ಶಾಸಕರಿಂದ ರಾ.ಹೆ. 169ರ ಕಾಮಗಾರಿ ಪರಿಶೀಲನೆ
Team Udayavani, Jun 13, 2019, 6:10 AM IST
ಉಡುಪಿ: ಶಾಸಕ ಕೆ. ರಘುಪತಿ ಭಟ್ ಅವರು ಬುಧವಾರ ಮಣಿಪಾಲ-ಉಡುಪಿ ರಾ.ಹೆ. 169ರ ಮಾರ್ಗದ ಪರ್ಕಳ, ಈಶ್ವರ ನಗರ, ಕುಂಜಿಬೆಟ್ಟು ಭಾಗಗಳಲ್ಲಿ ಭೇಟಿ ನೀಡಿ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಮಣಿಪಾಲದ ಚರಂಡಿ ಕಾಮಗಾರಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ, ಪರ್ಕಳ ಪೇಟೆಯ ಗುಂಡಿಗಳನ್ನು ತಾತ್ಕಾಲಿಕ ಕಾಂಕ್ರೀಟ್ ಹಾಕಿ ಮುಚ್ಚುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ…, ಸುಮಿತ್ರಾ ನಾಯಕ್, ಹೆದ್ದಾರಿ ಸಹಾಯಕ ಎಂಜಿನಿಯರ್ ಮಂಜುನಾಥ್, ಕಾಮಗಾರಿ ಗುತ್ತಿಗೆದಾರರು ಉಪಸ್ಥಿತರಿದ್ದರು.