ಕೃಷಿಯನ್ನೇ ನಂಬಿದ‌ ಎಲ್‌ಐಸಿ ಅಧಿಕಾರಿ

Team Udayavani, Feb 11, 2018, 11:32 PM IST

LIC-Krushi-11-2.jpg

ಕಾಪು: ಎಲ್‌ಐಸಿಯ ನಿವೃತ್ತ ಅಧಿಕಾರಿ, ಎಂ. ಎ., ಎಲ್‌ಎಲ್‌ಬಿ ಪದವೀಧರರಾಗಿರುವ ಮಜೂರು ಗ್ರಾಮದ ಗೋಪಾಲ ಕುಂದರ್‌ ಅವರು ನಿವೃತ್ತಿಯ ಅನಂತರ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಮಳೆಗಾಲ ಮುಗಿದಾಕ್ಷಣ ಸಾವಯವ ತರಕಾರಿ ಕೃಷಿಯತ್ತ ಗಮನ ಹರಿಸುವ ಅವರು ಒಂದು ಎಕರೆ ಕೃಷಿ ಗದ್ದೆಯಲ್ಲಿ ಗೊಂಡೆ ಹೂ, ಹರಿವೆ, ಬಸಳೆ, ಸೋರೆ ಕಾಯಿ, ಪಡುವಲ ಕಾಯಿ, ಕಾಸರಗೋಡು ಬದನೆ, ಜೋಳ, ಬೆಂಡೆ, ಅಲಸಂಡೆ ಸಹಿತ ಹಲವು ವಿಧದ ಕೃಷಿಯನ್ನು ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಎಂ. ಎ., ಎಲ್‌ಎಲ್‌ಬಿ ಪದವೀಧರ 
ಮಜೂರು ಗ್ರಾಮದ ಉಳಿಯಾರಿನ ಪ್ರಗತಿಪರ ಕೃಷಿಕರಾಗಿರುವ ಗೋಪಾಲ್‌ ಕುಂದರ್‌ ಮೂಲತಃ ಪಾಂಗಾಳ ಗುಡ್ಡೆ ಗರಡಿ ಮನೆಯ ಕೃಷಿಕ ಕುಟುಂಬಕ್ಕೆ ಸೇರಿದವರು. ಉದ್ಯೋಗವನ್ನು ಅರಸಿ ಕರಾವಳಿಯಿಂದ ಮುಂಬಯಿಗೆ ತೆರಳಿ ಹಗಲು ಕೆಲಸ ಮಾಡಿ ರಾತ್ರಿ ಶಾಲೆಗೆ ತೆರಳಿ ವಿದ್ಯೆ ಕಲಿತ ಇವರು ಎಂ. ಎ. / ಎಲ್‌.ಎಲ್‌.ಬಿ. ಪದವಿಯನ್ನು ಪಡೆದಿರುವರು. ಮುಂದೆ ಎಲ್‌ಐಸಿಯಲ್ಲಿ ಉದ್ಯೋಗಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.

ಎಲ್‌ಐಸಿ ಬೆಂಡೆ…!
ಬಾಲ್ಯದಿಂದಲೂ ಕೃಷಿಯತ್ತ ಒಲವು ಹೊಂದಿದ್ದ ಗೋಪಾಲ್‌ ಕುಂದರ್‌ ಅವರು ಎಲ್‌ಐಸಿ ಉದ್ಯೋಗದೊಂದಿಗೆ ಮುಂಬಯಿಯಿಂದ ಊರಿಗೆ ಮರಳಿದ ಬಳಿಕ ವೃತ್ತಿಯ ಜತೆಗೆ ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡರು. ಮನೆ ಪದಾರ್ಥಕ್ಕಾಗಿ ಬೆಳೆಸಿದ ತರಕಾರಿ ರುಚಿಯನ್ನು ತನ್ನ ಸಹೋದ್ಯೋಗಿಗಳಿಗೂ ನೀಡಲಾರಂಭಿಸಿದ್ದರು. ಗೋಪಾಲಣ್ಣನ ಮನೆಯಲ್ಲಿ ಬೆಳೆದ ಬೆಂಡೆಯ ರುಚಿ ಸವಿದ ಅವರ ಸಹೋದ್ಯೋಗಿಗಳು ಎಲ್‌ಐಸಿ ಬೆಂಡೆಯೆಂದೇ ಕರೆಯಲಾರಂಭಿಸಿದರು. ಇದನ್ನೇ ಪ್ರೇರಣೆಯಾಗಿಸಿಕೊಂಡ ಅವರು ನಿವೃತ್ತಿಯ ಬಳಿಕ ಕೃಷಿಯನ್ನೇ ತಮ್ಮ ಜೀವಾಳವನ್ನಾಗಿಸಿಕೊಂಡಿದ್ದಾರೆ.

ಬೆಂಡೆ ಕೃಷಿಯಿಂದ ಗೊಂಡೆ ಕೃಷಿಯವರೆಗೆ ಪಯಣ 
ಆರಂಭದಲ್ಲಿ ಬೆಂಡೆ ಕೃಷಿಯ ಮೂಲಕ ತರಕಾರಿ ಕೃಷಿ ಬದುಕನ್ನು ಪ್ರಾರಂಭಿಸಿದ ಗೋಪಾಲ್‌ ಕುಂದರ್‌ ಅವರು ಬಳಿಕ ತನ್ನ ಪತ್ನಿ ರೋಹಿಣಿ ಅವರ ಸಹಕಾರದೊಂದಿಗೆ ತರಕಾರಿ ಬೆಳೆಗಳನ್ನು ಬೆಳೆಸತೊಡಗಿದರು. ಜೋಳ, ಪಡುವಳ ಕಾಯಿ, ಸೋರೆ ಕಾಯಿ ಬೆಳೆಯತ್ತಲೂ ಗಮನ ಹರಿಸಿದ ಅವರು ಕರಾವಳಿಯ ಮಣ್ಣಿನಲ್ಲಿ ಗೊಂಡೆ ಹೂವಿನ ಬೆಳೆಯನ್ನು ಬೆಳೆಸುವ ಮೂಲಕ ಎಲ್ಲರ ಗಮನ ಸೆಳೆದರು. ಇತರೆಲ್ಲಾ ತರಕಾರಿ ಕೃಷಿಗಳಿಗೂ ಕ್ರಿಮಿನಾಶಕವೆಂದೇ ಹೇಳಲಾಗುತ್ತಿರುವ ಗೊಂಡೆ ಬೆಳೆ ಉತ್ತಮ ಇಳುವರಿಯನ್ನು ನೀಡುವ ಮೂಲಕ ಇವರ ಕೈ ಹಿಡಿಯಿತು.

ಕೈಹಿಡಿದ ಬಸಳೆ ಕೃಷಿ
ಬೆಂಡೆ ಮತ್ತು ಗೊಂಡೆಯ ಯಶಸ್ಸಿನ ಬಳಿಕ ಮತ್ತೂಂದು ರೀತಿಯ ಕೃಷಿಯತ್ತ ಒಲವು ತೋರಿಸಿದ ಅವರು ಪೇಟೆಯಿಂದ ಪದಾರ್ಥಕ್ಕಾಗಿ ತಂದ ಬಸಳೆ ತುಂಡುಗಳನ್ನು ದರ ತೆಗೆದು ನೆಟ್ಟು ಬಸಳೆ ಕೃಷಿಯತ್ತಲೂ ಮನ ಹಾಯಿಸಿದರು. ಬಸಳೆ ಗಿಡಗಳು ಬೆಳೆಯುತ್ತಾ ಬಂದಂತೆ ಅದರಲ್ಲಿ  ಕಾಯಿ ಆಗುವುದನ್ನೂ ವೀಕ್ಷಿಸಿದ ಅವರು ಕುತೂಹಲಕ್ಕಾಗಿ ಈ ಕಾಯಿಗಳನ್ನೇ ಒಣಗಿಸಿ, ಬೀಜದಿಂದಲೂ ಬಸಳೆ ಕೃಷಿ ಮಾಡಬಹುದೆನ್ನುವುದನ್ನು ಆವಿಷ್ಕರಿಸಿದರು. ಆ ಮೂಲಕ ಬಸಳೆ ಕೃಷಿಯೂ ಅವರ ಕೈ ಹಿಡಿಯಿತು.

ಸಾವಯವ ಗೊಬ್ಬರವೇ ಬಳಕೆ
ಹಟ್ಟಿಗೊಬ್ಬರ ಮತ್ತು ಸುಡುಮಣ್ಣಿನ ಮಿಶ್ರಣವನ್ನೇ ಹದ ಮಾಡಿ ತನ್ನೆಲ್ಲ ತರಕಾರಿ ಕೃಷಿಗಳಿಗೆ ಬಳಸುತ್ತಾ ಬರುತ್ತಿರುವುದರಿಂದ ಗೋಪಾಲ ಕುಂದರ್‌ ಅವರು ಬೆಳೆದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಬೆಳಗ್ಗೆದ್ದು ಎರಡು ಕ್ಯಾನ್‌ಗಳಲ್ಲಿ ಗೋಮೂತ್ರ, ಸೆಗಣಿ, ಸುಡುಮಣ್ಣಿನ ಮಿಶ್ರಣವನ್ನು ತಾನೇ ಹದ ಮಾಡಿ ಗದ್ದೆಗೆ ಸುರಿಯುತ್ತಾರೆ. ಸಾವಯವ ಗೊಬ್ಬರ ಆರೋಗ್ಯಕ್ಕೆ ಉತ್ತಮ ಮತ್ತು ಉತ್ತಮ ಇಳುವರಿ ನೀಡುವಲ್ಲಿಯೂ ಸಹಕಾರಿ ಎಂಬ ಭಾವನೆ ಅವರದ್ದು.

ಬಸಳೆ ಬೀಜದಿಂದ ಗಿಡ ಮಾಡುವ‌ ವಿಧಾನ 
ಬಸಳೆ ಗಿಡ ಬಿಡುವ ಬಿಳಿ ಬಣ್ಣದ ಹೂವುಗಳು ಮುಂದೆ ನೇರಳೆ ಬಣ್ಣದ ಕಾಯಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಆ ನೇರಳೆ ಬಣ್ಣದ ಕಾಯಿಗಳನ್ನು ಮೂರರಿಂದ ನಾಲ್ಕು ದಿನ ಬಿಸಿಲಿನಲ್ಲಿ ಒಣಗಿಸಿದ ಬಳಿಕ ಹದ ಮಾಡಿದ ನೆಲದಲ್ಲಿ ಬಿತ್ತನೆ ಮಾಡಿ ನೀರುಣಿಸಿದರೆ ಬಸಳೆ ಗಿಡಗಳು ಮೊಳಕೆಯೊಡೆಯುತ್ತವೆ. ಮೊಳಕೆಯೊಡೆದ ಬಸಳೆ ಗಿಡಗಳನ್ನು ದರ ಅಗೆದು ಕೆಳಭಾಗದಲ್ಲಿ ಒಣಗೊಬ್ಬರ ಹಾಕಿ ಮಣ್ಣಿನ ಮಿಶ್ರಣದೊಂದಿಗೆ ನೆಡಬೇಕು. ಹೀಗೆ ನೆಟ್ಟ ಗಿಡಗಳು ಬೆಳವಣಿಗೆಗೆ ಅನುಗುಣವಾಗಿ ಸುಡು ಮಣ್ಣು, ಸಾವಯವ ಗೊಬ್ಬರ ಹಾಕಿ ಪೋಷಿಸಿಕೊಂಡು ಬರಬೇಕು. ಸಮರ್ಪಕ ರೀತಿಯಲ್ಲಿ ಬಸಳೆ ಗಿಡ ಬೆಳೆದರೆ 20-25 ದಿನಗಳೊಳಗಾಗಿ ಬಸಳೆಯನ್ನು ತುಂಡರಿಸಿ ಮಾರುಕಟ್ಟೆಗೆ ಕೊಂಡೊಯ್ಯಬಹುದಾಗಿದೆ.

ಬದುಕು ಕಟ್ಟಲು ಪ್ರೇರಣೆ
ಸ್ವಂತ ಪರಿಶ್ರಮದೊಂದಿಗೆ ಮಕ್ಕಳನ್ನು ಸಾಕಿದಂತೆ ಕೃಷಿ ಕಾರ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬರುವ ಮೂಲಕ ದಿನದ ಕನಿಷ್ಠ 2-3 ಗಂಟೆಗಳನ್ನು ಕೃಷಿ ಗದ್ದೆಯಲ್ಲಿ ಕಳೆಯುತ್ತೇನೆ. ಬಹಳಷ್ಟು ಮಂದಿ ಕೃಷಿ ಲಾಭದಾಯಕವಲ್ಲ ಎಂದು ಹೇಳುತ್ತಾರೆ. ಆದರೆ ನಾನು ಕೃಷಿಯ ಮೇಲೆ ಪ್ರೀತಿಯಿಟ್ಟಿದ್ದು, ಕೃಷಿ ನಿರಂತರವಾಗಿ ನನ್ನ ಕೈ ಹಿಡಿದಿದೆ.
– ಗೋಪಾಲ ಕುಂದರ್‌ 

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.