ಬಡವರಿಗೆ ಮರಳು: ಕುಂದಾಪುರ, ಬೈಂದೂರು ಶಾಸಕರಿಂದ ಸಭೆ


Team Udayavani, Nov 21, 2019, 5:14 AM IST

2011KDLM10PH1

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಡವರಿಗೆ ಮರಳು ದೊರೆಯಬೇಕೆಂಬ ನಿಟ್ಟಿನಲ್ಲಿ ಬುಧವಾರ ಅಪರಾಹ್ನ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ.ಎಂ. ಸುಕುಮಾರ ಶೆಟ್ಟಿ ಅವರು ಪ್ರತ್ಯೇಕ ಸಭೆ ನಡೆಸಿದರು.

ತುರ್ತು ಕ್ರಮ ಕೈಗೊಳ್ಳಿ
ಒಂದೂವರೆ ತಿಂಗಳ ಹಿಂದೆ ಹೇಳಿದ್ದರೂ ಕುಂದಾಪುರ ಭಾಗದಲ್ಲಿ ಮರಳು ಟೆಂಡರ್‌ಗೆ ಇನ್ನೂ ಕ್ರಮಕೈಗೊಂಡಿಲ್ಲ. ಮರಳುಗಾರಿಕೆ ಎಂದರೆ ಬಳ್ಳಾರಿ ಗಣಿಯಂತಾಗಿದೆ ಎಂಬ ಟೀಕೆ ಕೇಳುತ್ತಿದೆ. ತುರ್ತಾಗಿ ಕಿರು ಅವಧಿಯ ಟೆಂಡರ್‌ ಪ್ರಕ್ರಿಯೆ ನಡೆಸಿ ಬಾಕಿ ಉಳಿದ ಮರಳು ದಿಬ್ಬಗಳನ್ನು ಏಲಂ ಮಾಡಿ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಗಣಿ ಇಲಾಖೆ ಅಧಿಕಾರಿಗಳಿಗೆ ಹೇಳಿದರು.

ಪ್ರತಿಕ್ರಿಯೆಸಿಯೂ ಕ್ರಮ ಕೈಗೊಳ್ಳದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ವಿಳಂಬಿಸಬೇಡಿ. ಅರ್ಹರಿಗೆ ಮರಳು ದೊರೆಯುವಂತಾಗಬೇಕು. ಮುಂದಿನ ಬಾರಿ ಟೆಂಡರ್‌ ಕರೆಯುವಾಗ ಈ ಬಾರಿಯ ಲೋಪದೋಷಗಳನ್ನು ಸರಿಪಡಿಸ ಬೇಕೆಂದರು. ಗಣಿ ಇಲಾಖೆ ಅಧಿಕಾರಿ ರಾಮ ಜಿ. ನಾಯ್ಕ , ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 10 ಮೆಟ್ರಿಕ್‌ ಟನ್‌ (2.75 ಯುನಿಟ್‌)ಗೆ 5,500 ರೂ., ನಾನ್‌ ಸಿಆರ್‌ಝಡ್‌ನ‌ಲ್ಲಿ 6,500 ರೂ. ದರ ನಿಗದಿ ಮಾಡಲಾಗಿದೆ. ಗುಲ್ವಾಡಿ, ಕಾವ್ರಾಡಿ, ಬಳ್ಕೂರು ವ್ಯಾಪ್ತಿಗೆ 11.2 ಎಕ್ರೆ, ಹಳ್ನಾಡು, ಜಪ್ತಿ ವ್ಯಾಪ್ತಿಯಲ್ಲಿ 5.7 ಎಕ್ರೆಗೆ 5 ವರ್ಷಗಳಿಗೆ ಮರಳುದಿಬ್ಬ ತೆಗೆ ಯಲು ಟೆಂಡರ್‌ ಆಗಿದೆ ಎಂದರು. ಲಾರಿಗೆ ತುಂಬಿಸುವುದನ್ನೂ ಸೇರಿಸಿ ದರ ವಿಧಿಸಬೇಕು, ಹೊಸದಾಗಿ ಇನ್ನಷ್ಟು ಕಡೆ ಮರಳು ದಿಬ್ಬ ಗುರುತಿಸಿ ಟೆಂಡರ್‌ಗೆ ಕ್ರಮವಹಿಸಲು ಶಾಸಕರು ಹೇಳಿದರು.
ಬಳ್ಕೂರು, ಅಂಪಾರು, ಹಳ್ನಾಡು, ಶಂಕರ ನಾರಾಯಣ, ಮೊಳಹಳ್ಳಿ ಕಡೆಗಳ ವಾರಾಹಿ ಹೊಳೆಯಲ್ಲಿ 8 ಕಡೆ ಮರಳು ತೆಗೆಯಲು ಟೆಂಡರ್‌ ಪ್ರಕ್ರಿಯೆ ಬಾಕಿಯಿದೆ ಎಂದು ಇಲಾಖಾಧಿಕಾರಿ ಹೇಳಿದರು.

ಹೂಳೆತ್ತಿ ಹರಾಜು ಹಾಕಿ
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲ ಕಿಂಡಿ ಅಣೆಕಟ್ಟುಗಳ ಹೂಳೆತ್ತಿಸಬೇಕು. ಈ ಪೈಕಿ ಲಭ್ಯವಿರುವ ಮರಳನ್ನು ಗ್ರಾ.ಪಂ. ಮಟ್ಟದಲ್ಲಿ ಏಲಂ ಮಾಡಿ ಕನಿಷ್ಟ ದರದಲ್ಲಿ ಬಡವರಿಗೆ ನೀಡಬೇಕು. ಅಭಿವೃದ್ಧಿ ಕಾಮಗಾರಿ, ಮನೆ ನಿರ್ಮಾಣಕ್ಕೆ ಮರಳಿನ ಕೊರತೆಯಾಗಬಾರದು ಎಂದು ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

ಪಂ.ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಕರಣಿಕರ ಸಭೆಯಲ್ಲಿ ಮಾತನಾಡಿದ ಅವರು, ಹೂಳೆತ್ತಿದರೆ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಕೊರತೆ ನಿವಾರಣೆಗೆ ಸಹಾಯವಾಗಲಿದೆ. ಕೃತಕ ನೆರೆಯುಂಟಾಗದು ಎಂದರು. ಕಾಟಾಚಾರಕ್ಕೆ ಸಭೆ ಮಾಡುತ್ತಿಲ್ಲ. ಜನಪ್ರತಿನಿಧಿಗಷ್ಟೇ ಅಲ್ಲ ಸರಕಾರಿ ನೌಕರರಿಗೂ ಜನರ ಕಾಳಜಿಬೇಕು. ಇಷ್ಟು ಹೊಳೆಗಳಿದ್ದರೂ ನೀರಿನ ಅಭಾವ ನಮ್ಮ ದುರಂತ, ಸಭೆಗೆ ಬಾರದ ಪಿಡಿಒಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದರು.

ಹೂಳೆತ್ತಲು 3 ವರ್ಗೀಕರಣ ಮಾಡಿ ಮರಳು ಸಿಗುವಲ್ಲಿ ಮೊದಲು ತೆಗೆದು ಏಲಂ, ಅನಂತರ ಇತರೆಡೆ ಹೂಳೆತ್ತಲಾಗುವುದು ಎಂದರು. ಗಣಿ ಇಲಾಖೆ ಅಧಿಕಾರಿ ರಾಮ್‌ ಜಿ. ನಾಯ್ಕ, 1 ವಾರದೊಳಗೆ ಆದ್ಯತೆಯ ಪಟ್ಟಿ ನೀಡಿ. ಜಂಟಿ ಸರ್ವೆ ನಡೆಸಲಾಗುವುದು ಎಂದರು.

ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಎಸ್‌.ಕುಂದರ್‌, ಉಪಾಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ, ಬೈಂದೂರು ತಹಶೀಲ್ದಾರ್‌ ಬಸಪ್ಪ ಪೂಜಾರ್‌, ಇಒ ಭಾರತಿ, ಕುಂದಾಪುರ ಇಒ ಡಾ| ನಾಗಭೂಷಣ್‌ ಉಡುಪ ಉಪಸ್ಥಿತರಿದ್ದರು.

ಅಭಿವೃದ್ಧಿ ಕಾರ್ಯಗಳಿಗೆ
370 ಕೋ.ರೂ. ಮಂಜೂರು
ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈ ವರ್ಷ 300 ಕೋ.ರೂ., ಕಳೆದ ವರ್ಷ 70 ಕೋ.ರೂ. ಮಂಜೂರಾಗಿದ್ದು ಕಾಮಗಾರಿಗೆ ಮರಳಿನ ಕೊರತೆಯಿದೆ. ಇನ್ನಷ್ಟು ಕಡೆ ಕಾಲುಸಂಕ, ಶ್ಮಶಾನ, ರಿಕ್ಷಾ ತಂಗುದಾಣ ಮಾಡಲು ಅನುದಾನ ನೀಡಲಾಗುವುದು. ಸೌಕೂರು ಏತ ನೀರಾವರಿ ಯೋಜನೆಗೆ 74 ಕೋ.ರೂ.ಗೆ ಟೆಂಡರ್‌ ಆಗಿದೆ.
-ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು

ಟಾಪ್ ನ್ಯೂಸ್

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.