ಪುನರ್ವಸು ಮಳೆ ಅವಾಂತರ: 18 ಲಕ್ಷ ರೂ. ಸೊತ್ತು ಹಾನಿ
Team Udayavani, Jul 10, 2018, 1:53 PM IST
ಕಾಪು : ಪುನರ್ವಸು ಮಳೆ, ನೆರೆಯಿಂದಾಗಿ ಕಾಪು ತಾಲೂಕಿನಲ್ಲಿ ಎರಡು ದಿನಗಳಲ್ಲಿ 18 ಲಕ್ಷ ರೂ. ಸೊತ್ತು ಹಾನಿ ಉಂಟಾಗಿದೆ. ನೂರಾರು ಎಕರೆ ಕೃಷಿ ಭೂಮಿ ನಾಲ್ಕನೇ ದಿನವೂ ಮುಳುಗಿಯೇ ಇದ್ದು, ಕಾಪು ತಾಲೂಕಿನಾದ್ಯಂತ ಅಪಾರ ಕೃಷಿ ಹಾನಿಯ ಭೀತಿ ಸೃಷ್ಟಿಸಿದೆ.
ಕಾಪು ಪುರಸಭೆ ವ್ಯಾಪ್ತಿಯ ಕಾಪು, ಉಳಿಯಾರಗೋಳಿ, ಮಲ್ಲಾರು, ಮಜೂರು, ಬೆಳಪು, ಎಲ್ಲೂರು, ಬಡಾ, ತೆಂಕ, ಇನ್ನಂಜೆ, ಕುತ್ಯಾರು, ಕಟಪಾಡಿ, ಕೋಟೆ, ಮಣಿಪುರ, ಉದ್ಯಾವರ, ಕುರ್ಕಾಲು, ಶಿರ್ವ, ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವೆಲ್ಲ ಜಲಾವೃತಗೊಂಡು ಕೃಷಿ ಭೂಮಿಗೆ ಅಪಾರ ಹಾನಿಯುಂಟಾಗಿದೆ.
2 ದಿನ;18 ಲಕ್ಷ ರೂ. ಹಾನಿ
ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಕಾಪು ತಾಲೂಕಿನ ನೂರಾರು ಮನೆಗಳು ಜಲಾವೃತ ಗೊಂಡು, 400ಕ್ಕೂ ಅಧಿಕ ಮಂದಿ ಯನ್ನು ರಕ್ಷಿಸಲಾಗಿತ್ತು. ರಸ್ತೆ, ಸೇತುವೆ, ಮನೆಗೆ ಹಾನಿ, ಕಟ್ಟಡ, ಕಾಂಪೌಂಡು ಕುಸಿತ ಸಹಿತ ಸುಮಾರು 18 ಲಕ್ಷ ರೂ. ಮೊತ್ತದ ಸೊತ್ತು ನಷ್ಟ ಉಂಟಾಗಿದೆ. ಇದಕ್ಕಿಂತಲೂ ಹೆಚ್ಚಿನ ಹಾನಿ ಸಂಭವಿಸಿರುವ ಸಾಧ್ಯತೆಗಳಿವೆ.
ನೀರು ಇಳಿದಿಲ್ಲ
ಪಡು, ಕೈಪುಂಜಾಲು, ಮಟ್ಟು ಹಾಗೂ ಹೊಳೆ ತೀರದ ಪ್ರದೇಶ ಗಳಾದ ಪಾಂಗಾಳ, ಮಡುಂಬು, ಇನ್ನಂಜೆ, ಬಂಟಕಲ್ಲು, ಮಣಿಪುರ, ದೆಂದೂರು ಕಟ್ಟೆ, ಮಲ್ಲಾರು, ಮಜೂರು, ಕರಂದಾಡಿ, ಜಲಂಚಾರು, ಕಳತ್ತೂರು, ಕುತ್ಯಾರು, ಬೆಳಪು, ಪಣಿಯೂರು, ಕುಂಜೂರು, ಅದಮಾರು, ಉಚ್ಚಿಲ, ಎರ್ಮಾಳು ಸಹಿತ ಹಲವೆಡೆ ನೆರೆ ಇಳಿದಿದೆ. ಆದರೆ ಈ ಪ್ರದೇಶಗಳಲ್ಲಿ ನಾಟಿ ಮಾಡಲಾದ ನೇಜಿ ಮಾತ್ರ ಮುಳುಗಿದ ಸ್ಥಿತಿಯಲ್ಲಿಯೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.