ಪ್ರಾದೇಶಿಕ ಸಾರಿಗೆ ಕಚೇರಿ: ಗುರಿಮೀರಿದ ಕಾರ್ಯಸಾಧನೆ
Team Udayavani, Sep 7, 2021, 4:10 AM IST
ಉಡುಪಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ರಾಜಸ್ವ ಸಂಗ್ರಹ ಹಾಗೂ ವಾಹನ ನೋಂದಣಿಯಲ್ಲಿ ಕಂಡಿದ್ದ ಇಳಿಕೆ ಪ್ರಮಾಣ ಈಗ ಮತ್ತೆ ಪ್ರಗತಿಯ ಹಾದಿಯತ್ತ ಮುಖಮಾಡಿದೆ.
ಆಗಸ್ಟ್ ತಿಂಗಳೊಂದರಲ್ಲಿಯೇ ಉಡುಪಿಯಲ್ಲಿ ವಿಶೇಷ ತಪಾಸಣೆ ಮಾಡಿ 171 ಪ್ರಕರಣಗಳನ್ನು ದಾಖಲಿಸಿ 9,61,308 ರೂ.ಗಳನ್ನು ತೆರಿಗೆ ರೂಪದಲ್ಲಿ ಹಾಗೂ 8,23,800 ರೂ.ಗಳನ್ನು ದಂಡ ರೂಪದ ಮೂಲಕ ಒಟ್ಟು 17,85,108 ರೂ. ವಸೂಲು ಮಾಡಲಾಗಿದೆ.
ಸರೆಂಡರ್‌ನಿಂದ ವಾಹನಗಳಿಗೆ ಮುಕ್ತಿ:
ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ವಿವಿಧ ವಾಹನಗಳು ತೆರಿಗೆ ಕಟ್ಟಲಾಗದ ಕಾರಣ ಸರಂಡರ್ ಮಾಡಿದ್ದವು. ಈಗ ಹೆಚ್ಚಿನ ವಾಹನಗಳು ತೆರಿಗೆ ಪಾವತಿಸಿ ಸಂಚಾರ ನಡೆಸುತ್ತಿವೆ. ಆದರೂ 674 ವಾಹನಗಳು ಇನ್ನೂ ಸರಂಡರ್‌ನಲ್ಲಿಯೇ ಇವೆ.
ಸರಕು ವಾಹನದಲ್ಲಿ ಪ್ರಯಾಣಿಕರನ್ನು ಹಾಕುವಂತಿಲ್ಲ ಸರಕು ವಾಹನದಲ್ಲಿ ಪ್ರಯಾಣಿಕ ರನ್ನು ಹಾಗೂ ಪ್ರಯಾಣಿಕರ ವಾಹನ ದಲ್ಲಿ ಸರಕುಗಳನ್ನು ತುಂಬಿಕೊಂಡು ಹೋಗುವ ವಾಹನಗಳನ್ನು ಮುಟ್ಟು ಗೋಲು ಹಾಕಲಾಗುತ್ತಿದೆ. ಬಸ್‌ಗಳಲ್ಲಿಯೂ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗಲಾಗುತ್ತಿದೆ. ಈ ಬಗ್ಗೆ ದೂರುಗಳು ಬಂದರೆ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು ಎನ್ನುತ್ತಾರೆ ಆರ್‌ಟಿಒ ಅಧಿಕಾರಿಗಳು.
ಸೆ.14ಕ್ಕೆ ಜನಸ್ಪಂದನ:
ಸಾರ್ವಜನಿಕ ವಾಹನಗಳು, ಬಸ್ ಟೈಮಿಂಗ್ಸ್ ವಿಚಾರದಲ್ಲಿ ಬಗ್ಗೆ ಸಾರ್ವಜನಿಕರಿಗೆ ದೂರುಗಳಿದ್ದರೆ ಹಾಗೂ ಮನವಿಗಳನ್ನು ನೀಡಲು ಸೆ.14ರಂದು ಮಣಿಪಾಲ ರಜತಾದ್ರಿಯ ಸಾರಿಗೆ ಸೌಧ ದಲ್ಲಿ ನಡೆಯಲಿದೆ.
ನೋಂದಾಯಿಸಿರುವ ಒಟ್ಟು ವಾಹನಗಳು :
ಮೋಟಾರ್ ಸೈಕಲ್‌ಗಳು 3,56,753
ಮೋಟಾರ್ ಕಾರುಗಳು 67,754
ಸ್ಕೂಲ್ ಬಸ್‌ಗಳು 947
ಆಟೋ ರಿಕ್ಷಾಗಳು 21,819
ಲಕ್ಸು$Âರಿ ಟ್ಯಾಕ್ಸಿಗಳು 6,860
ಸರಕು ವಾಹನಗಳು 20,427
ಮ್ಯಾಕ್ಸಿ ಕ್ಯಾಬ್‌ಗಳು 1,303
ಬಸ್‌ಗಳು 1,120
ಒಟ್ಟು ನೋಂದಾಯಿತ ವಾಹನಗಳು 4,81,798
ಲಾಕ್‌ಡೌನ್ ಬಳಿಕ ರಾಜಸ್ವ ಸಂಗ್ರಹ ಹಾಗೂ ವಾಹನ ನೋಂದಣಿಯಲ್ಲಿ ಹೆಚ್ಚಳವಾಗುತ್ತಿದೆ. ಸರಂಡರ್ ಮಾಡಿರುವ ಹೆಚ್ಚಿನ ವಾಹನಗಳು ತೆರಿಗೆ ಪಾವತಿಸಿ ಓಡಾಟ ಮಾಡುತ್ತಿವೆ. ಕೆಲವೊಂದು ವಾಹನಗಳು ತೆರಿಗೆ ಪಾವತಿಸಿ ಓಡಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಮುಟ್ಟುಗೋಲು ಹಾಕಲಾಗಿದೆ. ಈ ಬಗ್ಗೆ ದೂರುಗಳು ಬಂದರೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು.–ಗಂಗಾಧರ್ ಜೆ.ಪಿ.,ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.