ಪುತ್ತಿಗೆ ಸೇತುವೆ-ಗರ್ಡರ್ ಜೋಡಣೆ: 12.85 ಕೋ. ರೂ. ವೆಚ್ಚದಲ್ಲಿ ನಿರ್ಮಾಣ
Team Udayavani, Dec 13, 2022, 5:40 AM IST
ಉಡುಪಿ: ಹೆಬ್ರಿ-ಮಲ್ಪೆ ಹೆದ್ದಾರಿ ಅಭಿವೃದ್ಧಿ ಯೋಜನೆ ಭಾಗವಾಗಿ ರಾ.ಹೆ. 169ಎ ನಲ್ಲಿ ಪುತ್ತಿಗೆಯಲ್ಲಿ ಸ್ವರ್ಣಾ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಅಂತಿಮ ಹಂತದ ಗರ್ಡರ್ ಜೋಡಣೆಗೆ ಸಿದ್ಧತೆ ನಡೆದಿದೆ.
ರಾ. ಹೆ. ಪ್ರಾಧಿಕಾರ ವತಿಯಿಂದ 12.85 ಕೋ. ರೂ. ವೆಚ್ಚದಲ್ಲಿ ನಿರ್ಮಿ ಸುವ 140 ಮೀಟರ್ ಉದ್ದದ, 16.5 ಮೀ. ಅಗಲದ ಸೇತುವೆ ಇದಾಗಿದೆ. 2018 ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಒಂದು ವರ್ಷ ಕೆಲಸ ನಡೆಸಲು ಸಾಧ್ಯವಾಗಿರಲಿಲ್ಲ. ಅನಂತರ ಕಾಮಗಾರಿ ವೇಗ ಪಡೆದುಕೊಂಡಿದ್ದು, ಇದೀಗ ಗರ್ಡರ್ ಅಳವಡಿಕೆ ಹಂತಕ್ಕೆ ತಲುಪಿದೆ. ಈ ಸೇತುವೆ ಒಟ್ಟು 5 ಬೃಹತ್ ಪಿಲ್ಲರ್‌ಗಳನ್ನು ಒಳಗೊಂಡಿದೆ. ಸೇತುವೆ ನಿರ್ಮಾಣಕ್ಕೆ 35 ಮೀ.ಉದ್ದದ 20 ಗರ್ಡರ್‌ಗಳನ್ನು ಕಾಮಗಾರಿ ಸ್ಥಳದಲ್ಲೇ ನಿರ್ಮಿಸಲಾಗಿದೆ. 30ಕ್ಕೂ ಅಧಿಕ ಕಾರ್ಮಿಕರು ರಾತ್ರಿ, ಹಗಲು 8 ತಿಂಗಳು ಶ್ರಮಿಸಿದ್ದಾರೆ.
220 ಮೆ. ಟನ್ ಸಾಮರ್ಥ್ಯದ ಕ್ರೇನ್ ಬಳಕೆ
ಗರ್ಡರ್ ಅಳವಡಿಕೆಗೆ 220 ಮೆಟ್ರಿಕ್ ಟನ್ ಮತ್ತು 200 ಮೆ. ಟನ್ ಭಾರವನ್ನು ಎತ್ತುವ ಸಾಮರ್ಥ್ಯ ಎರಡು ಬೃಹತ್ ಕ್ರೇನ್‌ಗಳನ್ನು ಮಂಗಳೂರು ಮತ್ತು ಬೆಂಗಳೂರಿನಿಂದ ಬಾಡಿಗೆಗೆ ತಂದಿದ್ದು, ವಿಶೇಷ ಹೈಡ್ರಾಲಿಕ್ ತಂತ್ರಜ್ಞಾನವನ್ನು ಇದು ಹೊಂದಿದೆ. ಒಂದು ಗರ್ಡರ್ ಅಳವಡಿಕೆಗೆ ಮೂರು ಲಕ್ಷ ರೂ. ವ್ಯಯಿಸಲಾಗುತ್ತದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ.
ಮಳೆಯಿಂದಾಗಿ ಎರಡು ದಿನ ಮುಂದಕ್ಕೆ
ಬೃಹತ್ ಸೇತುವೆಗಳ ನಿರ್ಮಾಣದಲ್ಲಿ ಅನುಭವ ಇರುವ ಕುಂದಾಪುರ ಮೂಲದ ಸಂಸ್ಥೆಯೊಂದು ಈ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದೆ. 20 ಗರ್ಡರ್ ಲಾಂಚಿಂಗ್‌ಗೆ
10 ದಿನಗಳ ಕಾಲಾವಕಾಶ ಬೇಕಿದ್ದು, ಸೇತುವೆ ಮೇಲ್ಭಾಗದಲ್ಲಿ ಡೆಕ್‌ವರ್ಕ್ ಮತ್ತು ಸ್ಲಾéಬ್ ಕೆಲಸಕ್ಕೆ ಒಂದು ತಿಂಗಳು ಸಮಯ ಬೇಕು. ಸೋಮವಾರ ಗರ್ಡರ್ ಲಾಂಚಿಂಗ್‌ಗೆ
ಎಲ್ಲ ತಯಾರಿ ಮಾಡಿಕೊಂಡಿದ್ದೆವು. ವ್ಯವಸ್ಥಿತವಾಗಿ, ಸೂಕ್ಷ್ಮವಾಗಿ ಕಾಮಗಾರಿ ನಿರ್ವಹಿಸಬೇಕಿದ್ದು, ರವಿವಾರ ರಾತ್ರಿ ಸುರಿದ ಮಳೆಯಿಂದಾಗಿ ಮಣ್ಣು ಕೆಸರು ಆಗಿರುವುದರಿಂದ ಕ್ರೇನ್‌ಗಳ ಚಾಲನೆಗೆ ಕಷ್ಟವಾಗಿದೆ. ಎರಡು ದಿನ ಲಾಂಚಿಂಗ್ ಕಾರ್ಯ ಮುಂದೂಡಲಾಗಿದೆ. ಮಾರ್ಚ್ ತಿಂಗಳ ಒಳಗೆ ಸೇತುವೆ ಕೆಲಸ ಸಂಪೂರ್ಣಗೊಳ್ಳಲಿದೆ ಎಂದು ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.