“ಸಂಪತ್ತನ್ನು ಧರ್ಮ ಕಾರ್ಯಕ್ಕೆ ವಿನಿಯೋಗಿಸುವ ಮನೋಧರ್ಮ ಬೆಳೆಸಿಕೊಳ್ಳಿ


Team Udayavani, Mar 31, 2017, 11:51 AM IST

2803tke1-1.jpg

ತೆಕ್ಕಟ್ಟೆ : ಊರಿನ ಭಗವದ್ಭಕ್ತರ  ಸಂಘಟನಾತ್ಮಕ ಶಕ್ತಿಯಿಂದಾಗಿ  ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವರ  ಸುಂದರ ಶಿಲಾಮಯ ದೇಗುಲ ನಿರ್ಮಾಣ ಗೊಂಡಿದ್ದು  ಗ್ರಾಮದ ದೇಗುಲವನ್ನು ಪುನರುತ್ಥಾನ  ಮಾಡಿಕೊಡುವಲ್ಲಿ  ಗ್ರಾಮಸ್ಥರು ಸಹಕಾರದೊಂದಿಗೆ  ನಮ್ಮ ಅಭಿವೃದ್ಧಿಯನ್ನು  ನಾವು ಮಾಡಿಕೊಳ್ಳುವ ಜತೆಗೆ ಭಗವಂತನು ಕೊಟ್ಟಿರುವುದರಲ್ಲಿ  ಬಂದ ಅಲ್ಪಸ್ವಲ್ಪವನ್ನು ಉಳಿತಾಯ ಮಾಡಿ ಧರ್ಮಕಾರ್ಯಕ್ಕೆ ವಿನಿಯೋಗವಾಗಬೇಕು ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ಮಾ. 27ರಂದು  ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ಪ್ರತಿಷ್ಠಾಪನೆಗೊಂಡ 48ನೇ ದಿನವಾದ ಹಿನ್ನೆಲೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಸಂಪೂರ್ಣ ಲೆಕ್ಕಾಚಾರ ಹಾಗೂ ಮುಂದಿನ ಕಾರ್ಯ ಯೋಜನೆಯ ಬಗ್ಗೆ ತಿಳಿಸಲು  ಗ್ರಾಮಸ್ಥರೊಂದಿಗೆ ನಡೆಸಿದ ಸಮಾಲೋಚನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ದೇಗುಲ ವತಿಯಿಂದ ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ, ಮಹಾದ್ವಾರವನ್ನು ನಿರ್ಮಿಸಿಕೊಟ್ಟ  ದಾನಿಗಳಾದ ಕಸ್ತೂರಿ ಶೆಟ್ಟಿ, ನಾಗೇಶ್‌ ಶೆಟ್ಟಿ ಹಾಗೂ ಲೆಕ್ಕ ಪರಿಶೋಧಕ ಮಲ್ಯಾಡಿ ರಾಜೀವ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉಳ್ತೂರು ಮೋಹನದಾಸ್‌ ಶೆಟ್ಟಿ ಕಟ್ಟೆಮನೆ ಇತಿಹಾಸ ಪ್ರಸಿದ್ಧ  ಶಿಲಾಮಯ ದೇಗುಲದಲ್ಲಿ  ಎರಡು ಪ್ರಧಾನ ಅರ್ಚಕ ಮನೆತನದಿಂದ ನಿತ್ಯ ಪೂಜಾ ವಿಧಿ ವಿಧಾನಗಳು ಅತ್ಯಂತ ಶಾಸ್ತàಕ್ತವಾಗಿ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ   ನಂಬಿದ  ಭಕ್ತರಿಗೆ  ಶ್ರೀ ದೇವರ  ನಿತ್ಯ ದರ್ಶನ, ಹಣ್ಣುಕಾಯಿ ಹಾಗೂ ಪ್ರಸಾದ ವಿತರಣೆ ಪೂರ್ಣಕಾಲಿಕವಾಗಿ ದೊರ ಕುವ ನಿಟ್ಟಿನಿಂದ ಪೂರ್ಣಕಾಲಿಕವಾಗಿ ಅರ್ಚಕರನ್ನು ನೇಮಿಸುವ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯ  ಇದೆ. ಮುಂದಿನ ಮಹತ್ವದ ಯೋಜನೆಯಲ್ಲಿ ಒಂದಾದ ದೇಗುಲದ ಹೆಬ್ಟಾಗಿಲು ಹಾಗೂ ಸುತ್ತುಪೌಳಿಯು  ಸುಮಾರು ರೂ.1.5 ಕೋಟಿ ವೆಚ್ಚದಲ್ಲಿ  ನಿರ್ಮಾಣಗೊಳ್ಳಲಿದೆ ಹಾಗೂ ಪ್ರತಿ ಸೋಮವಾರದಂದು ಭಕ್ತರಿಗೆ ಅನ್ನ ಪ್ರಸಾದ  ವಿತರಣೆಗೆ ತಗಲುವ  ವೆಚ್ಚವನ್ನು ನಾನೇ ಭರಿಸುವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಚ್‌. ಸುರೇಂದ್ರ ಹೆಗ್ಡೆ  ಹಲ್ತೂರು ಮೇಲ್ಮನೆ, ಲೆಕ್ಕ ಪರಿಶೋಧಕ ಮಲ್ಯಾಡಿ ರಾಜೀವ ಶೆಟ್ಟಿ, ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಯು. ಸೀತಾರಾಮ ಅಡಿಗ, ಯು.ಚೆನ್ನ ಕೇಶವ ಅಡಿಗ ಹಾಗೂ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉಳ್ತೂರು ಮೋಹನದಾಸ್‌ ಶೆಟ್ಟಿ ಕಟ್ಟೆಮನೆ ಸ್ವಾಗತಿಸಿ, ಲೆಕ್ಕ ಪರಿಶೋಧಕ ಮಲ್ಯಾಡಿ ರಾಜೀವ ಶೆಟ್ಟಿ ಲೆಕ್ಕಪತ್ರ ಮಂಡಿಸಿ,  ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಯು. ಭೋಜರಾಜ ಶೆಟ್ಟಿ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.