ಸರಕಾರಿ ಇಲಾಖೆ ಕೋಲ ಪಡೆಯುವ ದೈವ
ಅಧಿಕಾರಿಗಳು, ಪೊಲೀಸರೇ ದೈವಕ್ಕೆ ದೂರು ನೀಡುತ್ತಾರೆ!
Team Udayavani, Jan 8, 2021, 9:40 PM IST
ಕಾರ್ಕಳ: ಜನರು ನ್ಯಾಯಾಂಗ ಕ್ಕಿಂತಲೂ ಹೆಚ್ಚಾಗಿ ಸತ್ಯದ ಚಾವಡಿಯನ್ನು ನಂಬುತ್ತಾರೆ. ಇದಕ್ಕೆ ಕಾರಣ ದೈವ ಸಾನ್ನಿಧ್ಯಗಳಲ್ಲಿರುವ ಶಕ್ತಿ ನಿರ್ದಿಷ್ಟ ಸಂದರ್ಭಗಳಲ್ಲಿ ಪ್ರಕಟಗೊಳ್ಳುವುದು. ಇಂತಹ ನಂಬಿಕೆ ತಾಲೂಕಾಡಳಿತ, ಪೊಲೀಸ್ ಇಲಾಖೆಯೂ ಹೊಂದಿದ್ದು, ವಿಶಿಷ್ಟ ಸಂಪ್ರದಾಯವೊಂದು ಕಾರ್ಕಳ ತಾಲೂಕಿನಲ್ಲಿ ಚಾಲ್ತಿಯಲ್ಲಿದೆ.
ನಗರದಂಚಿನ ಕುಕ್ಕುಂದೂರು ಗ್ರಾ.ಪಂ ವ್ಯಾಪ್ತಿಯ ಹುಡ್ಕೋ ಕಾಲನಿಯಲ್ಲಿ ತಾ| ಗುಡ್ಡೆ ಗುಳಿಗ ದೈವದ ಸ್ಥಾನವಿದೆ. 90 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ದೈವಸ್ಥಾನವಿದು. ಈಗ ಜೈನ ಕುಟುಂಬಕ್ಕೆ ಸೇರಿದ ಆಡಳಿತದಲ್ಲಿದೆ.
ಅಪರೂಪದ ಸಂಪ್ರದಾಯ! : ತುಳುನಾಡಿನ ಅದೆಷ್ಟೋ ಜನ ಇಂದಿಗೂ ವಸ್ತುಗಳು ಕಾಣೆಯಾದರೆ ಮೊದಲು ಭಕ್ತಿ ಯಿಂದ ನೆನೆದು ಪ್ರಾರ್ಥಿಸಿಕೊಳ್ಳುವುದು ತಮ್ಮ ಇಷ್ಟದ ದೈವ ದೇವರನ್ನು. ಆದರಿಲ್ಲಿ ಕಂದಾಯ ಅಧಿಕಾರಿಗಳು, ಪೊಲೀಸರು ದೈವಕ್ಕೆ ಹರಕೆ ನೀಡುವ ಅಪರೂಪದ ಸಂಪ್ರದಾಯವಿದೆ. ತಾ| ಆಡಳಿತದ ಮರ್ಯಾದೆ ಪಡೆದು ತಾಲೂಕು ಗುಡ್ಡೆ ಗುಳಿಗ ದೈವವೆಂದೇ ಜನಜನಿತವಾಗಿದೆ.
ಇಂದು ಪೊಲೀಸ್ ಇಲಾಖೆಯ ಕೋಲ ಡಿಸೆಂಬರ್‌ನಿಂದ ಮೇ ಕೊನೆ ತನಕ ನೇಮ ನಡೆಯುತ್ತದೆ. ವರ್ಷಕ್ಕೆ 30ಕ್ಕೂ ಹೆಚ್ಚು ಕೋಲ ಇಲ್ಲಿ ದೈವಕ್ಕೆ ಹರಕೆ ರೂಪದಲ್ಲಿ ಸಲ್ಲುತ್ತದೆ. ತಾ| ಆಡಳಿತದಿಂದ, ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ದೈವಕ್ಕೆ ಕೋಲ ಜರಗುತ್ತದೆ. ಜ.9ರಂದು ಪೊಲೀಸ್ ಇಲಾಖೆಯಿಂದ ಕೋಲ ನಡೆಯಲಿದೆ. ತಾ| ಆಡಳಿತದ ಹರಕೆ ಕೋಲದ ದಿನವನ್ನು ಇನ್ನಷ್ಟೆ ನಿರ್ಧರಿಸಬೇಕಿದೆ.
ವಿಸ್ಮಯದ ಘಟನೆ :
ಸರಕಾರಿ ಕಚೇರಿಗಳಲ್ಲಿ ಬೃಹತ್ ಗಂಟೆ ತೂಗು ಹಾಕಿ ಬಾರಿಸುವ ಕ್ರಮ ಹಿಂದೆ ಜಾರಿಯಲ್ಲಿತ್ತು. ಇಲ್ಲಿನ ತಾ| ಆಡಳಿತ ದಲ್ಲಿಯೂ ಇದೇ ವ್ಯವಸ್ಥೆಯಿತ್ತು. ಒಂದು ರಾತ್ರಿ ಕಾವಲು ಕಾಯುತ್ತಿದ್ದ ಕಾವಲು ಪೊಲೀಸ್ ಸಿಬಂದಿ ನಿದ್ದೆಗೆ ಜಾರಿದ್ದ ವೇಳೆ ಗಂಟೆ ತನ್ನಷ್ಟಕ್ಕೆ ಹೊಡೆದುಕೊಂಡು ಶಬ್ದ ಹೊರ ಹೊಮ್ಮಿಸಿದೆ. ಅಂದು ಗಂಟೆ ಪುಡಿಯಾಗಿತ್ತು. ಸಿಬಂದಿ ಎಚ್ಚರಗೊಂಡಾಗ ವಿಸ್ಮಯ ಬೆಳಕಿಗೆ ಬಂದಿತ್ತು. ಅಂದು ಗುಳಿಗ ದೈವ ತನ್ನ ಶಕ್ತಿಯೆ ಇರುವಿಕೆಯನ್ನು ತೋರ್ಪಡಿಸಿತ್ತು. ಅಂದಿನಿಂದ ಹಲವು ವಿದ್ಯಮಾನಗಳು ನಡೆದವು ಎಂದು ಹಿರಿಯರು ಹೇಳುತ್ತಾರೆ.
ಸಂಪ್ರದಾಯ ಪಾಲನೆ ಕಚೇರಿಯ ಕಡತಗಳು ಕಣ್ಣು ಕಟ್ಟಿದಂತಾಗುವುದು, ಅಧಿಕಾರಿಗಳುಪರಿಶೀಲನೆಗೆ ಬಂದಾಗ ದಾಖಲೆಗಳು ಮಾಯವಾಗುವುದು, ನೌಕರರ ಕೆಲಸಕ್ಕೆ ತೊಂದರೆ ಆಗುವುದು ಇತ್ಯಾದಿ ನಡೆಯುತ್ತಿತ್ತು. ಇದಕ್ಕೆಲ್ಲ ಪರಿಹಾರವೆಂಬಂತೆ ದೈವಕ್ಕೆ ಪ್ರಾರ್ಥನೆ ಹರಕೆ ನೀಡುತ್ತ ಬಂದ ಬಳಿಕ ಇದೆಲ್ಲವೂ ನಿಂತಿತು. ಈ ಸಂಪ್ರದಾ
ದೈವದ ಕೋರ್ಟ್‌ನಲ್ಲಿ ಪರಿಹಾರ :
ಪೊಲೀಸ್ ಇಲಾಖೆ ಕೂಡ ಇಲ್ಲಿ ದೈವದ ಮುಂದೆ ಶರಣಾಗುತ್ತದೆ. ಪ್ರತಿ ವರ್ಷ ಇಲಾಖೆ ವತಿಯಿಂದ ಕೋಲ ನೀಡಲಾಗುತ್ತಿದೆ. ಪೊಲೀಸರಿಗೆ ಸವಾಲಾದ ಅನೇಕ ಪ್ರಕರಣಗಳು ದೈವದ ಮೊರೆ ಹೋದ ಬಳಿಕ ಪರಿಹಾರ ಕಂಡಿವೆಯಂತೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ಹಿರಿಯ ಅಧಿಕಾರಿಗಳೇ ಇದನ್ನು ಹೇಳಿದ್ದಾರೆ. ಅನೇಕ ಸಂದರ್ಭ ಹರಕೆ ಹೊತ್ತ ಬಳಿಕವೇ ತಪ್ಪಿಸಿಕೊಂಡ ಕಳ್ಳ ಕೈಗೆ ಸಿಕ್ಕಿರುವುದು, ಕಳೆದು ಹೋದ ವಾಕಿಟಾಕಿ, ಟೋಪಿ ಮತ್ತೆ ಸಿಕ್ಕಿರುವುದು ನಡೆದಿದೆಯಂತೆ. ಯಾವುದೇ ಜಾತಿ, ಧರ್ಮದ ಅಧಿಕಾರಿ ಠಾಣೆಗೆ ಬಂದರೂ ಕೋಲ ತಪ್ಪುವುದಿಲ್ಲ ಎನ್ನುತ್ತಾರೆ ಪೊಲೀಸರೋರ್ವರು. ಎರಡೂ ಇಲಾಖೆ ಕಚೇರಿಗಳಲ್ಲಿ ಹರಕೆ ಡಬ್ಬವೂ ಇರಿಸಲಾಗಿದೆ.
ಕಥೆಗಳು ಸಾಕಷ್ಟಿವೆ :
ಕಾರಣಿಕ ದೈವದ ಮಹಿಮೆ ಕುರಿತು ಅನೇಕ ಕಥೆಗಳು ಸ್ಥಳಿಯವಾಗಿ ಪ್ರಚಲಿತ ದಲ್ಲಿವೆ. ದೈವಕ್ಕೆ ಕೋಲ ನೀಡದೆ ಇದ್ದಲ್ಲಿ ನಾನಾ ರೂಪದಲ್ಲಿ ಸಮಸ್ಯೆಗಳು ಕಾಣಿಸಿಕೊಂಡು ಮಹಿಮೆಯನ್ನು ತೋರಿಸಿಕೊಡು ವಷ್ಟು ಪ್ರಭಾವಶಾಲಿ ದೈವವೆಂಬ ನಂಬಿಕೆ ಸ್ಥಳೀಯರು, ಅಧಿಕಾರಿ ವಲಯದಲ್ಲಿದೆ. ವ್ಯಾಪಾರ, ಕಷ್ಟ-ನಷ್ಟ, ದಾಂಪತ್ಯ, ವಿಚ್ಛೇದನ, ಬಂಜೆತನ ಹೀಗೆ ಅನೇಕ ದೋಷ ಹಾಗೂ ಸಮಸ್ಯೆಗಳಿಗೆ ಇಲ್ಲಿನ ದೈವಕ್ಕೆ ಕೋಲ ಸಹಿತ ವಿವಿಧ ರೂಪದ ಹರಕೆಗಳನ್ನು ಒಪ್ಪಿಸುತ್ತಾರೆ.
ಕೋಲದ ಹರಕೆ ಸಂಪ್ರದಾಯ :
ತಾಲೂಕು ಗುಳಿಗ ದೈವಕ್ಕೆ ತಾಲೂಕಾಡಳಿತದಿಂದ ಕೋಲದ ಹರಕೆ ಕೊಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಕಚೇರಿಯ ಎಲ್ಲರೂ ಸೇರಿ ನಾವದನ್ನು ಭಯ, ಭಕ್ತಿಯಿಂದ ಪಾಲಿಸುತ್ತೇವೆ. –ಪುರಂದರ ಹೆಗ್ಡೆ , ತಹಶೀಲ್ದಾರ್, ಕಾರ್ಕಳ
ಪೊಲೀಸ್ ಇಲಾಖೆಯಿಂದ ಕೋಲ ಸಲ್ಲಿಕೆ :
ಠಾಣೆಯ ಶಸ್ತ್ರಾಸ್ತ್ರವೊಂದು ಕಾಣೆ ಆಗಿತ್ತು. ನೇಮದ ವೇಳೆ ದೈವದ ಮುಂದೆ ಅರಿಕೆ ಮಾಡಿಕೊಂಡಾಗ ಬಾವಿಯೊಂದರಲ್ಲಿ ಇರುವ ಕುರಿತು ದೈವ ನುಡಿದಿತ್ತು. ನುಡಿದಂತೆ ಬಾವಿಯಲ್ಲಿ ಶಸ್ತ್ರಾಸ್ತ್ರ ಕಂಡುಬಂದಿತ್ತು. ಅನಂತರದಲ್ಲಿ ಪೊಲೀಸ್ ಇಲಾಖೆಯಿಂದ ಕೋಲ ಸಲ್ಲುತ್ತಿದೆ. –ಭಾವಗುತ್ತು ಸುಕುಮಾರ ಜೈನ್,ಆಡಳಿತ ಮೊಕ್ತೇಸರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.