ಮಹಿಳೆಯರ ರಕ್ಷಣೆಗಾಗಿ “ರಾಣಿ ಅಬ್ಬಕ್ಕ ಪಡೆ’
ಉಡುಪಿ ಎಸ್‌ಪಿ ನಿಶಾ ಜೇಮ್ಸ್ ಪರಿಕಲ್ಪನೆ
Team Udayavani, Apr 3, 2019, 6:30 AM IST
ಉಡುಪಿ: ಸಾರ್ವಜನಿಕ ಸ್ಥಳಗಳು ಸೇರಿದಂತೆ ನಗರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರ ಮೇಲೆ ಕಣ್ಣಿಟ್ಟು ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಉಡುಪಿಯಲ್ಲಿ ಆರಂಭಿಸಲಾದ “ರಾಣಿ ಅಬ್ಬಕ್ಕ ಪಡೆ’ಗೆ ಎಸ್‌ಪಿ ನಿಶಾ ಜೇಮ್ಸ್ ಅವರು ಮಂಗಳವಾರ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭ ಚಾಲನೆ ನೀಡಿದರು.
ಈ ಹಿಂದೆ ನಿಶಾ ಅವರು ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಆರಂಭಿಸಿದ್ದ “ಓಬವ್ವ ಪಡೆ’, ಸಾಗರದಲ್ಲಿ ಆರಂಭಿಸಿದ್ದ “ರಾಣಿ ಚೆನ್ನಮ್ಮ ಪಡೆ’ಯ ಮಾದರಿಯಲ್ಲಿಯೇ ಉಡುಪಿಯಲ್ಲಿ “ಅಬ್ಬಕ್ಕ ಪಡೆ’ ರಚಿಸಿದ್ದಾರೆ. ಈ ಪಡೆಯಲ್ಲಿ ಮಹಿಳಾ ಎಸ್‌ಐ ಅಥವಾ ಎಎಸ್‌ಐ, ಇಬ್ಬರು ಮಹಿಳಾ
ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಾಗೂ ಓರ್ವ ಚಾಲಕ ಇರುತ್ತಾರೆ. ಸದ್ಯ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ರೇಖಾ ಅವರು ಈ ಪಡೆಯ ನೇತೃತ್ವ ವಹಿಸಿದ್ದಾರೆ.
ಬೇಡಿಕೆ ಬಂದರೆ ವಿಸ್ತರಣೆ
ಮಹಿಳೆಯ ಸುರಕ್ಷೆಗಾಗಿ ಗಸ್ತುವಾಹನ ಸಹಿತ ಪ್ರತ್ಯೇಕ ಪಡೆ ಬೇಕೆಂಬ ಬೇಡಿಕೆ ಇತ್ತು. ಅಬ್ಬಕ್ಕ ಪಡೆ ಮುಖ್ಯವಾಗಿ ಮಹಿಳೆಯರ ಸುರಕ್ಷತೆಗಾಗಿ ಗಸ್ತು ನಡೆಸಿ ಸ್ಥಳದಲ್ಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿದೆ. ಆರಂಭದಲ್ಲಿ ಹಗಲು ವೇಳೆ ನಗರದಲ್ಲಿ ಕಾರ್ಯಾಚರಿಸಲಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಮತ್ತು ಸೌಲಭ್ಯ (ವಾಹನ, ಸಿಬಂದಿ) ಲಭ್ಯತೆ ಆಧಾರದಲ್ಲಿ ಇತರ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ. ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆಯಾಗುತ್ತಿದ್ದರೆ ಸದ್ಯ ಕಂಟ್ರೋಲ್ ರೂಂ ಅಥವಾ ಮಹಿಳಾ ಠಾಣೆಗೆ ದೂರು ನೀಡಬಹುದು. ಮುಂದೆ ಅಬ್ಬಕ್ಕ ಪಡೆಗೆ ಪ್ರತ್ಯೇಕ ಸಂಪರ್ಕ ಸಂಖ್ಯೆ ನೀಡುತ್ತೇವೆ.
-ನಿಶಾ ಜೇಮ್ಸ್ , ಎಸ್‌ಪಿ ಉಡುಪಿ
ಎಲ್ಲಿ ಕಾರ್ಯಾಚರಣೆ?
ಬಸ್ ನಿಲ್ದಾಣ, ಪಾರ್ಕ್ ಪರಿಸರ, ಕಾಲೇಜು, ಶಾಲೆ ಪರಿಸರ ಮೊದಲಾದೆಡೆ ಹೆಚ್ಚಿನ ನಿಗಾ ವಹಿಸಲಿದೆ. ಸದ್ಯ ಉಡುಪಿ ಮತ್ತು ಮಣಿಪಾಲ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿದೆ. ಅಬ್ಬಕ್ಕ ಪಡೆಗೆ ಒದಗಿಸಲಾಗಿರುವ ವಾಹನ ಕೂಡ ಪಿಂಕ್ ಬಣ್ಣವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್ ಅಯ್ಯರ್
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.