ರಾಮ ಮಂದಿರ: ಧಾರ್ಮಿಕ ಅನುಷ್ಠಾನ ಅಭಿಯಾನ
Team Udayavani, Dec 21, 2018, 10:20 AM IST
ಉಡುಪಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಅತಿ ಶೀಘ್ರ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲು ದೈವಾನುಗ್ರಹ ಪ್ರಾಪ್ತಿಗಾಗಿ ಸಂಕಲ್ಪ ಮಾಡಿ ಡಿ. 18ರ ಗೀತಾ ಜಯಂತಿಯಿಂದ 9 ದಿನಗಳ ಕಾಲ ದೇಶಾದ್ಯಂತ ಧಾರ್ಮಿಕ ಅನುಷ್ಠಾನ ನಡೆಸಲು ಸಾಧುಸಂತರು ಕರೆ ನೀಡಿದ್ದು ಅದರಂತೆ ಮಂಗಳೂರು ವಿಭಾಗದ ಎಲ್ಲ ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ಧಾರ್ಮಿಕ ಅನುಷ್ಠಾನ ಸಂಕಲ್ಪ ಅಭಿಯಾನ ಜರಗಲಿದೆ ಎಂದು ವಿಶ್ವಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.
ಪ್ರತಿಯೋರ್ವ ಹಿಂದೂ ವೈಯಕ್ತಿಕವಾಗಿ 9 ದಿನಗಳ ಕಾಲ ಒಂದು ಮಾಲೆ (108) “ಶ್ರೀರಾಮ ಜಯ ರಾಮ ಜಯ ಜಯ ರಾಮ’ ರಾಮತಾರಕ ಮಂತ್ರ ಜಪ ಮಾಡಬೇಕು, ಪ್ರತಿ ನಗರ, ಗ್ರಾಮ, ಬಡಾವಣೆಗಳ ದೇವಸ್ಥಾನ, ಭಜನ ಮಂದಿರ ಮತ್ತು ಇತರ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಹಿಂದೂಗಳು ಒಟ್ಟು ಸೇರಿ ಒಂದು ಗಂಟೆ ಕಾಲ ಸಾಮೂಹಿಕ ಭಜನೆ, ಹನುಮಾನ್ ಚಾಲೀಸಾ, ಗೀತಾ ಪಾರಾಯಣ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಇತ್ಯಾದಿ ಇಷ್ಟದೇವತಾ ಜಪ ಮಾಡಬೇಕು. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಮೂಹಿಕ ಹೋಮ, ಹವನ, ಅಭಿಷೇಕ ಹಾಗೂ ಪಠಣ ಮಾಡಬೇಕೆಂಬ ಸಾಧುಸಂತರ ಕರೆಯಂತೆ ಎಲ್ಲರೂ ಅನುಷ್ಠಾನಗೊಳಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ದತ್ತಜಯಂತಿ: ಸಿಎಂಗೆ ಆಹ್ವಾನ
ಬಜರಂಗ ದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ದೈವಭಕ್ತರು. ಈಗ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮಠಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ದತ್ತ ಜಯಂತಿ ಸಂದರ್ಭ ದತ್ತಪೀಠಕ್ಕೆ ಬಂದು ದತ್ತ ಪಾದುಕೆ ದರ್ಶನ ಮಾಡಬೇಕು. ಅವರಿಗೆ ನಮ್ಮ ವತಿಯಿಂದ ಆಹ್ವಾನ ನೀಡುತ್ತಿದ್ದೇವೆ ಎಂದರು.
ಈ ಬಾರಿ ರಾಜ್ಯದಿಂದ ಸುಮಾರು 50,000 ಮಂದಿ ದತ್ತ ಮಾಲಾಧಾರಿಗಳು ದತ್ತಜಯಂತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೃಹತ್ ಶೋಭಾ ಯಾತ್ರೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದತ್ತ ಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ನೀಡಬೇಕು. ಅರ್ಚಕರ ನೇಮಕ ವಾಗಬೇಕು. ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಅವರು ಹೇಳಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಮಂದಾರ್ತಿ, ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಹಿಂಪ ಸಂಘಟನ ಕಾರ್ಯದರ್ಶಿ ಕುಮಾರ್ ಸಿಂಧೂವಾಲಾ ಪತ್ರಿಕಾಗೋಷ್ಠಿಯಲ್ಲಿದ್ದರು.
ಉಡುಪಿ, ಮಂಗಳೂರಿನಲ್ಲಿ
ಉಡುಪಿ ಜಿಲ್ಲಾ ಮಟ್ಟದ ಸಾಮೂಹಿಕ ರಾಮತಾರಕ ಮಂತ್ರ ಪಠಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ
ಡಿ. 25ರಂದು ಬೆಳಗ್ಗೆ 10ರಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರಗಲಿದೆ. ಡಿ. 26ರಂದು ಮಂಗಳೂರಿನ ಕದ್ರಿ ಶ್ರೀಕೃಷ್ಣ ಮಂದಿರ ದಲ್ಲಿ ಶ್ರೀ ಸೀತಾರಾಮ ದೇವರ ಪ್ರತಿಷ್ಠೆ, ರಾಮತಾರಕ ಹೋಮ ಹಾಗೂ ನಿರಂತರ ರಾಮನಾಮ ಸಂಕೀರ್ತನೆ ನಡೆಯಲಿದೆ. ಡಿ. 26ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಾಮೂಹಿಕ ವಿಜಯ ಮಹಾಮಂತ್ರ, ಜಪ ಹೋಮ ತರ್ಪಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಶರಣ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.