ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ : ಉಭಯ ಜಿಲ್ಲೆಯಲ್ಲಿ 36 ರೈತರ ನೋಂದಣಿ
Team Udayavani, Dec 1, 2022, 1:32 AM IST
ಉಡುಪಿ: ಕರಾವಳಿಯಲ್ಲಿ ಪಡಿತರ ವ್ಯವಸ್ಥೆಯಡಿ ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಅನುಕೂಲವಾಗುವಂತೆ ಇಲ್ಲಿನ ರೈತರಿಂದ ಬೆಂಬಲ ಬೆಲೆಯಡಿ ಭತ್ತ ಖರೀದಿ ಪ್ರಕ್ರಿಯೆಗೆ ನೋಂದಣಿ ಈಗಾಗಲೇ ಆರಂಭವಾಗಿದೆ. ಭತ್ತ ನೀಡಲು ನೋಂದಣಿ ಮಾಡಿಕೊಳ್ಳಲು ರೈತರಿಗೆ ಕೃಷಿ ಇಲಾಖೆಯಿಂದ ಈಗಾಗಲೇ ಮಾಹಿತಿ ನೀಡಿದ್ದರೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರಿದಂತಿಲ್ಲ.
ಉಭಯ ಜಿಲ್ಲೆಯಲ್ಲಿ ಭತ್ತದ ಕೊçಲು ಮುಗಿಯುತ್ತಿದ್ದು, ಹಲವು ರೈತರು ಈಗಾ ಗಲೇ ತಾವು ಬೆಳೆದ ಭತ್ತವನ್ನು ಪ್ರತೀ ವರ್ಷ ದಂತೆ ಈ ವರ್ಷವೂ ಖಾಸಗಿ ಮಿಲ್‌ಗಳ ಮಾಲಕರಿಗೆ ನೀಡಿಯಾಗಿದೆ. ಇನ್ನು ಕೆಲವರು ಮಿಲ್‌ಗಳಿಗೆ ನೀಡುವ ಬಗ್ಗೆ ಹಿಂದೆಯೇ ಒಪ್ಪಂದವನ್ನು ಮಾಡಿಕೊಂಡಿದ್ದರಿಂದ ಅದರಂತೆ ಮುಂದುವರಿಯುತ್ತಿದ್ದಾರೆ.
ಈವರೆಗಿನ ನೋಂದಣಿ
ಭತ್ತ ಖರೀದಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ತೆರೆಯಲಾಗಿರುವ ನೋಂದಣಿ ಕೇಂದ್ರದಲ್ಲಿ ನ. 30ರ ಅಂತ್ಯಕ್ಕೆ 32 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈ ರೈತರಿಂದ ಸುಮಾರು 750 ಕ್ವಿಂ. ಭತ್ತ ಸಿಗುವ ಸಾಧ್ಯತೆ ಯಿದೆ. ದ.ಕ. ಜಿಲ್ಲೆಯ ವಿವಿಧೆಡೆಯಲ್ಲೂ ಭತ್ತ ಖರೀದಿ ನೋಂದಣಿ ಕೇಂದ್ರವನ್ನು ಆರಂಭಿಸಲಾಗಿದೆ. ಆದರೆ ಈವರೆಗೂ ನೋಂದಣಿ ಮಾಡಿಕೊಂಡಿರುವ ರೈತರ ಸಂಖ್ಯೆ ಕೇವಲ ನಾಲ್ಕು. ಈ ನಾಲ್ವರಿಂದ ಸುಮಾರು 80 ಕ್ವಿಂ. ಭತ್ತ ಬರಲಿದೆ.
ರೈತರಿಗೆ ನಿರಂತರ ಮಾಹಿತಿ
ಉಡುಪಿ, ದ.ಕ. ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯ ಕುಚ್ಚಲು ಅಕ್ಕಿ ವಿತರಣೆಗೆ ಪ್ರತೀ ತಿಂಗಳು ಸರಾಸರಿ 1 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದೆ. ಹೀಗಾಗಿ ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಕುಚ್ಚಲು ಅಕ್ಕಿ ತರಿಸಿಕೊಳ್ಳುವುದಕ್ಕಿಂತ ಸ್ಥಳೀಯವಾಗಿ ರೈತರು ಬೆಳೆದ ಕುಚ್ಚಲಕ್ಕಿಯ ಭತ್ತವನ್ನು ಬೆಂಬಲ ಬೆಲೆಯಡಿ ನೀಡುವಂತಾಗಬೇಕು. ಈ ಬಗ್ಗೆ ರೈತರಿಗೆ ನಿರಂತರ ಮಾಹಿತಿ ನೀಡು ತ್ತಿದ್ದೇವೆ. ಸ್ಥಳೀಯವಾಗಿ ಹೆಚ್ಚೆಚ್ಚು ಭತ್ತಗಳು ಲಭ್ಯವಾದಾಗ ಮಾತ್ರ ಸ್ಥಳೀಯ ಕುಚ್ಚಲಕ್ಕಿ ನೀಡಲು ಸಾಧ್ಯ ಎಂದು ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.