ಉಡುಪಿ: ಮಳೆ ಇಳಿಮುಖ, ಹಾನಿ ಪ್ರಮಾಣ ಏರಿಕೆ
Team Udayavani, Jul 10, 2018, 2:03 PM IST
ಉಡುಪಿ: ಉಡುಪಿ ನಗರ ಮತ್ತು ಗ್ರಾಮಾಂತರದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಸೋಮವಾರ ಜಿಲ್ಲಾಧಿಕಾರಿಯವರು ಕಾಪು, ಉಡುಪಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು.
ಎರಡು ದಿನಗಳಿಂದ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಒಟ್ಟು 8,75,000 ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.
ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಪೋಕ್ರ ಪೂಜಾರಿ ಅವರ ಮನೆಗೆ ನೀರು ನುಗ್ಗಿ ಹಾನಿ 2 ಲಕ್ಷ ರೂ. ಹಾನಿ, ಮÇÉಾರು ಜಯರಾಣ್ಯ ಮನೆ ಸಂಪೂರ್ಣ ನಾಶಗೊಂಡು 1.5 ಲಕ್ಷ ರೂ. ನಷ್ಟ ಸಂಭವಿಸಿದೆ.
ಉಡುಪಿ ಜಿಲ್ಲೆ: 3.71 ಕೋ.ರೂ. ಹಾನಿ, 76 ಲ.ರೂ. ಪರಿಹಾರ ವಿತರಣೆ
ಉಡುಪಿ ಜಿಲ್ಲೆಯಲ್ಲಿ ಎ. 1ರಿಂದ ಜು. 9ರ ವರೆಗೆ ಮಳೆಯಿಂದಾದ ಹಾನಿಯ ಮತ್ತು ನೀಡಲಾದ ಪರಿಹಾರ ವಿವರವನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ. ಪ್ರಕೃತಿ ವಿಕೋಪದ 1,076 ಪ್ರಕರಣಗಳಿಗೆ ಸಂಬಂಧಿಸಿ 3,71,46,443 ರೂ. ನಷ್ಟ ಸಂಭವಿಸಿದ್ದು, 828 ಪ್ರಕರಣಗಳಿಗೆ ಸಂಬಂಧಿಸಿ 76,57,082 ರೂ. ಪರಿ ಹಾರ ವಿತರಿಸಲಾಗಿದೆ. ಇದರಲ್ಲಿ ರಸ್ತೆ, ಸೇತುವೆ, ವಿದ್ಯುತ್ ಕಂಬ ಹಾನಿ ಸೇರಿಲ್ಲ.
ನಾಲ್ವರು ಬಲಿ
ಜಿಲ್ಲೆಯಲ್ಲಿ ಮಳೆ ಸಂಬಂಧಿ ಪ್ರಕೃತಿ ವಿಕೋಪಕ್ಕೆ ನಾಲ್ವರು ಬಲಿಯಾಗಿದ್ದು, ತಲಾ 5 ಲ.ರೂ.ನಂತೆ ಒಟ್ಟು 20 ಲ.ರೂ., ಸಿಡಿಲಿನಿಂದ ಗಾಯಗೊಂಡ ಇಬ್ಬರಿಗೆ 16,900 ರೂ. ಪರಿಹಾರ ನೀಡಲಾಗಿದೆ. 14 ಜಾನುವಾರುಗಳು ಮೃತಪಟ್ಟು 3.67 ಲ.ರೂ. ನಷ್ಟ ಸಂಭವಿಸಿದ್ದು, 9 ಜಾನುವಾರು ಬಾಬ್ತು 1.79 ಲ.ರೂ. ಪರಿಹಾರವನ್ನು ವಿತರಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.