ಶಿರ್ವ :ಮನೆಯಲ್ಲೇ ರಂಜಾನ್ ಆಚರಣೆ
Team Udayavani, May 13, 2021, 11:56 AM IST
ಶಿರ್ವ: ಕೋವಿಡ್ 2ನೇ ಅಲೆಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌ಗೆ ನಿರ್ಬಂಧ ವಿರುವುದರಿಂದಾಗಿ ಗುರುವಾರ ಶಿರ್ವ ಪರಿಸರದ ಮುಸಲ್ಮಾನ ಬಾಂಧವರು ಮನೆಗಳಲ್ಲಿಯೇ ರಂಜಾನ್ ಹಬ್ಬದ ನಮಾಜ್ ನೆರವೇರಿಸಿ ಮನೆಮಂದಿಯೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಖಾಜಿಯವರ ನಿರ್ದೇಶನದ ಮೇರೆಗೆ ಮನೆಯಲ್ಲಿಯೇ ಎಲ್ಲರೂ ನಮಾಜ್ ನೆರವೇರಿಸುವಂತೆ ಮುಸಲ್ಮಾನ ಬಾಂಧವರಿಗೆ ವಾಟ್ಸಪ್ ಗ್ರೂಪ್ ಮೂಲಕ ಸಲಹೆ ನೀಡಿದ್ದು, ಎಲ್ಲರೂ ಮನೆಯಲ್ಲಿಯೇ ನಮಾಜ್ ನೆರವೇರಿಸಿದ್ದಾರೆ. ಅಗತ್ಯವಿದ್ದವರು ತನ್ನನ್ನು ಸಂಪರ್ಕಿಸುವಂತೆ ತಿಳಿಸಿದ್ದಾಗಿ ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಜನಾಬ್ ಸಿರಾಜುದ್ದೀನ್ ಝೈನಿ ತಿಳಿಸಿದ್ದಾರೆ.
ಇದನ್ನೂ ಓದಿ:ಕರ್ಫ್ಯೂ ಕಟ್ಟು ನಿಟ್ಟು : ಮುಂದುವರಿದ ವಾಹನ ಜಪ್ತಿ
ಕೋವಿಡ್ ಮಹಾಮಾರಿಯಿಂದಾಗಿ ನೆರೆಹೊರೆಯವರೊಂದಿಗೂ ಶುಭಾಶಯ ವಿನಿಮಯ ಮಾಡಿಕೊಳ್ಳಲು ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಂಜಾನ್ ಹಬ್ಬದ ಪ್ರಾರ್ಥನೆಯೊಂದಿಗೆ ಕೋವಿಡ್ ಭೀತಿ ದೂರವಾಗಿ ನೆಮ್ಮದಿಯ ಜನಜೀವನ ನೆಲೆಗೊಳ್ಳಲಿ ಎಂದು ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ /ಹಾಲಿ ಸದಸ್ಯ ಹಸನಬ್ಬ ಶೇಕ್ ಆಶಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.