ನೈಸರ್ಗಿಕ ವಿಧಾನದಿಂದ ವೈಜ್ಞಾನಿಕ ವಿಧಾನದೆಡೆಗೆ ಮಳೆಕೊಯ್ಲು
ಜಲ ಸಂಪನ್ಮೂಲ: ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ
Team Udayavani, Aug 16, 2019, 5:54 AM IST
ಕೋಟ: ಮಾಬುಕಳ ಐರೋಡಿಯ ರಾಮನಾಥ ಅಲ್ಸೆಯವರು ಹತ್ತಾರು ವರ್ಷಗಳಿಂದ ನೈಸರ್ಗಿಕ ವಿಧಾನಗಳ ಮೂಲಕ ಮನೆಯ ಪರಿಸರದಲ್ಲಿ ನೀರಿಂಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗಾಗಿ ಸುತ್ತ-ಮುತ್ತ ನೀರಿನ ಸಮಸ್ಯೆ ಇದ್ದರೂ ಇವರಿಗೆ ಆ ಸಮಸ್ಯೆ ಇಲ್ಲ. ಉದಯವಾಣಿ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತವಾಗಿ ಮಳೆನೀರು ಕೊಯ್ಲು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮರ್ಪಕ ಮಳೆನೀರು ಕೊಯ್ಲಿಗೆ ಮುಂದಾಗಿದ್ದಾರೆ.
ಮನೆಯ ಮೇಲ್ಛಾವಣಿಯ ನೀರನ್ನು ಪೈಪ್‌ನ ಸಹಾಯದಿಂದ ಎಚ್.ಡಿ.ಪಿ.ಇ. ಫಿಲ್ಟರ್‌ಗೆ ಹರಿಯುವಂತೆ ಮಾಡಿ ಅದರಿಂದ ನೇರವಾಗಿ ನೀರು ಬಾವಿ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ಎಚ್.ಡಿ.ಪಿ.ಇ. ಫಿಲ್ಟರ್‌ಅಳವಡಿಸಿರುವುದರಿಂದ ಹೆಚ್ಚಿನ ಶ್ರಮವಿಲ್ಲದೆ ನೀರು ಶುದ್ಧಿಗೊಳ್ಳುತ್ತದೆ. ಇದಕ್ಕಾಗಿ ಇವರಿಗೆ ಸುಮಾರು 20ಸಾವಿರ ತನಕ ಖರ್ಚಾಗಿದೆ.
ನೈಸರ್ಗಿಕವಾಗಿಯೇ ನೀರಿಂಗಿಸುವ ವಿಧಾನ
ಕರಾವಳಿಯ ಮೆಕ್ಕಲು (ಮರಳು) ಮಣ್ಣಿನಲ್ಲಿ ನೈಸರ್ಗಿಕ ಸುಲಭವಾಗಿ ನೀರಿಂಗಿಸಬಹುದು. ಹೇಗೆಂದರೆ ಈ ಮಣ್ಣು ಬೇಗ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮನೆಯ ಸುತ್ತಲಿನ ತೆಂಗು ಮುಂತಾದ ಮರದ ಕಟ್ಟೆಯನ್ನು ಎರಡು-ಮೂರು ಅಡಿ ಆಳ ತೋಡಿದರೆ ಮಳೆಗಾಲದಲ್ಲಿ ಇದರಲ್ಲಿ ನೀರು ನಿಂತು ಭೂಮಿ ಸೇರುತ್ತದೆ ಹಾಗೂ ಕಾಂಪೌಂಡ್ ಇರುವ ಮನೆಗಳಲ್ಲಿ ನೀರು ಹೊರ ಹೋಗಲು ಅಳವಡಿಸುವ ಪೈಪ್ ಅನ್ನು ಮಾಮೂಲಿಗಿಂತ ಸ್ವಲ್ಪ ಎತ್ತರಕ್ಕೆ ಅಳವಡಿಸಿದರೆ ಸುತ್ತಲು ನೀರು ನಿಂತು ಅದನ್ನು ಭೂಮಿ ಹೀರಿಕೊಳ್ಳುತ್ತದೆ. ಈ ರೀತಿ ಮಾಡುವಾಗ ಸೊಳ್ಳೆ ಉತ್ಪಾದನೆಯಾಗದಂತೆ ಹಾಗೂ ಕಂಪೌಂಡ್‌ಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲ್ಸೆಯವರು ಈ ವಿಧಾನವನ್ನು ಹತ್ತಾರು ವರ್ಷದಿಂದ ಅಳವಡಿಸಿಕೊಂಡಿದ್ದರು.
ಇತರರಿಗೆ ಮಾರ್ಗದರ್ಶನ ರಾಮನಾಥ ಅಲ್ಸೆಯವರು ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿರುವ ಮಳೆನೀರು ಕೊಯ್ಲು ವಿಧಾನವನ್ನು ಇತರರಿಗೆ ಪರಿಚಯಿಸಿ ಅಳವಡಿಸಿಕೊಳ್ಳುವಂತೆ ಪ್ರೇರೆಪಿಸುತ್ತಿದ್ದಾರೆ ಹಾಗೂ ಜೀವಜಲ ಎನ್ನುವ ಸಂಸ್ಥೆಯ ಮೂಲಕ ಮಳೆನೀರು ಕೊಯ್ಲು ಕುರಿತು ಜಾಗೃತಿ, ಮಾಹಿತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ನೀರಿನ ಸಮಸ್ಯೆ ಎದುರಾಗಿಲ್ಲ
ಹಲವು ವರ್ಷದಿಂದ ವೈಜ್ಞಾನಿಕ ವಿಧಾನದ ಮೂಲಕ ಮನೆಯ ವಠಾರದಲ್ಲಿ ನೀರಿಂಗಿಸುತ್ತಿದ್ದ ಪರಿಣಾಮವಾಗಿ ನಮ್ಮ ಮನೆಯಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. ಇದೀಗ ವೈಜ್ಞಾನಿಕ ವಿಧಾನದ ಮೂಲಕವೇ ಮಳೆ ನೀರು ಕೊಯ್ಲು ಅಳವಡಿಸಿಕೊಂಡಿದ್ದೇನೆ ಹಾಗೂ ಆಸಕ್ತರಿಗೆ ಮಾಹಿತಿ, ಮಾರ್ಗದರ್ಶನ ಕೂಡ ನೀಡುತ್ತಿದ್ದೇನೆ.
-ಎ. ರಾಮಾನಾಥ ಅಲ್ಸೆ,
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.