ದೇವ-ದೇಶ ಭಕ್ತಿ ಇರಲಿ: ಪೇಜಾವರ ಶ್ರೀ
Team Udayavani, Apr 17, 2017, 4:17 PM IST
ಉಡುಪಿ: ಮಾನವರ ಕಣ್ಣು ತಪ್ಪಿಸಿ ಗುಟ್ಟಾಗಿ ಕೆಟ್ಟ ಕಾರ್ಯವನ್ನು ಮಾಡಬಹುದು. ಆದರೆ ದೇವರ ಕಣ್ಣು ತಪ್ಪಿಸಿ ಕೆಟ್ಟ ಕಾರ್ಯ ಮಾಡಲು ಆಗುವುದಿಲ್ಲ. ದೇವರ ಭಕ್ತಿ, ದೇಶದ ಭಕ್ತಿ ಎರಡೂ ಇದ್ದಾಗ ಸತøಜೆಗಳಾಗಲು ಸಾಧ್ಯ ಎಂದು ಪರ್ಯಾಯ
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಮಕ್ಕಳಿಗಾಗಿ ನಡೆಯುವ 7 ದಿನಗಳ ಹಿಂದೂ ಸಂಸ್ಕಾರ ಶಿಕ್ಷಣ ಶಿಬಿರವನ್ನು ರವಿವಾರ ಶ್ರೀಕೃಷ್ಣ ಮಠದ ಅನ್ನಬ್ರಹ್ಮ ಸಭಾಂಗಣದಲ್ಲಿ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ಮಕ್ಕಳು ನಮ್ಮ ದೇಶದ ಪ್ರಾಚೀನ ಕಾಲದ ಮಹಾತ್ಮರಾದ ರಾಮಕೃಷ್ಣರ ಕಥೆಗಳನ್ನು ತಿಳಿದು ನೀತಿವಂತರಾಗಿ ಬದುಕಬೇಕು. ಪ್ರಾಚೀನ ಕಾಲದ ಅನೇಕ ಮಹಾತ್ಮರ ವಿಚಾರಗಳನ್ನು ನಮ್ಮ ಶಾಲೆಗಳಲ್ಲಿ ತಿಳಿಸುವುದಿಲ್ಲ. ಮಕ್ಕಳಿಗೆ ಶಾಲೆಯ ಶಿಕ್ಷಣದ ಜತೆಗೆ ಮಹಾತ್ಮರ ಕಥೆಗಳ ಸಾರವು ಆದರ್ಶ ಜೀವನ ರೂಪಿಸಲು ಅಗತ್ಯವಿದೆ. ದೇವರು ಇದ್ದಲ್ಲಿ ಕೆಟ್ಟ ಕೆಲಸಗಳು ನಡೆಯುದಿಲ್ಲ ಎಂದಿರುವ ಪ್ರಹ್ಲಾದನ ವಿಚಾರಗಳನ್ನು ಮಕ್ಕಳು ತಿಳಿದುಕೊಳ್ಳಬೇಕು ಎಂದರು.
“ದಿನನಿತ್ಯ ಇರಲಿ ದೇವರ ಸ್ಮರಣೆ’
ಮಕ್ಕಳು ಪ್ರತಿನಿತ್ಯ ಶ್ಲೋಕಗಳು ಮತ್ತು ದೇವರ ಕೀರ್ತನೆಗಳನ್ನು ಹಾಡಬೇಕು. ದಿನಕ್ಕೆರಡು ಬಾರಿ ಪ್ರಾರ್ಥಿಸಬೇಕು. ಈ ಮೂಲಕ ದಿನನಿತ್ಯ ದೇವರ ಸ್ಮರಣೆಯನ್ನು ಮಾಡಬೇಕು. ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳನ್ನು ಹಿಂದೂ ಧರ್ಮದಿಂದ ಕಲಿತವರೇ ಇಂದು ನಮಗಿಂತ ಉತ್ತಮ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಸ್ಲಿಂ ಧರ್ಮದಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಾರೆ. ಹಾಗೆಯೇ ಕ್ರಿಶ್ಚಿಯನ್ ಧರ್ಮದಲ್ಲೂ ಪ್ರತಿದಿನ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಶ್ರೀಗಳು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.