ಮರು ಬಳಕೆ ಒಂದೇ ಪರಿಹಾರ: ಜಿಲ್ಲಾಧಿಕಾರಿ
Team Udayavani, Jul 21, 2017, 6:20 AM IST
ಉಡುಪಿ: ಪ್ಲಾಸ್ಟಿಕ್ ಮುಕ್ತ ಜೀವನ ಶೈಲಿಯತ್ತ ಹೋಗಲು ಮರು ಬಳಕೆ ಒಂದೇ ಪರಿಹಾರವೆಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದರು.
ಅವರು ಜು. 20ರಂದು ಉಡುಪಿ ನಿಟ್ಟೂರು ಪ್ರೌಢ ಶಾಲೆಯಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಹಸಿರು ಶಿಷ್ಟಾಚಾರ ಜಾಗೃತಿ ಅಭಿಯಾನ ಹಾಗೂ ಇಂಟರ್ಯಾಕ್ಟ್ ಕ್ಲಬ್ ಪದ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ತ್ಯಾಜ್ಯ ಉತ್ಪತ್ತಿಯಾದನಂತರ ತಡೆಯುವ ಬದಲು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಉತ್ತಮವೆಂದು ಸಲಹೆ ನೀಡಿದ ಅವರು ತ್ಯಾಜ್ಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಮುತುವರ್ಜಿ ವಹಿಸಬೇಕೆಂದು ಸಲಹೆ ನೀಡಿದರು.
ಕುಡಿಯ ನೀರು ಮತ್ತು ತ್ಯಾಜ್ಯ ನಿರ್ವಹಣೆ ಭವಿಷ್ಯದ ಭಾರಿ ದೊಡ್ಡ ಸವಾಲುಗಳಾಗುತ್ತವೆ. ನೀರಿಗಾಗಿ ಅಂತರಜಲ ಪೂರಣ ಮತ್ತು ಕಸ ವಿಲೇವಾರಿಗೆ ಹೊಸ ಕ್ರಮವನ್ನು ಅನುರಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ ಎಂದು ಉಡುಪಿ ಜಿ.ಪಂ.ನ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹೇಳಿದರು.
ಸ್ವಚ್ಚತೆಗೆ ಸ್ವಯಂ ಶಿಸ್ತು ಅನಿವಾರ್ಯವೆಂದು ಅರಿತಿರುವ ಶಾಲಾ ಮಂಡಳಿ, ಮಕ್ಕಳಿಗೆ ಸ್ವತ್ಛ ಪರಿಸರದ ಕುರಿತಾಗಿ ಕಾಲ ಕಾಲಕ್ಕೆ ಮಾಹಿತಿಯನ್ನು ನೀಡುತ್ತಿದೆ. ಮರು ಬಳಕೆ ಸಾಮಾಗ್ರಿಗಳನ್ನು ಒದಗಿಸುತ್ತಿದೆ. ಶಾಲಾ ವಠಾರವೂ ಸ್ವತ್ಛವಾಗಿರಿಸಲು ನಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೇಕಾರ್ ಹೇಳಿದರು.
ಉಡುಪಿ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಉಪಾದ್ಯಾಯ ಇಂಟರ್ಯಾಕ್ಟ್ ಪದ ಪ್ರದಾನ ಮಾಡಿದರು. ನಿಕಟ ಪೂರ್ವ ಅಧ್ಯಕ್ಷೆ ಅರ್ಚನಾ ಅವರಿಂದ ಕಾರ್ತಿಕ ಶಾಸಿŒ ಅಧಿಕಾರ ಪಡೆದರು.ವಲಯ ಸಂಯೋಜಕ ಡಾ| ಕೆ. ಸುರೇಶ್ ಶೆಣೈ ಅತಿಥಿಗಳಾಗಿದ್ದರು. ವಿದ್ಯಾರ್ಥಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.