ಶಿಕ್ಷಕರ ವರ್ಗಾವಣೆಗೆ ಶೀಘ್ರ ಅಧಿಸೂಚನೆ
ಹೆಮ್ಮಾಡಿಯಲ್ಲಿ ಶಿಕ್ಷಕರೊಂದಿಗೆ ಶಿಕ್ಷಣ ಸಚಿವ ನಾಗೇಶ್ ಸಂವಾದ
Team Udayavani, Oct 7, 2021, 5:30 AM IST
ಕುಂದಾಪುರ: ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ವರ್ಗಾವಣೆ ಪ್ರಕ್ರಿಯೆ ಕುರಿತು ಶೀಘ್ರ ಹೊಸ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಹೆಮ್ಮಾಡಿಯಲ್ಲಿ ಉಡುಪಿ ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಯೋಜಿಸಿದ ಶಿಕ್ಷಕರೊಂದಿ ಗಿನ ಸಂವಾದದಲ್ಲಿ ಅವರು ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಟಿಸಿ ನೀಡಿದಿದ್ದರೆ ಸೂಕ್ತ ಕ್ರಮ
ಈ ಮೊದಲು ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಶಾಲೆಯಿಂದ ವರ್ಗಾವಣೆ ಪತ್ರ ಬಯಸುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವ ಸೂಚನೆಯನ್ನು ಇಲಾಖೆಯಿಂದ ನೀಡಲಾಗಿದೆ. ವರ್ಗಾವಣೆ ಪತ್ರ ನೀಡದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ದಸರಾ ಅನಂತರ ಚಿಣ್ಣರಿಗೂ ಶಾಲೆ
1ನೇ ತರಗತಿಯನ್ನು ಆರಂಭಿ ಸುವ ಕುರಿತು ಈಗಾಗಲೇ ಸಿಎಂಗಳೊಂದಿಗೆ ಮಾತುಕತೆ ನಡೆಸಲಾಗಿದೆ. ದಸರಾ ಬಳಿಕ ಕೋವಿಡ್ ತಾಂತ್ರಿಕ ಸಮಿತಿಯ ಸಭೆ ಕರೆದು ಚರ್ಚೆ ನಡೆಸಿ ಮುಂದಿನ ನಿರ್ಧಾರ ಮಾಡಲಾಗುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಸಾರಿಗೆ ಸಮಸ್ಯೆಯ ಕುರಿತು ಶಾಸಕರು ಈಗಾಗಲೇ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.
ಎಸೆಸೆಲ್ಸಿ ಸಾಧಕರಿಗೆ ಸಮ್ಮಾನ
ಈ ವೇಳೆ ಎಸೆಸೆಲ್ಸಿಯಲ್ಲಿ ಪೂರ್ಣಾಂಕ ಪಡೆದ ವಿ.ಕೆ.ಆರ್. ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅನುಶ್ರೀ, ಪ್ರಣೀತಾ, ಸೃಜನ್, ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯ ಶ್ರೇಯಾ ಮೇಸ್ತ, ಶಂಕರನಾರಾಯಣ ಮದರ್ ಥೆರೆಸಾ ಪ್ರೌಢಶಾಲೆಯ ಅನುಶ್ರೀ ಅವರನ್ನು ಸಮ್ಮಾನಿಸಲಾಯಿತು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಡಿಡಿಪಿಐ ಎನ್. ಎಚ್. ನಾಗೂರ, ಡಿಡಿಪಿಯು ಮಾರುತಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಐಪಿಎಲ್: ಸನ್‌ರೈಸರ್ ಹೈದರಾಬಾದ್‌ಗೆ ಗೆಲುವಿನ ಸಮಾಧಾನ
ಸಂವಾದದ ಪ್ರಮುಖಾಂಶ
– ರಾ. ಶಿಕ್ಷಣ ನೀತಿ ಅನುಷ್ಠಾನಕ್ಕೆ ಏನೆಲ್ಲ ಕ್ರಮಕೈಗೊಳ್ಳಲಾಗಿದೆ. ತರಗತಿವಾರು ಅನುಷ್ಠಾನ ಹೇಗೆ?
ಸ್ವದೇಶಿ ಶಿಕ್ಷಣ ವ್ಯವಸ್ಥೆ ಸಲುವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. 0-5 ತರಗತಿ, 6-8 ತರಗತಿ, 9-12 ತರಗತಿಯಂತೆ ವಿಂಗಡಿಸಿ ಪಠ್ಯಕ್ರಮಗಳನ್ನು ರಚಿಸಲಾಗುತ್ತಿದೆ. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಎಲ್ಲ ಸಿದ್ಧತೆ ನಡೆಯುತ್ತಿದೆ ಎಂದರು.
– ಹೊಸ ಶಿಕ್ಷಣ ನೀತಿ ಬಗ್ಗೆ ಪುಸ್ತಕ ರೂಪದಲ್ಲಿ ಎಲ್ಲ ಶಾಲೆಗಳಿಗೂ ಮಾಹಿತಿ ಕೊಟ್ಟರೆ ಪ್ರಯೋಜನ ?
ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದ್ದು, ಆದಷ್ಟು ಎಲ್ಲ ಶಿಕ್ಷಕರಿಗೂ ಈ ಬಗ್ಗೆ ಸಮಗ್ರ ಮಾಹಿತಿ ನೀಡುವ ಪುಸ್ತಕವನ್ನು ನೀಡಲಾಗುವುದು.
– ಸರಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಆದರೆ ಕೊಠಡಿ, ಶಿಕ್ಷಕರ ಕೊರತೆಯಿದೆ?
ರಾಜ್ಯದಲ್ಲಿ 43,000 ಪ್ರಾಥಮಿಕ, 13,000 ಪ್ರೌಢಶಾಲೆಗಳಿವೆ. ಮಕ್ಕಳೇ ಇಲ್ಲದ ಹಾಗೂ ಶಿಕ್ಷಕರಿಲ್ಲದ ಶಾಲೆಗಳನ್ನು ನೋಡಿದ್ದೇವೆ. ಕಳೆದ ವರ್ಷ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ 10,000 ಶಿಕ್ಷಕರ ನೇಮಕಕ್ಕೆ ಕ್ರಮಗೊಳ್ಳಲಾಗಿತ್ತು. ಕೊಠಡಿ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ದಾನಿಗಳು, ಹಳೆ ವಿದ್ಯಾರ್ಥಿಗಳು ಮುಂದಾಗಬೇಕು. ಗ್ರಾ.ಪಂ.ಗೊಂದು ಮಾದರಿ ಶಾಲೆ ಮಾಡುವ ಯೋಜನೆಯಿದೆ.
-15-20-30 ವರ್ಷ ಸೇವೆ ಸಲ್ಲಿಸಿದರೂ ಭಡ್ತಿ ಪ್ರಕ್ರಿಯೆ ಆಗಿಲ್ಲ?
ಭಡ್ತಿ ಪ್ರಕ್ರಿಯೆ ಕೈಗೊಂಡರೂ ಶಿಕ್ಷಕರೇ ನ್ಯಾಯಾಲಯಕ್ಕೆ ಹೋಗುತ್ತಾರೆ. ಈ ವಿಚಾರದಲ್ಲಿ ಕೆಲವೆಡೆ ಅಸಮತೋಲನ ಉಂಟಾ ಗಿದ್ದು, ಇದನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.