ಲೈಟ್‌ ಫಿಶಿಂಗ್‌ಗೆ ಅನುಮತಿ ರದ್ದು ಹಿಂಪಡೆಯಲು ನಳಿನ್‌ಗೆ ಮನವಿ


Team Udayavani, Jan 7, 2018, 1:29 PM IST

fish_10.jpg

ಕಾಪು: ಕರ್ನಾಟಕ ಕರಾವಳಿಯಲ್ಲಿ ಲೈಟ್‌ ಫಿಶಿಂಗ್‌ ನಡೆಸುವ ಪಸೀರ್ನ್‌ ಬೋಟ್‌ಗಳಿಗೆ 2016ರಲ್ಲಿ ನೀಡಲಾಗಿದ್ದ ಷರತ್ತುಬದ್ಧ ಅನುಮತಿಯನ್ನು ಕೇಂದ್ರ ಸರಕಾರ 2017ರಲ್ಲಿ ರದ್ದುಗೊಳಿಸಿದ್ದು, ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಆದೇಶವನ್ನು ಹಿಂಪಡೆಯಲು ಒತ್ತಾಯಿಸುವಂತೆ ಅಖೀಲ ಕರ್ನಾಟಕ ಪಸೀರ್ನ್‌ (ಅ.ಕ.ಪ.) ಮೀನುಗಾರರ ಸಂಘದ ಪದಾಧಿಕಾರಿಗಳು ಸಂಸದ ನಳಿನ್‌ ಕುಮಾರ್‌ ಕಟೀಲು ಅವರನ್ನು ಆಗ್ರಹಿಸಿದರು.

ಕಾಪು ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಆಗಮಿಸಿದ್ದ ಸಂಸದ ನಳಿನ್‌ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳಾದ ಗುರುದಾಸ್‌ ಬಂಗೇರ, ಯಶೋಧರ್‌, ಬಾಬು ಕುಬಾಲ್‌, ಮೋಹನ್‌ ಬೆಂಗ್ರೆ, ರಮೇಶ್‌ ಕುಂದರ್‌ ನೇತೃತ್ವದ ನಿಯೋಗವು ಪಸೀರ್ನ ಮೀನುಗಾರಿಕೆ ನಿಷೇಧವಾದಲ್ಲಿ ಎದುರಾಗುವ ತೊಂದರೆಗಳ ಬಗ್ಗೆ ವಿವರಿಸಿ, ಈ ಬಗ್ಗೆ ಕೇಂದ್ರ ಸರಕಾರ ವಿಷಯ ಮನವರಿಕೆ ಮಾಡುವಂತೆ ಮನವಿ ಮಾಡಿತು. 

ಬಳಿಕ ಮೀನುಗಾರ ಮುಖಂಡ, ಅ.ಕ.ಪ. ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್‌ ಬಂಗೇರ ಮಾಧ್ಯಮದವರೊಂದಿಗೆ ಮಾತನಾಡಿ, ಮಳೆಗಾಲದ ಅವಧಿಯಲ್ಲಿ ನಾಡದೋಣಿ ಮೀನುಗಾರಿಕೆ ಮುಗಿಸಿ, ಕೇಂದ್ರ
ಸರಕಾರ ವಿಧಿಸಿದ್ದ ಷರತ್ತುಗಳ ಅನ್ವಯ ಲೈಟ್‌ ಫಿಶಿಂಗ್‌ ನಡೆಸಲಾಗುತ್ತಿದೆ. ಮೀನುಗಾರಿಕೆಗೆ ಪೂರಕವಾಗುವಂತೆ ಹ್ಯಾಲೋಜಿನ್‌ ಲೈಟ್‌ ಬಳಸಿ ಮೀನುಗಾರಿಕೆ ನಡೆಸಲು ಕೇಂದ್ರ ಸರಕಾರ 2 ವರ್ಷಗಳ ಹಿಂದೆ ಆದೇಶ ನೀಡಿದ್ದು, ಷರತ್ತುಗಳನ್ನು ಪಾಲಿಸಿ ಮೀನುಗಾರಿಕೆ ನಡೆಸಲಾಗುತ್ತಿದೆ.

ಸಣ್ಣಮೀನು ನಾಶ ಆರೋಪ ಸತ್ಯಕ್ಕೆ ದೂರ: ರಾಮಚಂದ್ರ ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ಮಾತನಾಡಿ, ಕೇಂದ್ರದ ನಿರ್ದೇಶನದಂತೆ, ಕರ್ನಾಟಕ ಸರಕಾರ ನೀಡಿರುವ ಸೂಚನೆಯಂತೆ ನಾಡದೋಣಿ, ಕೈರಂಪಣಿ, ಕಂತುಬಲೆ ಇನ್ನಿತರ ಸಣ್ಣ ಮೀನುಗಾರಿಕೆಗೆ ತೊಂದರೆಯಾಗದಂತೆ ಲೈಟ್‌ ಪಿಶಿಂಗ್‌ ನಡೆಸಲಾಗುತ್ತಿದೆ. ಇದರಲ್ಲಿ 45 ಎಂಎಂ ಬಲೆಯನ್ನು ಅಳವಡಿಸುವುದರಿಂದ ಸಣ್ಣ ಗಾತ್ರದ ಮೀನುಗಳು ಪಾರಾಗುತ್ತವೆ. ಹೀಗಾಗಿ ಲೈಟ್‌ ಫಿಶಿಂಗ್‌ನಿಂದ ಸಣ್ಣ ಮೀನುಗಳು, ಮೀನುಮರಿ ನಾಶವಾಗುತ್ತವೆ ಎನ್ನು ವುದು ಸತ್ಯಕ್ಕೆ ದೂರವಾದ ವಿಷಯ ಎಂದು ಸ್ಪಷ್ಟಪಡಿಸಿದರು.

ಚರ್ಚಿಸಿ ಬಗೆಹರಿಸಲು ಪ್ರಯತ್ನಿಸುವೆ: ನಳಿನ್‌ ಮಾಧ್ಯಮದವರೊಂದಿಗೆ ಸಂಸದ ನಳಿನ್‌ ಮಾತನಾಡಿ, ಮೀನುಗಾರಿಕೆಗೆ ಸಂಬಂಧಪಟ್ಟು ಹಲವು ವಿಧದ ಸಮಸ್ಯೆಗಳು ಮಂಗಳೂರು, ಕಾರವಾರ ಮತ್ತು ಮಲ್ಪೆ ಬಂದರುಗಳಲ್ಲಿ ಕಾಣಸಿಗುತ್ತಿವೆ. ಈ ಬಗ್ಗೆ ಮನವಿಗಳೂ ಬಂದಿವೆ. ಲೈಟ್‌ ಫಿಶಿಂಗ್‌ ನಿಷೇಧಿಸುವಂತೆ ಸಾಂಪ್ರದಾಯಿಕ ಮೀನುಗಾರರು; ಲೈಟ್‌ ಫಿಶಿಂಗ್‌ಗೆ ಅನುಮತಿ ನೀಡುವಂತೆ ಪಸೀìನ್‌ ಮೀನುಗಾರರು ಮನವಿ ನೀಡಿದ್ದಾರೆ.

ಕೆಲವು ಸಮಯದವರೆಗೆ ಲೈಟ್‌ ಫೀಶಿಂಗ್‌ ನಿಲ್ಲಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದೇಶವನ್ನು ಕೇಂದ್ರ ಸರಕಾರಕ್ಕೂ ಕಳುಹಿಸಿಕೊಟ್ಟಿದೆ. ಕೇಂದ್ರ ಸರಕಾರ ಅದೇ ಆದೇಶವನ್ನು ಹೊರಡಿಸಿದೆ. ಎರಡೂ ಮನವಿಗಳನ್ನು ಮತ್ತು ಆದೇಶಗಳನ್ನು ಜತೆಗಿರಿಸಿ ಕೇಂದ್ರದ ಜತೆಗೆ ಮಾತನಾಡುತ್ತೇನೆ. ಎರಡೂ ಬಗೆಯ ಮೀನುಗಾರರನ್ನು ಸೇರಿಸಿಕೊಂಡು ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದೆನ್ನುವುದರ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಲಾಲಾಜಿ ಆರ್‌. ಮೆಂಡನ್‌, ಬಿಜೆಪಿ ಮುಖಂಡರಾದ ಉದಯ್‌ಕುಮಾರ್‌ ಶೆಟ್ಟಿ, ಕುತ್ಯಾರು ನವೀನ್‌ ಶೆಟ್ಟಿ, ಸುರೇಶ್‌ ಪಿ. ಶೆಟ್ಟಿ ಗುರ್ಮೆ, ಯಶಪಾಲ್‌ ಸುವರ್ಣ, ಶ್ಯಾಮಲಾ ಕುಂದರ್‌, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಶಿಲ್ಪಾ ಸುವರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.