ವಿವಿಧೆಡೆ ಮಳೆ; ಹಾನಿ
Team Udayavani, Apr 24, 2019, 6:25 AM IST
ಉಡುಪಿ/ಮಂಗಳೂರು: ಕರಾವಳಿಯ ವಿವಿಧೆಡೆ ಮಂಗಳವಾರ ಸಂಜೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆ ಸುರಿಯಿತು. ಕೆಲವೆಡೆ ಭಾರೀ ಗಾಳಿ ಬೀಸಿ ಹಾನಿಯಾಗಿದೆ.
ಮಣಿಪಾಲ, ಉಡುಪಿಯಲ್ಲಿ ಸಿಡಿಲು ಸಹಿತ ಗಾಳಿ ಮಳೆಯಾಯಿತು. ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ ಉತ್ತಮ ಮಳೆಯಾದರೆ, ಬೆಳ್ತಂಗಡಿ, ಕನ್ಯಾಡಿ, ಗುರಿಪ್ಪಳ್ಳ, ಸವಣಾಲು, ಪುಂಜಾಲಕಟ್ಟೆ, ಪುತ್ತೂರು, ಉಪ್ಪಿನಂಗಡಿ, ವೇಣೂರುಗಳಲ್ಲಿ ಸಾಧಾರಣ ಮಳೆಯಾಗಿದೆ.
ಕಾಪು: ಗಾಳಿಯಿಂದ ಹಾನಿ
ಕಾಪು: ಭಾರೀ ಸುಳಿಗಾಳಿ ತಾಲೂಕಿನಲ್ಲಿ ಹಾನಿ ಎಸಗಿದೆ.ರಾ.ಹೆ. 66ರಲ್ಲಿ ನೀರು ಶೇಖರಗೊಂಡು ತೊಂದರೆಯಾಯಿತು. ಕಾಪು, ಮೂಳೂರು, ಉಚ್ಚಿಲ, ಕಟಪಾಡಿ ಶಿರ್ವ ಮತ್ತು ಮೂಡುಬೆಳ್ಳೆ ಮೊದಲಾ ದೆಡೆ ಅಂಗಡಿ ಮುಂಗಟ್ಟುಗಳ ಶೀಟುಗಳು ಹಾರಿ ಹೋಗಿವೆ. ಕೆಲವು ದ್ವಿಚಕ್ರ ವಾಹನಗಳು ಉರುಳಿದ್ದವು.
ಮೂಡುಬೆಳ್ಳೆ ಕಪ್ಪಂದಕರಿಯದ ಬಳಿ ಮರ ಬಿದ್ದು ವಿದ್ಯುತ್ ಕಂಬ, ಮೂಡುಬೆಳ್ಳೆ ಗೀತಾ ಮಂದಿರದ ಬಳಿ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಸ್ಥಗಿತಗೊಂಡಿತ್ತು. ಮೂಡುಬೆಳ್ಳೆ ಲಯನ್ಸ್ ಕ್ಲಬ್ ಕಟ್ಟಡದ ಸಿಮೆಂಟ್ ಶೀಟ್ ಛಾವಣಿ ಹಾನಿಗೀಡಾಗಿದೆ.
ಹೆಬ್ರಿ, ಪೆರ್ಡೂರು: ಹಾನಿ
ಹೆಬ್ರಿ ಪರಿಸರದಲ್ಲಿ ಗಾಳಿ, ಗುಡುಗು – ಮಿಂಚು ಸಹಿತ ಮಳೆಯಾಗಿದೆ. ಮುದ್ರಾಡಿ ಗ್ರಾ.ಪಂ.ನ ಮಾರುಕಟ್ಟೆ ಛಾವಣಿ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ. ಹೆಬ್ರಿ, ಮುದ್ರಾಡಿ, ಪಾಡಿ ಗಾರ, ಸೋಮೇಶ್ವರ, ಪೆರ್ಡೂರು, ಹಿರಿಯಡಕಗಳಲ್ಲಿ ರಸ್ತೆಗೆ ಮರಗಳು ಉರುಳಿ ತೊಂದರೆಯಾಗಿದೆ.
ಕಟಪಾಡಿ ಬಳಿಯ ಅಂಕುದ್ರು ಎಂಬಲ್ಲಿ ತೆಂಗಿನ ಮರ ಮುರಿದು ಬಿದ್ದು ನಷ್ಟ ಸಂಭವಿಸಿದೆ.
ಬ್ರಹ್ಮಾವರ, ಬೈಕಾಡಿ ಪರಿಸರದಲ್ಲಿ ಸುಂಟರಗಾಳಿ ಬೀಸಿದ್ದು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು ಪರದಾಡಿದರು.
ಅಜೆಕಾರು ಸನಿಹದ ಎಳ್ಳಾರೆ ಹೊಯ್ಗೆಜೆಡ್ಡು ಎಂಬಲ್ಲಿ ಮನೆಯ ಮೇಲಾ^ವಣಿ ಹಾರಿ ಹೋಗಿದೆ. ಹೊಟೇಲೊಂದರ ಛಾವಣಿಗೆ ಹಾನಿಯಾಗಿದೆ. ಮತ್ತೂಂದೆಡೆ ಮನೆ ಮೇಲೆ ತೆಂಗಿನ ಮರ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.