ಇಂದಿನಿಂದ ಉಡುಪಿಯಲ್ಲೂ “ಸುದಿನ’; ಪರ್ಯಾಯ ಶ್ರೀಗಳಿಂದ “ಸುದಿನ’ ಸಂಚಿಕೆ ಬಿಡುಗಡೆ
"ಕಡೆಗೋಲು' ವಿಶೇಷ ಸಂಚಿಕೆ ಲೋಕಾರ್ಪಣೆ
Team Udayavani, Jan 2, 2020, 8:08 AM IST
ಉಡುಪಿ: ಉದಯವಾಣಿಯ ಉಡುಪಿ “ಸುದಿನ’ ಸಂಚಿಕೆ ಮತ್ತು ಸುದಿನ “ಕಡೆಗೋಲು’ ವಿಶೇಷ ಸಂಚಿಕೆಯನ್ನು ಬುಧವಾರ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
“ಉದಯವಾಣಿ’ಯ ಆರಂಭದ ಸಂಚಿಕೆಯನ್ನು ನೋಡಿದೆ. 50 ವರ್ಷ ಗಳಲ್ಲಿ ಸಂಸ್ಥೆ ಸಾಕಷ್ಟು ಬೆಳೆದು ಕರಾವಳಿ ನಾಡಿನ ಅಗತ್ಯವನ್ನು ಪೂರೈಸುವಲ್ಲಿ ಪೂರಕವಾಗಿ ಸ್ಪಂದಿಸಿ ಜನಾಕರ್ಷಣೆ ಪಡೆದಿದೆ. ಜನರ ಅಭಿರುಚಿಗೆ ತಕ್ಕಂತೆ ವಿಷಯ, ವಿನ್ಯಾಸವನ್ನು ಹೊಸರೂಪದಲ್ಲಿ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ “ಸುದಿನ’ ಕಲ್ಪನೆ ಶ್ಲಾಘನೀಯ ವಾದುದು. ಶ್ರೀಕೃಷ್ಣನ ನಾಡಿನಲ್ಲಿ “ಕಡೆಗೋಲು’ ವಿಶೇಷ ಸಂಚಿಕೆ ಬಿಡುಗಡೆಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಎಂಎಂಎನ್‌ಎಲ್ ಸಿಇಒ ವಿನೋದ ಕುಮಾರ್ ಸುದಿನ ಸಂಚಿಕೆ, ವಿಶೇಷ ಸಂಚಿಕೆಯ ಬಗ್ಗೆ ತಿಳಿಸಿದರು.
ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ನಿರ್ದೇಶಕ ಟಿ. ಗೌತಮ್ ಪೈ, ಉದಯವಾಣಿ ಸಂಪಾದಕ ಅರವಿಂದ ನಾವಡ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಸತೀಶ್ ಶೆಣೈ, ರಾಮಚಂದ್ರ ಮಿಜಾರು, ಆನಂದ್ ಕೆ., ಸುದರ್ಶನ್ ಶೇರಿಗಾರ್, ಹರೀಶ್ ಭಟ್, ಉದಯ್ ಕುಮಾರ್ ಹುಬ್ಳಿಕರ್, ರಾಧಾಕೃಷ್ಣ ಭಟ್, ಕಿರಣ್ ಪ್ರಭು, ಅಜಿತ್ ಭಂಡಾರಿ, ರಾಜೇಶ್ ಮೂಲ್ಕಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.