ಶಾಸಕರು ಲಸಿಕಾ ಕೇಂದ್ರದತ್ತ ದೌಡಾಯಿಸಿ ಜನರ ಸಮಸ್ಯೆಯನ್ನು ಆಲಿಸಬೇಕು : ರಮೇಶ್ ಕಾಂಚನ್
Team Udayavani, May 12, 2021, 3:30 PM IST
ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಘುಪತಿ ಭಟ್ ರವರೆ ಜನ ಇವತ್ತು ಕೋವಿಡ್ ಎರಡನೇ ಅಲೆಯಿಂದ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕ್ಷೇತ್ರದ ಜನರು ನಿಮ್ಮ ಮೇಲೆ ಬಹಳಷ್ಟು ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಈ ಸಮಯದಲ್ಲಿ ಜನರ ಸಮಸ್ಯೆಯನ್ನು ಆಲಿಸಿ ಎಂದು ನಗರಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಆಸ್ಪತ್ರೆಗಳು ಈಗಾಗಲೇ ಕೋವಿಡ್ ರೋಗಿಗಳಿಂದ ತುಂಬಿತುಳುಕಿದ್ದು, ತೀವ್ರ ಅಸ್ವಸ್ಥ ಗೊಂಡವರಿಗೆ ವೆಂಟಿಲೇಟರ್ ಐಸಿಯು ದೊರೆಯುತ್ತಿಲ್ಲ. ನಿಮ್ಮ ಆಡಳಿತದಲ್ಲಿ ಜನರ ಪ್ರಾಣದ ಗತಿ ದೇವರೇ ಗತಿ ಎಂಬಂತೆ ಆಗಿದೆ ಎಂದು ಹೇಳಿದರು.
ಜನರು ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ಬಹಳಷ್ಟು ಭಯಭೀತರಾಗಿದ್ದು ಕೋವಿಡ್ ಲಸಿಕೆ ಪಡೆಯಲು ಹಾತೊರೆಯುತಿದ್ದಾರೆ. ಆದರೆ ಲಸಿಕಾ ಕೇಂದ್ರದಲ್ಲಿ ಸರಿಯಾಗಿ ಲಸಿಕೆ ದೊರೆಯುತ್ತಿಲ್ಲ. 45ವರುಷ ಮೇಲ್ಪಟ್ಟವರು ಮೊದಲ ಡೋಸ್ ಪಡೆದಿದ್ದು ಅವರಿಗೆ ಎರಡನೇ ಡೋಸ್ ಪಡೆಯಲು ಸಾಧ್ಯವಾಗುತಿಲ್ಲ. ಇದರಲ್ಲಿ ಹೆಚ್ಚಿನವರು ಹಿರಿಯ ನಾಗರೀಕರಾಗಿದ್ದು ಹಲವು ಬಾರಿ ಲಸಿಕಾ ಕೇಂದ್ರಕ್ಕೆ ಬಂದು ಕಾದು ಕಾದು ಸುಸ್ತಾಗಿ ಹಿಂತಿರುಗಿರುತ್ತಿದ್ದಾರೆ ಎಂದರು.
ಇದನ್ನೂ ಓದಿ :ಅಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಯೂನಿವರ್ಸ್ ಬಾಸ್..!
ಮೊದಲು ಡೋಸ್ ಕೋವಾಕ್ಸಿನ್ ಪಡೆದವರಿಗೆ ಎರಡನೇ ಡೋಸ್ ಸಿಗುತ್ತಿಲ್ಲ. ಈಗ ಕೇವಲ ಕೋವಿ ಶೀಲ್ಡ್ ದೊರೆಯುತ್ತಿದೆ. ಹಾಗು ಬಹಳಷ್ಟು ಜನರ ವ್ಯಾಕ್ಸಿನ್ ಪಡೆಯುವ ಅವಧಿಯು ಮುಗುಯುತ್ತಿದೆ. ಲಸಿಕೆ ಪಡೆಯಲು ಸಂಪೂರ್ಣ ಆನ್ಲೈನ್ ವ್ಯವಸ್ಥೆ ಇದ್ದು ಇದರಬಗ್ಗೆ ಜನರು ಪರದಾಡುವಂತೆ ಆಗಿದೆ. 18ರಿಂದ 44ವರ್ಷದವರಿಗು ವ್ಯಾಕ್ಸಿನೇಷನ್ ಆರಂಭ ವಾಗಿದ್ದು ಆನ್ಲೈನ್ ಬುಕ್ಕಿಂಗ್ ಬಹಳಷ್ಟು ಗೊಂದಲ ಇದೆ. ವೆಬ್ ಸೈಟ್ ನಲ್ಲಿ ಲಭ್ಯ ಆಗುವುದಕ್ಕಿಂತ ಮುಂಚೆನೇ ವ್ಯಾಕ್ಸೀನ್ ಬುಕ್ ಆಗಿರುತ್ತದೆ. ವೈಬ್ ಸೈಟ್ ನಲ್ಲಿ ಸ್ಲಾಟ್ ಗಳು ಬುಕ್ ಎಂದು ತೋರಿಸಿದ್ದು ಅರೋಗ್ಯ ಸೇತು ಆ್ಯಪ್ ನಲ್ಲಿ ಲಭ್ಯ ಎಂದು ತೋರಿಸುತ್ತಿದೆ ಈ ಅವ್ಯವಸ್ಥೆಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಲಸಿಕಾ ಕೇಂದ್ರದಲ್ಲಿ ಸಾಮಾನ್ಯ ಜನರು ಕ್ಯೂ ನಲ್ಲಿ ನಿಂತು ಟೋಕನ್ ತೆಗೆದುಕೊಂಡು ಕಾಯುತಿದ್ದರೂ ಪ್ರಭಾವಿ ವ್ಯಕ್ತಿಗಳು ಯಾವುದೇ ಟೋಕನ್ ಇಲ್ಲದೆ ರಾಜಕೀಯ ಪ್ರಭಾವ ಬಳಸಿ ವ್ಯಾಕ್ಸೀನ್ ಪಡೆಯುತ್ತಿದ್ದಾರೆ ಎಂದರು.
ಒಟ್ಟಾರೆಯಾಗಿ ವ್ಯಾಕ್ಸಿನೇಷನ್ ಸಿಸ್ಟಮ್ ಗೊಂದಲದ ಗೂಡಾಗಿದ್ದು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ನಿಮಗೆ ಬಹಳಷ್ಟು ಜವಾಬ್ದಾರಿ ಇದ್ದು ತಾವು ತಕ್ಷಣ ತಮ್ಮ ಜವಾಬ್ದಾರಿಯನ್ನು ಅರಿತು ಹಡಿಲು ಭೂಮಿ ಯೋಜನೆಯನ್ನು ಸ್ವಲ್ಪ ಸಮಯ ಮುಂದೂಡಿ ಲಸಿಕಾ ಕೇಂದ್ರದತ್ತ ದೌಡಾಯಿಸಿ ಜನರ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕಾಗಿ ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.