![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 10, 2017, 8:45 AM IST
ಉಡುಪಿ/ಮಂಗಳೂರು: ಮೀನು ಮಾರಾಟ ಫೆಡರೇಶನ್ ಮತ್ತು ಮಲ್ಪೆ ಮೀನುಗಾರರ ಸಂಘದ ಪ್ರಮುಖರನ್ನು ಒಳಗೊಂಡ ಮೀನುಗಾರರ ನಿಯೋಗ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ರವರ ನೇತೃತ್ವದಲ್ಲಿ ಕೇಂದ್ರ ಸಚಿವರನ್ನು ದಿಲ್ಲಿಯಲ್ಲಿ ಬುಧವಾರ ಭೇಟಿಯಾಗಿ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿತು.
ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ ಮಂಗಳೂರು, ಮಲ್ಪೆ, ಕೋಡಿಕನ್ಯಾಣ, ಹಂಗಾರಕಟ್ಟೆ, ಗಂಗೊಳ್ಳಿ ಮೀನುಗಾರಿಕಾ ಬಂದರಿನ ಕಾಮಗಾರಿ, ಮೀನುಗಾರಿಕಾ ಬಂದರಿನ ಡ್ರಜ್ಜಿಂಗ್ ಕಾಮಗಾರಿ, ಗಂಗೊಳ್ಳಿ ಬ್ರೇಕ್ ವಾಟರ್ ಕಾಮಗಾರಿ ಚುರುಕುಗೊಳಿಸಲು, ಕರಾವಳಿ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲು, ಕರಾವಳಿ ರಾಜ್ಯಗಳ ಮೀನುಗಾರಿಕೆಯಲ್ಲಿ ಸಮಗ್ರ ನೀತಿ ಅಳವಡಿಸಲು ಮತ್ತು ಸಮನ್ವಯ ಸಮಿತಿ ರಚಿಸಲು ಮನವಿ ಸಲ್ಲಿಸಲಾಯಿತು. ಈ ಬಗ್ಗೆ ರಾಜ್ಯದ ಸಚಿವರು ತತ್‌ಕ್ಷಣ ಸ್ಪಂದಿಸಿ ಆದೇಶ ನೀಡುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿÉ ಅವರಿಗೆ ವಾಲ್‌ರೋಪ್, ಬಲೆ ಹಾಗೂ ಮಂಜುಗಡ್ಡೆ ಮತ್ತು ಇನ್ನಿತರ ಸಲಕರಣೆ ಮೇಲೆ ವಿಧಿಸಿದ ಜಿಎಸ್‌ಟಿಯನ್ನು ಸಂಪೂರ್ಣ ವಿನಾಯಿತಿಗೊಳಿಸುವಂತೆ ಹಾಗೂ ಕೃಷಿಗೆ ನೀಡುವ ಸವಲತ್ತುಗಳನ್ನು ಮೀನುಗಾರಿಕೆಗೂ ವಿಸ್ತರಿಸುವಂತೆ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ದೊರೆಯುವ ಸವಲತ್ತುಗಳು ಮೀನುಗಾರರಿಗೂ ನೀಡುವಂತೆ, ಮೀನುಗಾರರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಕೂಡಲೇ ಕ್ರಮ ಜರಗಿಸುವುದಾಗಿ ತಿಳಿಸಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಬಂದರು ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಕುಳಾಯಿ ಮೀನುಗಾರಿಕಾ ಬಂದರಿನ ಕಾಮಗಾರಿಗೆ ಈಗಾಗಲೇ ಮಂಜೂರಾತಿ ದೊರೆತಿದ್ದು ಕಾಮಗಾರಿಯನ್ನು ತತ್‌ಕ್ಷಣ ಪ್ರಾರಂಭಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲು ಮತ್ತು ಹೆಜಮಾಡಿಯಲ್ಲಿ ಮೀನುಗಾರಿಕಾ ಬಂದರನ್ನು ಕೇಂದ್ರ ಸರಕಾರದ ಸಾಗರ ಮಾಲಾ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಸಲ್ಲಿಸಲಾಯಿತು.
ಮಂಗಳವಾರ ಸಚಿವ ಡಿ.ವಿ.ಸದಾನಂದರನ್ನೂ ನಿಯೋಗ ಭೇಟಿ ಮಾಡಿತು. ಈ ಸಂದರ್ಭ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮಾಜಿ ಅಧ್ಯಕ್ಷ ಎಚ್.ಟಿ. ಕಿದಿಯೂರು, ನಾಯಕರಾದ ಉದಯ್ ಕುಮಾರ್, ಸದಾನಂದ ಬಳ್ಕೂರು, ಗೋಪಾಲ್ ಆರ್.ಕೆ., ರಾಮಚಂದ್ರ ಕುಂದರ್, ದಯಾನಂದ ಸುವರ್ಣ, ಗೋಪಾಲ್ ಕುಂದರ್, ಸೋಮನಾಥ್ ಕಾಂಚನ್, ನಾರಾಯಣ್ ಕರ್ಕೇರ, ರಾಜೇಂದ್ರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.