ಸೇವೆಗೈದವರನ್ನು ನೆನೆಯುವ …
Team Udayavani, Sep 23, 2017, 3:20 PM IST
ಉಡುಪಿ: ಚೆಲ್ಲಾಪಿಲ್ಲಿಯಾಗಿ ಬಿದ್ದ ಕಸ. ತುಂಬಿದ ಚರಂಡಿಗಳಿಂದ ಹೊರ ಹರಿಯುವ ಗಲೀಜು. ದುರ್ನಾತ ಬೀರುವ ಕಸದತೊಟ್ಟಿ. ಒಳಚರಂಡಿಯಿಂದ ಹೊರ ಹರಿಯುವ ದುರ್ನಾತದ ತ್ಯಾಜ್ಯ. ಇವುಗಳನ್ನು ಒಮ್ಮೆ ಯೋಚಿಸಿದರೆ, ಪೌರಕಾರ್ಮಿಕ ರಹಿತ ದಿನದ ಕಲ್ಪನೆಯಾಗುತ್ತದೆ.
ನಗರದ ಸ್ವಚ್ಛತೆಗಾಗಿ ಹಗಲಿರುಳು ಸೇವೆ ಸಲ್ಲಿಸುವ ಪೌರ ಕಾರ್ಮಿಕರನ್ನು ಜನ ಸಾಮಾನ್ಯರು ನೆನೆಯದಿದ್ದರೆ ಅದರಷ್ಟು ದುರದೃಷ್ಟಕರವಾದ ವಿಚಾರ ಮತ್ತೂಂದು ಇರಲಾರದು. ಈ ಹಿನ್ನೆಲೆಯಲ್ಲಿ ಸರಕಾರವು ಸೆ. 23ರಂದು ಪೌರಕಾರ್ಮಿಕರ ದಿನವನ್ನಾಗಿಸಿ ಅವರ ಸೇವೆಯನ್ನು ಸ್ಮರಿಸುವ ಕಾರ್ಯ ಮಾಡುತ್ತಿದೆ.ಅದಕ್ಕಾಗಿ ಸರಕಾರವನ್ನು ನಾವು ಭೇಷ್ ಎನ್ನಲೇ ಬೇಕು.
ಆದರ್ಶ ಆಸ್ಪತ್ರೆಯ ಆದರ್ಶ
ಖಾಯಂ ಮತ್ತು ಹೊರಗುತ್ತಿಗೆಯಲ್ಲಿರುವ ಎಲ್ಲ ಪೌರ ಕಾರ್ಮಿಕರಿಗೆ ಉಡುಪಿ ಆದರ್ಶ ಆಸ್ಪತ್ರೆ ಉಚಿತವಾಗಿ ಹೆಪೆಟೈಟಿಸ್ ‘ಬಿ ‘ಚುಚ್ಚುಮದ್ದನ್ನು ಉಚಿತವಾಗಿ ನೀಡುತ್ತಿದೆ. ಇದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಮಾತ್ರವಲ್ಲದೆ ಇಎಸ್‌ಐ ಸೌಲಭ್ಯವಿದ್ದರೂ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಡುಪಿ ಪೌರಾಯುಕ್ತ ಮಂಜುನಾಥಯ್ಯ ತಿಳಿಸಿದ್ದಾರೆ.
ಸೌಲಭ್ಯ
ವರ್ಷಕ್ಕೆ 4 ಜತೆ ಗಮ್‌ಬೂಟ್, ಹ್ಯಾಂಡ್ ಗ್ಲೌಸ್, ರೇನ್‌ಕೋಟ್, ಸಮವಸ್ತ್ರವನ್ನು ನೀಡಲಾಗುತ್ತಿದೆ. ಪೌರ ಕಾರ್ಮಿಕರಿಗೆ ರೂ. 20 ಬೆಳಗ್ಗಿನ ಉಪಾಹಾರ ಭತ್ಯೆಯನ್ನು ನೀಡಲಾಗುತ್ತಿದೆ. ಸರಕಾರದ ಈ ಸಹಾಯಕ್ಕೆ ಉಡುಪಿಯ ಅನೇಕ ದಾನಿಗಳು ಕೈ ಜೋಡಿಸಿದ್ದಾರೆ. ಕೆಲವರು ಸಫಾರಿ ಸೂಟ್‌ಗಳನ್ನು ದಾನವಾಗಿ ಕೊಟ್ಟಿದ್ದಾರೆ.
ಈ ಬಾರಿ ಪ್ರಶರ್ ಕುಕ್ಕರ್
ಪ್ರತಿ ವರ್ಷ ಪೌರಕಾರ್ಮಿಕರ ದಿನಕ್ಕಾಗಿ ಉಡುಗೊರೆ ಕೊಡುವ ಸಂಪ್ರದಾಯವನ್ನು ಹಾಕಿ ಕೊಂಡಿರುವ ನಗರಸಭೆ ಈ ಬಾರಿ ಎಲ್ಲ ಪೌರ ಕಾರ್ಮಿಕರಿಗೆ ಪ್ರಶರ್‌ಕುಕ್ಕರ್ ನೀಡುತ್ತಿದೆ ಎಂದು ಪರಿಸರ ಅಭಿಯಂತರಾದ ರಾಘವೇಂದ್ರ ತಿಳಿಸಿದ್ದಾರೆ.
ದುಶ್ಚಟ…
ಆರೋಗ್ಯ ಶಿಕ್ಷಣದ ಕೊರತೆ ಇರುವ ಹೆಚ್ಚಿನ ಪೌರ ಕಾರ್ಮಿಕರಿಗೆ ಮದ್ಯ ಸೇವನೆ ಮತ್ತು ತಂಬಾಕು ತಿನ್ನುವ ಚಟವಿದೆ. ಈ ಸಹವಾಸ ಅವರಿಗೆ ಅತ್ಯಂತ ದುಬಾರಿಯಾಗುತ್ತಿದೆ. ಆರ್ಥಿಕ, ಸಾಮಾಜಿಕ, ಸಂಸಾರಿಕ ಮತ್ತು ದೈಹಿಕ ಸ್ಥಿತಿಗಳು ಹದಗೆಡಲು ಇದು ಪ್ರಮುಖ ಕಾರಣವಾಗುತ್ತಿವೆ. ಈ ಬಗ್ಗೆ ಡಾ| ಪಿ.ವಿ. ಭಂಡಾರಿ ಅಂತಹವರು ದುಶ್ಚಟಮುಕ್ತರನ್ನಾಗಿ ಮಾಡುವ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದರೂ ಮದ್ಯವ್ಯಸನಿಗಳ ಅಸಹಕಾರದಿಂದ ಶೇ.100 ತಲುಪಲು ಸಾಧ್ಯವಾಗುತ್ತಿಲ್ಲ ಎಂಬುದು ಖೇದಕರ.
ಇರುವ 61 ಪೌರಕಾರ್ಮಿಕರ ಪೈಕಿ 3ಜನ ಬಯೋಗ್ಯಾಸ್ ಪ್ಲಾಂಟ್‌ಗೆ, 4 ಜನ ಒಣಕಸ ವಿಲೇವಾರಿಗೆ, 7 ಜನ ಅಲೆವೂರು ಘಟಕಕ್ಕೆ, ಸುಮಾರು 20 ಜನ ತ್ರಿಚಕ್ರ ವಾಹನ ಮತ್ತು ಸೆಸ್ ವಾಹನಕ್ಕೆ, ಮೀನು ಮಾರುಕಟ್ಟೆ, ಉದ್ಯಾನವನ ನಿರ್ವಹಣೆಗೆ, ಸಾರ್ವಜನಿಕ ಶೌಚಾಲಯದ ಶುಚಿಗೆ ತೆರಳುತ್ತಾರೆ. ಉಳಿದವರು ಸರ್ವೇ ಮತ್ತು ವಾಟರ್ ಸಪ್ಲೆ„ಗೆ ಹೋಗುತ್ತಾರೆ. ಹಾಗಾಗಿ ನಗರಸಭೆಗೆ ಪೌರ ಕಾರ್ಮಿಕರು ಕೊರತೆ ಕಂಡುಬರುತ್ತಿದೆ.
ಉಡುಪಿ ನಗರ ಸಭೆಯಲ್ಲಿ 67 ಪೌರಕಾರ್ಮಿಕರಿದ್ದಾರೆ. 249 ಜನರು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲರೂ ಬೆಳಗ್ಗೆ 7 ಗಂಟೆಗೆ ನಗರಸಭೆಯಿಂದ ಅವರವರ ಕಾರ್ಯಕ್ಷೇತ್ರಕ್ಕೆ ತೆರಳುತ್ತಾರೆ. ಮಧ್ಯಾಹ್ನ 2 ಗಂಟೆಯ ಅನಂತರ ವಿರಾಮ ಪಡೆಯುತ್ತಾರೆ. ಇದು ಹೊರ ಗುತ್ತಿಗೆ ಪಡೆಯುವ ಎಲ್ಲರಿಗೂ ಅನ್ವಯವಾಗುವುದಿಲ್ಲ.
ಸಂಪಾದನೆ ಸಂಸಾರ ಸಾಗಿಸಲು ಕಷ್ಟ
ಎರಡನೇ ತರಗತಿ ತನಕ ಓದಿದ್ದೇನೆ. ಕನ್ನಡ ಬರೆಯಲು ಓದಲು ಬರುತ್ತದೆ. ಹೊರಗುತ್ತಿದೆ ಆಧಾರದಲ್ಲಿ ಕಳೆದ 11 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ಎರಡು ಹೆಣ್ಣು ಮಕ್ಕಳು ನಿಟ್ಟೂರು ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸಂಪಾದನೆ ಸಂಸಾರ ಸಾಗಿಸಲು ಕಷ್ಟಕರವಾಗುತ್ತದೆ. ನಮ್ಮನ್ನು ಖಾಯಂ ನೌಕರರನ್ನಾಗಿ ಪರಿವರ್ತಿಸಿದರೆ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಚಂದ್ರ ಅವರು.
ಬಲ ಯಾವುಜಿ
ತ್ಯಾಜ್ಯಗಳಲ್ಲಿರುವ ರೋಗಗಳು ಪೌರಕಾರ್ಮಿಕರಿಗೆ ಹರಡದಿರಲಿ ಎಂಬ ಉದ್ದೇಶದಿಂದ ಗಮ್‌ಬೂಟ್, ಹ್ಯಾಂಡ್ ಗ್ಲೌಸ್ ಕೊಟ್ಟರೂ ಅನೇಕ ಪೌರಕಾರ್ಮಿಕರು ಅವುಗಳನ್ನು ಬಳಸುವುದಿಲ್ಲ. ಈ ಬಗ್ಗೆ ಖಾಯಂ ಪೌರ ನೌಕರ ರಾಜು ಅವರನ್ನು ಪ್ರಶ್ನಿಸಿದಾಗ ಅವರು ಹೊಸ ಪರಿಕರಗಳನ್ನು ಹಾಕಿಕೊಂಡು ಕೆಲಸ ಮಾಡಲು ಕಷ್ಟವಾಗುತ್ತದೆ. ಸಾಂಪ್ರದಾಯಕವಾಗಿ ಮಾಡುವ ನಮಗೆ ಗಮ್‌ಬೂಟ್, ಗ್ಲೌಸ್ ಹಾಕಿಕೊಂಡಾಗ ಬಲ ಸಿಗುವುದಿಲ್ಲ ಎನ್ನುತ್ತಾರೆ.
ಆಸ್ಟ್ರೋ ಮೋಹನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.