ದೂರದರ್ಶಿ ವ್ಯಕ್ತಿಗಳ ಸ್ಮರಣೆ ಅಗತ್ಯ: ಪ್ರಮೋದ್‌


Team Udayavani, Feb 26, 2018, 6:00 AM IST

250218Astro03.jpg

ಉಡುಪಿ: ಆಧುನಿಕ ಮಣಿಪಾಲವನ್ನು ಪೈಯವರು ಕಟ್ಟಿದ ಕಾರಣ ಆರೋಗ್ಯ, ವ್ಯವಹಾರ, ಉದ್ಯೋಗ, ಶಿಕ್ಷಣ ಹೀಗೆ ಅನೇಕಾನೇಕ ಉಪಯೋಗ ಗಳು ಸಮಾಜಕ್ಕೆ ಆಗುತ್ತಿವೆ. ಇದಕ್ಕೆ ಕಾರಣರಾದವರನ್ನು ಸ್ಮರಿಸಿಕೊಳ್ಳುವುದು ಸ್ತುತ್ಯರ್ಹ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.
 
ಮಣಿಪಾಲದ ಎಂಡ್‌ ಪಾಯಿಂಟ್‌ ರಸ್ತೆಯಲ್ಲಿ ಕಂಟ್ರಿ ಇನ್‌ ಆ್ಯಂಡ್‌ ಸ್ಯೂಟ್ಸ್‌ ಹೊಟೇಲ್‌ ಬಳಿ ನಿರ್ಮಿಸಲಾದ “ಕಾಯಿನ್‌ ಏಜ್‌’ ಶಿಲ್ಪ ಕಲಾಕೃತಿಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ಉಪೇಂದ್ರ ಪೈಯವರು ತಮ್ಮ ಸಹೋದರ ಡಾ| ಮಾಧವ ಪೈಯವರ ಜತೆ ಸೇರಿ ಕಠಿನ ಪರಿಶ್ರಮ, ಸಮರ್ಪಣ ಮನೋಭಾವದಿಂದ ಕೆಲಸ ಮಾಡಿದ ಪರಿಣಾಮ ಇಂದಿನ ಮಣಿಪಾಲ ಕಂಡುಬರುತ್ತಿದೆ ಎಂದರು. 

ಟಿ. ಗೌತಮ್‌ ಪೈಯವರು ಉಪೇಂದ್ರ ಪೈ ಅವರ ಸ್ಮಾರಕ, ವೃತ್ತ ಸ್ಥಾಪಿಸುವುದಾಗಿ ಹೇಳಿದಾಗ ನಗರಸಭೆಯಿಂದ ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಒದಗಿಸಲಾಯಿತು ಎಂದು ಸಚಿವರು ತಿಳಿಸಿದರು. 

ಊರಲ್ಲದಲ್ಲಿ ಊರು
ಊರು ಎಂದಾಗ ಮನೆ, ಅಕ್ಕಪಕ್ಕದವರು, ಸಂಬಂಧಿಕರು ನೆನಪಾಗುತ್ತಾರೆ. 93 ವರ್ಷಗಳ ಹಿಂದೆ ಊರಲ್ಲದ ಸ್ಥಳದಲ್ಲಿ ಊರನ್ನು ಸ್ಥಾಪಿಸಿದ ಕನಸುಗಾರ ತೋನ್ಸೆ ಉಪೇಂದ್ರ ಪೈಯವರು. 9 ತಲೆಮಾರುಗಳ ಇತಿಹಾಸವಿರುವ ತೋನ್ಸೆ ಪೈ ಕುಟುಂಬದಲ್ಲಿ ಆರನೆ ಯವರಾದ ಅನಂತ ಪೈಯವರ ಎರಡನೆಯ ಪುತ್ರ  ಉಪೇಂದ್ರ ಪೈಯವರು ಮಣಿಪಾಲಕ್ಕೆ ವಾಯುವಿಹಾರಕ್ಕೆ ಬಂದಾಗ ಬೋಳುಗುಡ್ಡ ಆಕರ್ಷಿಸಿತು. ಉಪೇಂದ್ರ ಪೈಯವರು ನಾರಾಯಣ ಕಿಣಿಯವರಿಂದ 107 ಎಕ್ರೆ ಸ್ಥಳವನ್ನು 7,000 ರೂ.ಗೆ ತಮ್ಮ ಮತ್ತಿತರರ ಸಹಕಾರದಿಂದ ಕೆನರಾ ಲ್ಯಾಂಡ್‌ ಇನ್ವೆಸ್ಟ್‌ಮೆಂಟ್‌ ಹೆಸರಿನಲ್ಲಿ ಖರೀದಿಸಿ ಭವಿಷ್ಯದ ಮಣಿಪಾಲಕ್ಕೆ ನಾಂದಿ ಹಾಡಿದರು ಎಂದು “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಪ್ರಸ್ತಾವನೆಯಲ್ಲಿ ತಿಳಿಸಿದರು.
 
ಮೊದಲ ಕಟ್ಟಡ, ಜಲಾಶಯ
ಮೊದಲು ಟಿಬಿ ಸ್ಯಾನಿಟೋರಿಯಂ ಕಟ್ಟಡ ಕಟ್ಟಿದರು, ಅನಂತರ ಪ್ರಾಥಮಿಕ ಶಾಲೆಯಾಯಿತು. ಈಗ ವಿಕಸಿತ ಹಂತದಲ್ಲಿ ಮಾಧವಕೃಪಾ ಶಾಲೆಯಾಗಿದೆ. ಹುಲಿ ಇರುವ ಕಾಡಿನಲ್ಲಿ ನೀರು ಇರಬೇಕೆಂದು ಜಲಾಶಯವನ್ನು ಗುರುತಿಸಿದರು. ಅದುವೇ ಮಣ್ಣಪಳ್ಳ. ಈಗ ಅದೇ ಸ್ಥಳದಲ್ಲಿ ಮಧ್ಯರಾತ್ರಿ ಕೂಡ ಜನರು ಓಡಾಡುತ್ತಿದ್ದಾರೆ. ಅಲ್ಲಿ ಆವೆ ಮಣ್ಣು ಸಿಕ್ಕಿದ್ದರಿಂದ ಹೆಂಚಿನ ಕಾರ್ಖಾನೆ ಸ್ಥಾಪಿಸಿದರು. ಅಕ್ಕಿ ಮಿಲ್‌, ಎಣ್ಣೆ ಮಿಲ್‌ ಸ್ಥಾಪಿಸಿದರು. ಕಬ್ಬು ಬೆಳೆಸಿ ಬೆಲ್ಲ ತಯಾರಿಸಿದರು. ಗ್ರಾಮ ಸೇವಾ ಪ್ರತಿಷ್ಠಾನ ಬಳಿಕ ಗೀತಾ ಮಂದಿರವಾಯಿತು ಎಂದು ಸಂಧ್ಯಾ ಎಸ್‌. ಪೈ ಅವರು ತಿಳಿಸಿದರು. 

ಅಂಚೆ ಲಕೋಟೆ ಹಸ್ತಾಂತರ
ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಸಚಿವ ಪ್ರಮೋದ್‌ ಮಧ್ವರಾಜ್‌ ಮಣಿಪಾಲ್‌ ಟೆಕ್ನಾಲಜೀಸ್‌ ಲಿ. (ಎಂಟಿಎಲ್‌) ಅಧ್ಯಕ್ಷ ಟಿ. ಸತೀಶ್‌ ಯು. ಪೈಯವರಿಗೆ ಹಸ್ತಾಂತರಿಸಿದರು. 

ವಿವರಣಾ ಫ‌ಲಕ ಅನಾವರಣ
ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಕಲಾಕೃತಿಯ ವಿವರಣಾ ಫ‌ಲಕವನ್ನು ಅನಾ ವರಣಗೊಳಿಸಿದರು. 

ನಿಸ್ವಾರ್ಥಿ ಸಮಾಜ ಸೇವಕರು
ನನ್ನ ಅಜ್ಜ ಉಪೇಂದ್ರ ಪೈಯವರನ್ನು ನಾನು ನೋಡಿರ ಲಿಲ್ಲ. ತೆರೆಮರೆಯಲ್ಲಿ ನಿಂತು ಕೆಲಸ ಮಾಡು ತ್ತಿದ್ದ ದೂರದರ್ಶಿ, ನಿಸ್ವಾರ್ಥ ಸಮಾಜ ಸೇವಕರು ಅವ ರಾಗಿದ್ದರು ಎಂದು ಎಂಟಿಎಲ್‌ ಆಡಳಿತ ನಿರ್ದೇಶಕ ಟಿ. ಗೌತಮ್‌ ಪೈ ಸ್ವಾಗತ ಭಾಷಣದಲ್ಲಿ ಹೇಳಿದರು. 

ವಿಶಿಷ್ಟ  ಕಲಾಕೃತಿ 
ವನಿತಾ ಪೈಯವರು ಶಿಲ್ಪ ಕಲಾಕೃತಿ ಕುರಿತು ಮಾತ ನಾಡಿ, ಉಪೇಂದ್ರ ಪೈಯವರ ಬಗೆಗೆ ವಿಶಿಷ್ಟವಾದ ಸ್ಮಾರಕ ನಿರ್ಮಿಸಬೇಕೆಂದು ಚಿಂತನೆ ನಡೆಸಿ ಈ “ಕಾಯಿನ್‌ಏಜ್‌’ ಕಲಾಕೃತಿಗೆ ಮುಂದಾದೆವು. ಇದ  ರಲ್ಲಿ ಎರಡು ಸಂಕೇತಗಳಿವೆ; ನಾಣ್ಯಗಳು ಎನ್ನು  ವುದು ಅಭಿ ವೃದ್ಧಿ, ಸಂಪತ್ತಿನ ಸಂಕೇತ, ಸಂಸ್ಕೃತಿಯ ಸಂಕೇತವೂ ಹೌದು. ನಾಣ್ಯಗಳು ಆಳುಪ, ವಿಜಯ ನಗರ ಕಾಲ ವನ್ನು ನೆನಪಿಸುತ್ತವೆ. ಇದ ರಲ್ಲಿರುವ ಸೂರ್ಯ “ಉದಯ ವಾಣಿ’ಯ ಸಂಕೇತಿಸುತ್ತದೆ ಎಂದರು. 

ಪೈ ಕುಟುಂಬದ ಸದಸ್ಯರಾದ ಟಿ. ಅಶೋಕ್‌ ಪೈ, ಟಿ. ನಾರಾಯಣ ಪೈ, ವಸಂತಿ ಪೈ, ಉಡುಪಿ ಜಿಲ್ಲಾ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ, ಪೌರಾಯುಕ್ತ ಮಂಜುನಾಥಯ್ಯ, ನಗರಸಭಾ ಸದಸ್ಯರಾದ ಪ್ರಶಾಂತ್‌ ಭಟ್‌, ಜನಾರ್ದನ ಭಂಡಾರ್‌ಕರ್‌,  ಕಲಾಕೃತಿ ರೂಪಿಸಿದ ತಲ್ಲೂರು ಎಲ್‌.ಎನ್‌., ಡಾ| ಬಿ.ಎಂ. ಹೆಗ್ಡೆ, ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಸಿಇಒ ವಿನೋದ್‌ ಕುಮಾರ್‌, ಮಣಿಪಾಲ್‌ ಎನರ್ಜಿ ಆ್ಯಂಡ್‌ ಇನ್‌ಫ್ರಾಟೆಕ್‌ ಲಿ. ಸಿಇಒ ಸಾಗರ್‌ ಮುಖೋಪಾಧ್ಯಾಯ, ಗ್ರೂಪ್‌ ಎಚ್‌ಆರ್‌ ಹೆಡ್‌ ಪ್ರಮೋದ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು. ಎಂಟಿಎಲ್‌ ಸಿಇಒ ಅಭಯ ಗುಪೆ¤ ವಂದಿಸಿದರು. ಗ್ರೂಪ್‌ ಎಚ್‌ಆರ್‌ ಉಪವ್ಯವಸ್ಥಾಪಕಿ ಉಷಾರಾಣಿ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು. 

ಟಿಎ ಪೈ ಎದುರು ಸ್ಪರ್ಧಿಸಲು ನಿರಾಕರಿಸಿದ್ದ  ಮನೋರಮಾ
ನನ್ನ ತಂದೆಯವರು ಮಣಿಪಾಲದ ಪೈ ಯವರಿಂದ ಉಪಕೃತರಾದವರು. ಇಂದಿರಾ ಗಾಂಧಿ ಯವರು ಟಿ.ಎ. ಪೈಯವರ ವಿರುದ್ಧ ಕಾಂಗ್ರೆಸ್‌ ನಿಂದ ಸ್ಪರ್ಧಿಸಲು ನನ್ನ ತಾಯಿ ಮನೋರಮಾ ಮಧ್ವರಾಜರಿಗೆ ತಿಳಿಸಿದಾಗ ನನ್ನ ತಂದೆ ಮಧ್ವರಾಜರು ಇದು ಬೇಡ ಎಂದು ಹೇಳಿ ನಿರಾಕರಿಸಿದ್ದರು. 

– ಪ್ರಮೋದ್‌ ಮಧ್ವರಾಜ್‌

ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸದಿರಯ್ನಾ!
ಉಪೇಂದ್ರ ಪೈಯವರಿಗೆ ಸಾರ್ವಜನಿಕ ಸಮ್ಮಾನ ನಡೆದಾಗ, ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಬೇಡಿ; ಮೇಲೆ ಏರಿ ದವರಿಗೆ ಕೆಳಗೆ ಬೀಳುವ ಭಯವಿರುತ್ತದೆ. ನನ್ನ ಸಹೋದರ ಡಾ| ಟಿಎಂಎ ಪೈ ಮತ್ತು ಸಾರ್ವ ಜನಿಕರ ಸಹಕಾರದಿಂದ ಇಷ್ಟು ಕೆಲಸ ಮಾಡಲು ಸಾಧ್ಯವಾಯಿತು. ಇಚ್ಛಾ ಶಕ್ತಿಯನ್ನು ಕ್ರಿಯಾ ಶಕ್ತಿ ಯಾಗಿ ಮಾರ್ಪಡಿಸಿದ ಸಹೋದರ ಇದಕ್ಕೆ ಮುಖ್ಯ ಕಾರಣ. ಇದರ ಹಿಂದೆ ಭಗವಂತನ ಶಕ್ತಿ ಮತ್ತು ಯುಕ್ತಿ ಇದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮದು ಎಂದು ಹೇಳಿದ್ದರು. 

– ಡಾ| ಸಂಧ್ಯಾ ಎಸ್‌. ಪೈ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.