ಪಡಿತರ ಚೀಟಿ: ಇನ್ನಷ್ಟು ಕಾಯಬೇಕು!
Team Udayavani, Aug 2, 2018, 10:51 AM IST
ಕುಂದಾಪುರ: ಆಹಾರ ಶಾಖೆಯ ತಂತ್ರಾಂಶದಲ್ಲಿ ಇನ್ನೂ ಅವಕಾಶ ಕಲ್ಪಿಸಿದ ಹೊಸದಾಗಿ ಪಡಿತರ ಚೀಟಿ ಪಡೆಯಬಯಸುವವರು ಮತ್ತಷ್ಟು ಕಾಲ ಕಾಯುವಂತಾಗಿದೆ.
ಚುನಾವಣೆ ನೀತಿಸಂಹಿತೆ ಹಿನ್ನೆಲೆ ಯಲ್ಲಿ ಮಾ. 27ರಿಂದ ಸ್ಥಗಿತವಾಗಿದ್ದ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆರೋಗ್ಯ ಕಾರ್ಡ್ ನೋಂದಣಿಗೆ ಅಗತ್ಯವಿರುವವರಿಗೆ ಮಾತ್ರ ತುರ್ತಾಗಿ ಪಡಿತರ ಚೀಟಿ ಮಾಡಿಕೊಳ್ಳಬಹುದು.
ಹೊಸದಾಗಿ ಅರ್ಜಿ ಸಲ್ಲಿಸಿದವರು ಆಹಾರ ಮತ್ತು ನಾಗರಿಕ ಪೂರೈಕೆ ಶಾಖೆಗೆ ಅಲೆದಾಡುತ್ತಿದ್ದು, ಸಮರ್ಪಕ ಮಾಹಿತಿ ಇರದ ಅಧಿಕಾರಿಗಳೂ “ಯಾವಾಗ ಆಗುತ್ತದೋ ಗೊತ್ತಿಲ್ಲ’ ಎಂದು ಉತ್ತರಿಸುತ್ತಿದ್ದಾರೆ. ಗ್ರಾ.ಪಂ. ಗಳಲ್ಲಿ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ, ತೆಗೆಯುವುದು, ತಿದ್ದುಪಡಿ ಮಾತ್ರ ನಡೆಯುತ್ತಿದೆ.
ದೃಢೀಕರಣ ಇಲ್ಲ
ಗ್ರಾ.ಪಂ.ಗಳಲ್ಲಿ ತಿದ್ದುಪಡಿ ಮಾಡಿದ ಮೇಲೆ ಮುದ್ರಿತ ಪಡಿತರ ಚೀಟಿ ಫಲಾನುಭವಿಯ ಮನೆಗೇ ಬರುತ್ತದೆ. ಆದರೆ ತಿದ್ದುಪಡಿಯ ದೃಢೀಕೃತ ಪ್ರತಿ ಪಡೆ ಯಲು ಪುನಃ ತಾಲೂಕು ಕಚೇರಿಯ ಆಹಾರ ಶಾಖೆಗೇ ಬರಬೇಕು. ಪಂಚಾಯತ್‌ನಲ್ಲಿ ಪ್ರಿಂಟ್ ತೆಗೆಯಲು ಸಾಫ್ಟ್ ವೇರ್‌ನಲ್ಲಿ ಅವಕಾಶ ಇಲ್ಲ. ಇದರ ಬದಲು ಪಂಚಾಯತ್ ನಲ್ಲೇ ಮುದ್ರಣಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆಯೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಆದಾಯ ಪ್ರಮಾಣ ಪತ್ರ
ಪಡಿತರ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿಗೆ ಸಾಫ್ಟ್ ವೇರ್‌ನಲ್ಲಿ 5 ವರ್ಷದಿಂದ 18 ವರ್ಷದ ವರೆಗಿನ ಎಲ್ಲರ ಹೆಸರು ಸೇರ್ಪಡೆಗೂ ಆದಾಯ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಆದಾಯವಿಲ್ಲದ ಮಕ್ಕಳಿಗೆ ಕುಟುಂಬದ ಯಜಮಾನನ ಆದಾಯವೇ ಅಂತಿಮ. ಯಜಮಾನ ಮಹಿಳೆಯೇ ಆಗಬೇಕು ಎಂದಿದೆ. ವಿಳಾಸದಲ್ಲಿ ಅದಕ್ಕೆ ಬೇಕಾದ ಪೂರಕ ಅವಕಾಶ ಕಲ್ಪಿಸಿಲ್ಲ. ಆದ್ದರಿಂದ ಹೊಸ ಪಡಿತರ ಚೀಟಿ, ಸೇರ್ಪಡೆ, ತಿದ್ದುಪಡಿ ಸಂದರ್ಭ 18 ವರ್ಷ ಪ್ರಾಯ ದೊಳಗಿನವರಿಗೆ ಆದಾಯ ಪ್ರಮಾಣ ಪತ್ರ ಹಾಜರುಪಡಿಸುವಿಕೆ ಕೈಬಿಟ್ಟು ಒಂದೇ ಆದಾಯ ಪ್ರಮಾಣ ಪತ್ರದಲ್ಲಿ ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕೆಂಬುದು ಸಾರ್ವಜನಿಕರ ಆಗ್ರಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.