Puthige swamiji ಗೀತಾರ್ಥ ಚಿಂತನೆ 36 : ಆಧುನಿಕ ಮೆನೇಜ್ಮೆಂಟ್ ಗೆ ಗೀತೆಯ ನೀತಿ
Team Udayavani, Sep 14, 2024, 11:54 PM IST
ನಾಟಕದ ಸ್ಪರ್ಧೆಯಲ್ಲಿ ದೂತ ಪಾತ್ರಧಾರಿ ದೂತನಂತೆಯೇ ವರ್ತಿಸಬೇಕೆ ವಿನಾ ರಾಜನಂತೆ ವರ್ತಿಸಬಾರದಲ್ಲವೆ? ಒಮ್ಮೆ ನಾಟಕ ಸ್ಪರ್ಧೆಯಲ್ಲಿ ಒಬ್ಬನಿಗೆ ಪ್ರಥಮ ಬಹುಮಾನ ಘೋಷಣೆಯಾಯಿತು. ಆತ ಸ್ಪರ್ಧೆಯಲ್ಲಿ ಭಾಗವಹಿಸಲೇ ಇಲ್ಲ ಎಂದು ಗುಲ್ಲು ಹೊರಟಿತು. ನಾಟಕದ ವಿಷಯ ಅಶೋಕ ಚಕ್ರವರ್ತಿಗಾದ ಜ್ಞಾನೋದಯ. ರಣರಂಗದಲ್ಲಿ ಹೆಣಗಳನ್ನು ನೋಡಿ ನಾನು ಎಂಥ ತಪ್ಪು ಮಾಡಿದೆ ಎಂದು ಅರ್ಧಗಂಟೆ ಸ್ವಗತ ಹೇಳುವ ಸನ್ನಿವೇಶವಿರುತ್ತದೆ. ಕೆಲವು ಹೆಣಗಳು ಅಲ್ಲಿ ಬಿದ್ದಿರುತ್ತವೆ. ಅದರಲ್ಲಿ ಒಂದು ಹೆಣದ ಪಾತ್ರ ಮಾಡಿದವನಿಗೆ ಪ್ರಥಮ ಬಹುಮಾನ ಬಂದಿತ್ತು. ಉಳಿದ ಹೆಣಗಳು ನಿಶ್ಚಲವಾಗಿ ಬಿದ್ದುಕೊಳ್ಳಲಾಗದೆ ಆಚೆ ಈಚೆ ಸ್ವಲ್ಪ ಅಲ್ಲಾಡುತ್ತಿದ್ದವು.
ಬಹುಮಾನ ಬಂದ ಹೆಣದ ಪಾತ್ರಧಾರಿ ಮಾತ್ರ ಥೇಟ್ ಹೆಣದಂತೆಯೇ ನಟಿಸಿದ್ದ, ಅಂದರೆ ಅಲುಗಾಡಲೇ ಇಲ್ಲ. ಆದ್ದರಿಂದ ಇವನಿಗೆ ಬಹುಮಾನ ಬಂತು. ಬಹುಮಾನ ಪಡೆಯಲು ಅರ್ಹತೆ ರಾಜನ ಪಾತ್ರ ಮುಖ್ಯವೋ? ಹೆಣದ ಪಾತ್ರ ಮುಖ್ಯವೋ ಅನ್ನುವುದಲ್ಲ. ಹೇಗೆ ನಟಿಸಿದ್ದಾನೆ? ಪಾತ್ರೋಚಿತವಾಗಿ ನಡೆದುಕೊಂಡಿದ್ದಾನೆಯೆ? ಎಂಬುದು ಮುಖ್ಯ. ಇದು ಎಲ್ಲ ಆಧುನಿಕ ಮೆನೇಜ್ಮೆಂಟ್ ವ್ಯವಸ್ಥೆ ಅಳವಡಿಸಿಕೊಂಡ ಗೀತೆಯ ನೀತಿ. ಅವರವರ ಕೆಲಸವನ್ನು ಶ್ರದ್ಧೆಯಿಂದ ಮಾಡಿಸುವುದು/ಮಾಡುವುದೇ ಮೆನೇಜ್ಮೆಂಟ್. ಸಂಸ್ಥೆಗಳ ಯಶಸ್ಸಿಗೆ ಸಿಬಂದಿ ತಮ್ಮ ಪಾಲಿನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾನೆಯೆ ಎನ್ನುವುದೇ ಮುಖ್ಯ ಮಾನದಂಡ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.