ಶುದ್ಧ ಕುಡಿಯುವ ನೀರಿನ ಘಟಕ: ಬೇಕಿದೆ ಜಾಗೃತಿ
Team Udayavani, Jul 19, 2018, 6:00 AM IST
ತೆಕ್ಕಟ್ಟೆ : ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿನಾಯಕ ನಗರದ ಸುಮಾರು 600ಕ್ಕೂ ಅಧಿಕ ಜನ ವಸತಿ ಪ್ರದೇಶದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಯಾಗಿದೆ. ಆದರೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗಿಲ್ಲ.
10 ಲೀ. ಶುದ್ಧ ನೀರು
ಅತ್ಯಾಧುನಿಕ ತಂತ್ರಜ್ಞಾನದ ಘಟಕ ಇದಾಗಿದ್ದು, 1 ರೂ. ಹಾಕಿದರೆ 10 ಲೀ. ಶುದ್ಧ ನೀರು ಲಭ್ಯವಾಗುತ್ತದೆ. ಒಂದು ಬಾರಿಗೆ 2 ಸಾವಿರ ಲೀಟರ್ ನೀರನ್ನು ಇದರಲ್ಲಿ ಸಂಗ್ರಹಿಸಬಹುದಾಗಿದ್ದು, ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಸ್ಥಾಪಿಸಲಾಗಿದೆ.
ಹ್ಯಾಂಡ್ ಪಂಪ್ ಬೇಡ
ವಿನಾಯಕ ನಗರದ 3ನೇ ಮುಖ್ಯ ರಸ್ತೆಯ ಬಳಿ ಇರುವ ಹ್ಯಾಂಡ್ ಪಂಪ್‌ನ ಕೇಸಿಂಗ್ ಪೈಪ್ ಸಮಸ್ಯೆಯಿಂದಾಗಿ ಕಂದು ಬಣ್ಣದ ಕಲುಷಿತ ನೀರು ಹೊರ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ದುರಸ್ತಿ ನಡೆವಲ್ಲಿವರೆಗೆ ಆ ನೀರನ್ನು ಬಳಸದೇ ಶುದ್ಧ ನೀರಿನ ಘಟಕದ ನೀರು ಬಳಸುವಂತೆ ಕುಂಭಾಶಿ ಪಿಡಿಒ ಜಯರಾಮ ಶೆಟ್ಟಿ ಹೇಳಿದ್ದಾರೆ.
24 ಗಂಟೆಯೂ ನೀರು
ಮಳೆಗಾಲದಲ್ಲಿ ಕಲುಷಿತ ನೀರಿನ ಸಮಸ್ಯೆ ಇದೆ. ಇದಕ್ಕಾಗಿ ಕುಡಿವ ನೀರಿನ ಸಮಸ್ಯೆ ಇರುವ ಭಾಗಗಳ ಜನರು ಶುದ್ಧ ನೀರಿನ ಘಟಕವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇದು ದಿನದ 24 ಗಂಟೆಗಳ ಕಾಲ ಸಾರ್ವಜನಿಕ ಸೇವೆಗಾಗಿ ಘಟಕ ತೆರೆದಿರುತ್ತದೆ ಎಂದು ಕುಂಭಾಶಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀವಾಣಿ ಅಡಿಗ ಹೇಳಿದ್ದಾರೆ.
ವಿನಾಯಕ ನಗರದಲ್ಲಿ ಶುದ್ಧ ನೀರಿನ ಘಟಕ ತೆರೆದು 2 ತಿಂಗಳಾಗಿವೆ ಆದರೆ ಸಾರ್ವಜನಿಕರಿಗೆ ಈ ಬಗ್ಗೆ ಸಮರ್ಪಕವಾದ ಮಾಹಿತಿಯ ಕೊರತೆ ಇತ್ತು.
– ವಿಜಯ ಕುಮಾರ್, ಸ್ಥಳೀಯರು
ಕಳೆದೆರಡು ತಿಂಗಳಿನಿಂದಲೂ ಮೂರನೇ ಮುಖ್ಯ ರಸ್ತೆಯಲ್ಲಿರುವ ಹ್ಯಾಂಡ್ ಪಂಪ್‌ನಲ್ಲಿ ಕಲುಷಿತ ನೀರು ಬರುತ್ತಿದೆ. ಪ್ರತಿ ಮನೆಗಳಿಗೆ ದಿನ ಬಳಕೆಗೆ ಗ್ರಾ.ಪಂ.ನಿಂದ ಪೂರೈಕೆಯಾಗುತ್ತಿರುವ ನೀರು ಸ್ನಾನ ಮಾಡಲು ಹಾಗೂ ಬಟ್ಟೆ ಒಗೆಯಲು ಯೋಗ್ಯವಿಲ್ಲ.
– ಲಕ್ಷ್ಮೀ ಪೂಜಾರಿ, 3ನೇ ಮುಖ್ಯ ರಸ್ತೆಯ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.