಡಳಿತ ವರ್ಗ ತಮ್ಮ ಕಣ್ಣೆದುರೇ ನೀರು ಪೋಲಾಗುತ್ತಿದ್ದರೂ ಯಾವುದೇ ಕ್ರಮ ವಹಿಸದೇ, ತಮ್ಮ ಕಾರ್ಯವಲ್ಲ ಎಂಬಂತೆ ನಿಶ್ಚಿಂತೆಯಿಂದ ಇದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಯಾಕೆ ನಿರ್ಲಕ್ಷ é?
ಪುರಸಭಾ ವ್ಯಾಪ್ತಿಯ ಈ ಸಂಪ್ ಅನ್ನು ಪುರಸಭೆ ನಿರ್ವಹಿಸಬೇಕಾಗಿದೆ. ಸರಕಾರ ನೀರಾವರಿ ಯೋಜನೆ ಹೆಸರಿನಲ್ಲಿ ಕೋಟಿ ಕೋಟಿ ರೂ. ಅನುದಾನ ಮೀಸಲಿರಿಸಿದ್ದರೂ ನೀರನ್ನು ಸಂಗ್ರಹಿಸುವ ಸಂಪ್, ಟ್ಯಾಂಕ್ ಅನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ. ನೀರಾವರಿ ಇಲಾಖೆ, ಪುರಸಭೆ ಅಧಿಕಾರಿಗಳು ಮುಂಜಾಗ್ರತೆ ವಹಿಸುವಲ್ಲಿ ಉದಾಸೀನ ತೋರ್ಪಡಿಸುವುದು ಸರಿಯಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.
ದುರಸ್ತಿಪಡಿಸಲಾಗುವುದು
ಪುರಸಭೆ ವತಿಯಿಂದ ಈಗಾಗಲೇ ಟ್ಯಾಂಕ್ ದುರಸ್ತಿಪಡಿಸುವಂತೆ ವಾಟರ್ ಸಪ್ಲೆ„ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಂಡಿಮಠದ 50 ಸಾವಿರ ಲೀ. ನೀರಿನ ಸಾಮರ್ಥ್ಯವಿರುವ ಸಂಪ್ ರಿಪೇರಿಗೆ 2.5 ಲಕ್ಷ ರೂ., 1 ಲಕ್ಷ ಲೀಟರ್ ಸಾಮರ್ಥ್ಯವಿರುವ ಸಂಪ್‌ಗೆ 6 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಓವರ್ ಹೆಡ್ ಟ್ಯಾಂಕ್ ದುರಸ್ತಿಗೆ 3.80 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು 2019-20 ಸಾಲಿನ ಅನುದಾನದಲ್ಲಿ ಹಣ ಕಾಯ್ದಿರಿಸಿ ದುರಸ್ತಿಪಡಿಸಲಾಗುವುದು.
-ಮೇಬಲ್ ಡಿ’ಸೋಜಾ, ಪುರಸಭೆ ಮುಖ್ಯಾಧಿಕಾರಿ
-ರಾಮಚಂದ್ರ ಬರೆಪ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.