ಹೇರಿಕುದ್ರು-ತಲ್ಲೂರು: ಸೇತುವೆಯ ಮುರಿದ ತಡೆಗೋಡೆ ದುರಸ್ತಿ ಕಾರ್ಯ ಆರಂಭ
Team Udayavani, Mar 3, 2020, 5:46 AM IST
ತಲ್ಲೂರು: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಹೇರಿಕುದ್ರು ಹಾಗೂ ತಲ್ಲೂರು ಮಧ್ಯೆ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಳೆ ಸೇತುವೆಯ ಒಂದು ಕಡೆಯ ಮುರಿದು ಹೋಗಿದ್ದ ತಡೆಗೋಡೆಯ ದುರಸ್ತಿ ಕಾಮಗಾರಿ ಈಗ ಆರಂಭ ಗೊಂಡಿದೆ. ಮುರಿದು ಹೋಗಿದ್ದ ತಡೆಗೋಡೆಯ ದುರಸ್ತಿಯಾಗದೇ ಹಲವು ಸಮಯವೇ ಕಳೆದಿತ್ತು.
ಹೇರಿಕುದ್ರು ಹಾಗೂ ತಲ್ಲೂರು ಮಧ್ಯೆ ವಾರಾಹಿ ನದಿಗೆ ಈಗ ಹೊಸದಾಗಿ ಸೇತುವೆ ನಿರ್ಮಿಸ ಲಾಗಿದೆ. ಬೈಂದೂರಿನಿಂದ ಕುಂದಾಪುರ ಕಡೆಗೆ ಸಂಚರಿ ಸಲು ಹೊಸ ಸೇತುವೆಯಲ್ಲಿ ಅನುವು ಮಾಡಿಕೊಡಲಾಗಿದ್ದು, ಕುಂದಾಪುರದಿಂದ ಬೈಂದೂರು ಕಡೆಗೆ ಹಳೆ ಸೇತುವೆಯಲ್ಲಿಯೇ ಸಂಚರಿಸಬೇಕಾಗಿದೆ. ಈ ಸೇತುವೆಯ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಈಗಾಗಲೇ ದುರಸ್ತಿ ಮಾಡಿದ ಬಳಿಕವಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಆದರೆ ಒಂದು ಕಡೆ ಮಾತ್ರ ಸೇತುವೆಯ ತಡೆಗೋಡೆ ಹಾನಿಯಾಗಿ ಮುರಿದು ಹೋಗಿತ್ತು. ಇದು ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಪ್ರತಿನಿತ್ಯ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೂ ಬೈಕ್, ಕಾರು, ರಿಕ್ಷಾದಂತಹ ವಾಹನಗಳಿಂದ ಹಿಡಿದು, ಬಸ್‌ಗಳು, ಸರಕು ಸಾಗಾಟದ ಘನ ವಾಹನಗಳು ಸಂಚರಿಸುತ್ತಿರುತ್ತವೆ. ತಡೆಗೋಡೆ ಮುರಿದು ಹೋಗಿದ್ದರಿಂದ ಈ ಸೇತುವೆಯು ಅಪಾಯಕಾರಿಯಾಗಿ ಪರಿಣಮಿಸಿತ್ತು.
ಸುದಿನ ವರದಿ
ಈ ಹಳೆ ಸೇತುವೆಯ ತಡೆಗೋಡೆ ಮುರಿದು ಹೋಗಿದ್ದ ಬಗ್ಗೆ, ಇದರಿಂದ ವಾಹನ ಸವಾರರಿಗೆ ಆಗುತ್ತಿದ್ದ ತೊಂದರೆ ಕುರಿತಂತೆ “ಉದಯವಾಣಿ ಸುದಿನ’ವು ಫೆ. 10 ರಂದು “ಹಾನಿಯಾದ ತಡೆಗೋಡೆ ; ಅಪಾಯ ಆಹ್ವಾನಿಸುತ್ತಿರುವ ಸೇತುವೆ’ ಎನ್ನುವ ವರದಿಯನ್ನು ಪ್ರಕಟಿಸಿ, ಸಂಬಂಧಪಟ್ಟವರ ಗಮನಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆಯವರು ಈ ಸೇತುವೆಯ ತಡೆಗೋಡೆಯ ದುರಸ್ತಿ ಕಾಮಗಾರಿಯನ್ನು ಆರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.