Reliance Digital ಹ್ಯಾಪಿನೆಸ್ ಪ್ರಾಜೆಕ್ಟ್: ಪರ್ಕಳದ ಅಜ್ಜ-ಅಜ್ಜಿ ಮೆಸ್‌ಗೆ ಕೊಡುಗೆ
Team Udayavani, Dec 31, 2024, 6:55 AM IST
ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಪರ್ಕಳದಲ್ಲಿ ಗೋಪಾಲಕೃಷ್ಣ ಪ್ರಭು ಹಾಗೂ ವಸಂತಿ ಪ್ರಭು ದಂಪತಿ ನಡೆಸುತ್ತಿರುವ “ಅಜ್ಜ-ಅಜ್ಜಿ ಊಟ’ ಎಂಬ ಹೆಸರಿನ ಮೆಸ್‌ಗೆ ರಿಲಯನ್ಸ್ ಡಿಜಿಟಲ್ ತನ್ನ “ಹ್ಯಾಪಿನೆಸ್ ಪ್ರಾಜೆಕ್ಟ್’ ಅನ್ವಯ ನೆರವು ನೀಡಿದೆ.
ಕಾರ್ಯಕ್ರಮದ ಮುಖ್ಯ ನಿರೂಪಕಿ ಫರಾಹ್ ಖಾನ್ ಹಾಗೂ ಸಹ ನಿರೂಪಕರಾದ ಸಂಜೋತ್ ಕೀರ್ ಅವರು ಅಜ್ಜ-ಅಜ್ಜಿ ಊಟದ ಮೆಸ್‌ಗೆ ಅಗತ್ಯ ಪರಿಕರಗಳಾದ 4 ಬರ್ನರ್‌ಗಳ ಗ್ಯಾಸ್ ಸ್ಟೌ, ರೆಫ್ರಿಜರೇಟರ್, ಅನ್ನದ ಕುಕ್ಕರ್, ಮಿಕ್ಸರ್, ಮೈಕ್ರೋವೇವ್ ಮತ್ತು ಸ್ಮಾರ್ಟ್ ಫೋನ್‌ಗಳನ್ನು ತಲುಪಿಸಿದ್ದಾರೆ.
ವೃದ್ಧ ದಂಪತಿ ಪ್ರತೀದಿನ ಅಡುಗೆ ತಯಾರಿಗಾಗಿ ರಿಕ್ಷಾದಲ್ಲಿ ಸಾಗಿ ತರಕಾರಿ ತರಬೇಕಿತ್ತು. ಕಟ್ಟಿಗೆಯ ಒಲೆಯಲ್ಲೇ ಅಡುಗೆ ತಯಾರಿಸುತ್ತಿದ್ದರು. ಅದರ ಹೊಗೆಯಿಂದಲೂ ಕಣ್ಣಿನ ಉರಿ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. “ಇನ್ನು ಮುಂದೆ ತರಕಾರಿಯನ್ನು ಒಮ್ಮೆಲೇ ತಂದುಕೊಂಡು ಫ್ರಿಜ್‌ನಲ್ಲಿ ದಾಸ್ತಾನು ಇಡಬಹುದು. ರಿಲ¿ನ್ಸ್ ಡಿಜಿಟಲ್‌ನವರು ನೀಡಿರುವ ಕೊಡುಗೆಗಳಿಂದ ನಮಗೆ ಬಹಳ ಅನುಕೂಲವಾಯಿತು’ ಎಂದು ದಂಪತಿ ಖುಶಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ www.reliancedigital.in ನೋಡಬಹುದು.
ಎಲ್ಲರ ಬದಕಿನಲ್ಲೂ ಕನಸುಗಳು ಇರುತ್ತವೆ. ಆದರೆ ಅದನ್ನು ನಿಜ ಮಾಡಿಕೊಳ್ಳಲು ನಾನಾ ಸವಾಲು-ಅಡೆತಡೆಗಳು ಹೆಜ್ಜೆಹೆಜ್ಜೆಗೂ ಸಿಗುತ್ತವೆ. ಅಂತಹವರಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಡ ಮಟ್ಟದಲ್ಲಿ ನೆರವು ನೀಡಿ ಕನಸುಗಳಿಗೆ ರೆಕ್ಕೆ ಕಟ್ಟುವ ಉದ್ದೇಶದಿಂದ ರಿಲಯನ್ಸ್ ಡಿಜಿಟಲ್ “ಹ್ಯಾಪಿನೆಸ್ ಪ್ರಾಜೆಕ್ಟ್’ ಆರಂಭಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.