ಚರಂಡಿ ಸೇರುತ್ತಿಲ್ಲ ಮಳೆನೀರು!
Team Udayavani, Jun 18, 2019, 5:50 AM IST
ಉಡುಪಿ: ರಾ.ಹೆ. 169ಎ ಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮೊದಲ ಮಳೆಗೆ ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ. ಅವೈಜ್ಞಾನಿಕ ಕಾಮಗಾರಿ ಯಿಂದಾಗಿ ರಸ್ತೆಯಂಚಿನಲ್ಲಿರುವ ಮಣ್ಣು ರಸ್ತೆಗೆ ಬಂದಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಮಣಿಪಾಲ-ಪರ್ಕಳ ರಸ್ತೆಯ ಬದಿ ಮಣ್ಣುಗಳನ್ನು ಅಗೆದಿದ್ದು, ಹೊಂಡದಲ್ಲಿ ನೀರು ತುಂಬಿಕೊಂಡು ಸವಾರರಿಗೆ ಪಾದಚಾರಿಗಳಿಗೆ ಗೋಚರವಾಗುತ್ತಿಲ್ಲ.
ಪರ್ಕಳದಿಂದ ಕಡಿಯಾಳಿವರೆಗೆ ಚರಂಡಿ ನಿರ್ಮಾಣವಾಗಿದ್ದರೂ ಕೂಡ ಮಳೆನೀರು ಚರಂಡಿಯಲ್ಲಿ ಹಾದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲದ ಕಾರಣ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಮಳೆನೀರು ಹರಿದು ರಸ್ತೆಯ ಅಂಚುಗಳು ಕೂಡ ಬಿರುಕುಬಿಟ್ಟಿವೆ. ಲಕ್ಷ್ಮೀಂದ್ರ ನಗರದ ರಸ್ತೆ ಸಮೀಪ ಬಿರುಕುಬಿಟ್ಟಿದ್ದು ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ. ನೀರು ನಿಂತಾಗ ಇದು ಗೋಚರಕ್ಕೂ ಬರುತ್ತಿಲ್ಲ. ರಸ್ತೆಯಲ್ಲಿ ಭಾರೀ ಪ್ರಮಾಣ ನೀರು ಹರಿದು ಹೋಗುತ್ತಿದೆ. ರಸ್ತೆಹೊಂಡ, ನೀರಿನಿಂದಾಗಿ ಸವಾರರು ಕಂಗಾಲಾಗುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.