ರಾಮಮಂದಿರ ನಿರ್ಣಯ: ಗಣೇಶ ರಾವ್‌ ಆಶಯ

Team Udayavani, Oct 6, 2017, 7:25 AM IST

ganesh-rao.jpg

ಉಡುಪಿ: ಉಡುಪಿಯಲ್ಲಿ  ನ. 24 ರಿಂದ 26ರ ವರೆಗೆ ನಡೆಯುವ ಧರ್ಮ ಸಂಸದ್‌ನಲ್ಲಿ 2,000ದಿಂದ 3,000 ಸಾಧುಸಂತರು ಪಾಲ್ಗೊಳ್ಳುವರು. ಇವರನ್ನು ಮನೆ ಮನೆಗಳಲ್ಲಿ ಉಳಿಸಿಕೊಳ್ಳುವ ಪ್ರಸ್ತಾವವಿದೆ. ಧರ್ಮ
ಸಂಸದ್‌ಗೆ ಸುಮಾರು 10 ಕೋ.ರೂ. ವೆಚ್ಚ ತಗಲುವ ನಿರೀಕ್ಷೆ ಇದೆ.

ಪೇಜಾವರ ಮಠದ ವಿಜಯಧ್ವಜ ಅತಿಥಿ ಗೃಹದಲ್ಲಿರುವ ಧರ್ಮಸಂಸದ್‌ ಕಚೇರಿಯಲ್ಲಿ ಗುರುವಾರ ವೆಬ್‌ಸೈಟ್‌ ಅನಾವರಣ ಸಮಾ ರಂಭದಲ್ಲಿ ಈ ಮಾಹಿತಿಗಳನ್ನು ಪ್ರಕಟಿಸ ಲಾಯಿತು. ಮಂಗಳೂರಿನ ಕರಾವಳಿ ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ ರಾವ್‌ ಅವರು ವೆಬ್‌ಸೈಟ್‌ ಅನಾವರಣಗೊಳಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಧರ್ಮಸಂಸದ್‌ ಅಧಿವೇಶನ ನಿರ್ಣಯ ತಳೆಯುವಂತಾಗಲಿ. ಇದು ಸಮಸ್ತ ಹಿಂದೂ ಸಮಾಜದ ಆಶಯವೂ ಆಗಿದೆ ಎಂದು ಹೇಳಿದರು.

ಧರ್ಮಸಂಸದ್‌ ಅಧಿವೇಶನ ಸಾಮಾನ್ಯ ಕಾರ್ಯಕರ್ತರ ಶ್ರಮದಿಂದ ಯಶಸ್ವಿಯಾಗಿ ನಡೆಯಲಿದೆ. ಕಾರ್ಯಕರ್ತರೇ ನಿಜವಾದ ಶಕ್ತಿ. ಅಧಿವೇಶನಕ್ಕೆ 10 ಕೋ.ರೂ. ತಗಲುವುದಾದರೂ ಸಶಕ್ತ ಹಿಂದೂ ಸಮಾಜಕ್ಕೆ ಹಣಕಾಸಿನ ಮುಗ್ಗಟ್ಟು ಬಾರದು ಎಂದು ಗಣೇಶ ರಾವ್‌ ಹೇಳಿದರು. 

ಈಗಾಗಲೇ ಭಾರತ ಪ್ರಗತಿಯತ್ತ ಸಾಗುತ್ತಿದೆ. ಅದೇ ರೀತಿ ಪೇಜಾವರ ಶ್ರೀಗಳ ಪಂಚಮ ಪರ್ಯಾಯದಲ್ಲಿ ನಡೆಯುತ್ತಿರುವ ಧರ್ಮ ಸಂಸದ್‌ ಅಧಿವೇಶನ ಸಮಗ್ರ ಹಿಂದೂ ಸಮಾಜದ ಸಂಘಟನೆಗೆ ಪೂರಕವಾಗಲಿ ಎಂದು ರಾವ್‌ ಹಾರೈಸಿದರು. 

ಅಧ್ಯಕ್ಷತೆ ವಹಿಸಿದ್ದ  ಸಂಸದೆ ಶೋಭಾ ಕರಂದ್ಲಾಜೆ ಅವರು, ಲವ್‌ ಜೆಹಾದ್‌, ಭಯೋ ತ್ಪಾದನೆ, ಐಸಿಸ್‌ ಚಟುವಟಿಕೆಗಳ ವಿರುದ್ಧ ಹಿಂದೂ ಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸ ಬೇಕಾಗಿದೆ ಎಂದು ಕರೆ ನೀಡಿದರು. 

ಪ್ರಸ್ತಾವನೆಗೈದ ಧರ್ಮಸಂಸದ್‌ ಪ್ರಧಾನ ಕಾರ್ಯದರ್ಶಿ ಪ್ರೊ| ಎಂ.ಬಿ. ಪುರಾಣಿಕ್‌ ಅವರು, ಉಡುಪಿ ನಗರದ ಮಠ, ಕಲ್ಯಾಣ ಮಂಟಪ, ಮನೆಯವರು ಸ್ವಯಂ ಆಸಕ್ತಿ ವಹಿಸಿ ಸಾಧು ಸಂತರನ್ನು ಉಳಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಅಂತಹವರು ವೆಬ್‌ಸೈಟ್‌ನಲ್ಲಿ (www.dharmasamsad.in) ಲಾಗ್‌ಇನ್‌ ಆಗಿ ವಿವರಗಳನ್ನು ಕಳುಹಿಸಿದರೆ ಅವರ ಸಂಪರ್ಕ ಸಾಧಿಸಲಾಗುವುದು ಎಂದರು. 

ನೆರವಿನ ಘೋಷಣೆ
ಮೂಡಬಿದಿರೆ ಆಳ್ವಾಸ್‌ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ 5 ಲ.ರೂ., ಕರಾವಳಿ ಸಮೂಹ ಸಂಸ್ಥೆ ಅಧ್ಯಕ್ಷ ಗಣೇಶ ರಾವ್‌ 5 ಲ.ರೂ., ಸಂಸದೆ ಶೋಭಾ ಕರಂದ್ಲಾಜೆ 1 ಲ.ರೂ. ನೆರವು ನೀಡಿರುವುದಾಗಿ ಎಂ.ಬಿ. ಪುರಾಣಿಕ್‌ ಘೋಷಿಸಿದರು. 

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ರಮೇಶ್‌ ಬಂಗೇರ, ಹಣಕಾಸು ಸಮಿತಿ ಅಧ್ಯಕ್ಷ ಅಚ್ಯುತ ಅಮೀನ್‌ ಕಲ್ಮಾಡಿ ಉಪಸ್ಥಿತರಿದ್ದರು. 

ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ  ಪಿ. ವಿಲಾಸ ನಾಯಕ್‌ ಸ್ವಾಗತಿಸಿ, ಬಜರಂಗ ದಳದ ವಿಭಾಗ ಸಂಚಾಲಕ ಸುನಿಲ್‌ ಕೆ.ಆರ್‌. ವಂದಿಸಿದರು. ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಟಾಪ್ ನ್ಯೂಸ್

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

11

Udupi: ಜಿಲ್ಲಾಧಿಕಾರಿ ಕಚೇರಿಯಲ್ಲೇ ನೆಟ್‌ವರ್ಕ್‌ ಸಮಸ್ಯೆ!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.