Puthige Swamiji; ಗೀತಾರ್ಥ ಚಿಂತನೆ 42: ಆನಂದಕ್ಕಾಗಿ ಕೆಲಸ, ಕೆಲಸದಲ್ಲಿ ಆನಂದ
Team Udayavani, Sep 22, 2024, 5:29 PM IST
ಹಸಿವು ಇರುವುದರಿಂದಲೇ ಜೀವಿಗಳ ಎಲ್ಲ ಪ್ರವೃತ್ತಿಗಳು ಬಂದಿವೆ. ನನಗೆ ಹಸಿವು ಇಲ್ಲ ಎಂದು ಶ್ರೀಕೃಷ್ಣ ಹೇಳುತ್ತಾನೆ. ಆದರೆ ಆತ ಕೆಲಸವನ್ನು ಇತರರಿಗಿಂತ ಜಾಸ್ತಿ ಮಾಡುತ್ತಾನೆ. ಆತನಿಗೆ ಏನೂ ಲಾಭವಿಲ್ಲ. ಆದರೂ ಕೆಲಸ ಮಾಡುತ್ತಾನೆ. ನಾವಾದರೂ ಮಾಡುವುದು ಹಸಿವು ಇಂಗಿಸಲು. ಆದರೆ ಕೆಲಸ ಜಾಸ್ತಿಯಾಗುವುದು ಹಸಿವನ್ನು ಇಂಗಿಸಿದ ಬಳಿಕವಲ್ಲ, ಮೊದಲೇ. ಗೀತೆಯಲ್ಲಿ ಫಲೋದ್ದೇಶದಿಂದ ಕೆಲಸ ಮಾಡಬಾರದು ಎಂದು ಹೇಳಿರುವುದು ಏಕೆಂದರೆ ಭಗವಂತನ ಕಾರ್ಯಶೈಲಿಯನುಸಾರ.
ಹಸಿವು ಇಂಗಿಸಲು ಕೆಲಸ ಮಾಡದೆ ಆನಂದಾನುಭವಕ್ಕೆ ಕೆಲಸ ಮಾಡಬೇಕು ಎನ್ನುವುದು ನೀತಿ. ಭಗವಂತ ಕೆಲಸ ಮಾಡುವುದು ಆನಂದೋದ್ರೇಕಕ್ಕಾಗಿ. ಅದು ಆನಂದಾತ್ಮಕವಾದ ಕರ್ಮ. ಕಬಡ್ಡಿ, ಕ್ರಿಕೆಟ್ ಆಟವಾಡುತ್ತಾರೆ. ಏತಕ್ಕಾಗಿ? ಆಟವಾಡಿದರೆ ಕಷ್ಟವಾಗುವುದಿಲ್ಲವೆ? ಆದರೂ ಓಡಿಬರುತ್ತಾರಲ್ಲ? ಹಾಗೆ ಬರಲು ಕಾರಣ ಅದರಿಂದ ಸಿಗುವ ಆನಂದ. ಹೀಗಾಗಿ ಭಗವಂತನ ಎಲ್ಲ ಕೆಲಸವೂ ಆನಂದದ ಅಭಿವ್ಯಕ್ತಿ ಪ್ರತೀಕ. ಯಾವುದು ಆನಂದಾತ್ಮಕವಾಗಿರುವುದಿಲ್ಲವೋ ಅದು ಸಾರ್ಥಕವಲ್ಲ. ಸಂತೋಷವಾದಾಗ ಕಷ್ಟಪಟ್ಟರೂ ಕುಣಿಯುವುದಿಲ್ಲವೆ? ಸಂತೋಷವಾದಾಗ ಸುಮ್ಮನೆ ಕುಳಿತುಕೊಳ್ಳಿ ಎಂದರೂ ಕೇಳುವುದಿಲ್ಲ. ಇದು ಸಂತೋಷದ ಅಭಿವ್ಯಕ್ತಿ. ಕ್ರಿಯೆಯಲ್ಲಿ ಎರಡು ಬಗೆ ಆನಂದರೂಪವಾದುದು, ಆನಂದರೂಪವಲ್ಲದ್ದು. ನಮ್ಮ ಕರ್ಮ ಆನಂದರೂಪವಾಗಿರಬೇಕು.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.