ಪೂರ್ವಾಶ್ರಮದಲ್ಲಿ ವಿದ್ಯೆ ಕಲಿತ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದ ಪುತ್ತಿಗೆ ಶ್ರೀ
ವಿದ್ಯೆ ಕಲಿತ ಶಾಲೆ, ನಡೆದಾಡಿದ ಪರಿಸರ, ಬೆಳೆದು ಬಂದ ಊರಿನ ನೆನಪು ಸದಾ ಶಾಶ್ವತವಾಗಿರಲಿ
Team Udayavani, Jan 11, 2024, 7:54 PM IST
ಕಾಪು : ಉಡುಪಿ ಶ್ರೀ ಪುತ್ತಿಗೆ ಮಠಾಧೀಶರು ಪೂರ್ವಾಶ್ರಮದಲ್ಲಿರುವಾಗ ವಿದ್ಯೆ ಕಲಿತ, ಪ್ರಸ್ತುತ ಪುತ್ತಿಗೆ ಮಠದ ಆಡಳಿತದಲ್ಲಿರುವ ಕೆಮ್ಮುಂಡೇಲು ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಭಾವೀ ಪರ್ಯಾಯ ಪೀಠಾಧಿಪತಿ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಗುರುವಾರ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಅವರು, ಪ್ರತೀಯೊಬ್ಬ ವ್ಯಕ್ತಿಗೂ ತಾನು ಕಲಿತ ಶಾಲೆ, ತಾನು ನಡೆದಾಡಿದ ಪರಿಸರ, ತನ್ನನ್ನು ಬೆಳೆಸಿದ ಊರಿನ ನೆನಪು ಶಾಶ್ವತವಾಗಿರಬೇಕು. ವಿಶ್ವ ಸುತ್ತಿದರೂ ನಮ್ಮ ಹುಟ್ಟೂರೇ ನಮಗೆ ಮೇಲಾಗಿರುತ್ತದೆ. ಕೆಮ್ಮುಂಡೇಲು ಊರಿಗೂ, ತಮಗೂ ಮತ್ತು ಪುತ್ತಿಗೆ ಮಠಕ್ಕೂ ಹತ್ತಿರದ ಸಂಬಂಧವಿದೆ. ಎಲ್ಲೂರು, ಕೆಮ್ಮುಂಡೇಲು, ಕುತ್ಯಾರು, ಮಾಣಿಯೂರು, ನಂದಿಕೂರು ಪರಿಸರವು ಪೂರ್ವಾಶ್ರಮದಲ್ಲಿರುವಾಗ ನಾವು ನಿರಂತರವಾಗಿ ಓಡಾಡಿದ ಪ್ರದೇಶವಾಗಿದ್ದು ಆ ನೆನಪುಗಳು ಇಂದಿಗೂ ಅಚ್ಚಳಿಯದೇ ಉಳಿದಿವೆ. ನಾನು ಕಲಿತ ಶಾಲೆ ಮುಚ್ಚುವ ಹಂತಕ್ಕೆ ಬಂದಾಗ ಅದನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡು ಅಭಿವೃದ್ಧಿಗೊಳಿಸುವ ಯೋಜನೆ ಹಾಕಿಕೊಂಡಿದ್ದು ಪ್ರಥಮ ಹಂತದ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಮತ್ತಷ್ಟು ಕಟ್ಟಡಗಳ ಜೋಡಣೆಯೊಂದಿಗೆ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ಸಂಕಲ್ಪಿಸಿದ್ದೇವೆ ಎಂದರು.
ಕೆಮ್ಮುಂಡೇಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ ಶೆಟ್ಟಿ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ವೀರೆಂದ್ರ ಹೆಗ್ಗಡೆ ಸಾಣಿಂಜೆ, ಶ್ರೀ ಪುತ್ತಿಗೆ ಮಠದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ, ಗುತ್ತಿಗೆದಾರ ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು, ಪ್ರಮುಖರಾದ ನಾಗರತ್ನ ರಾವ್, ಕೃಷ್ಣಾನಂದ ರಾವ್, ಚಂದ್ರಶೇಖರ್ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.