ಕಂದಾಯ ಇಲಾಖೆಯ ದೋಷ ಅಕ್ರಮಕ್ಕೊಂದು ರಹದಾರಿ!
Team Udayavani, Aug 3, 2017, 7:30 AM IST
ಉಡುಪಿ: ಕರಾವಳಿ ಜಿಲ್ಲೆಗಳ ಭೂಮಿ ಹಿಂದಿನಿಂದಲೂ ಕೃಷಿ ಭೂಮಿ ಎಂದು ದಾಖಲೆಗಳು ಸಾರುತ್ತವೆ. ಬ್ರಿಟಿಷರ ಕಾಲದಲ್ಲಿ ಮದ್ರಾಸು ಸರಕಾರವಿರುವಾಗಲೇ ಇಲ್ಲಿನೆಲ್ಲಾ ಭೂಮಿಗೆ ಭೂಕಂದಾಯವನ್ನು ನಿಗದಿ ಮಾಡಲಾಗಿತ್ತು. ಹೀಗಾಗಿ ಮನೆ ಕಟ್ಟುವಾಗ ಅಥವಾ ಕೃಷಿಯೇತರ ಉದ್ದೇಶಕ್ಕೆ ಬಳಸುವಾಗ ಭೂಮಿಯನ್ನು ಕೃಷಿಯೇತರವಾಗಿ ಪರಿವರ್ತನೆ ಮಾಡಬೇಕು. ಇದು ಉಭಯ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯಲ್ಲಿ ಬಹಳ ಬೇಡಿಕೆ ಇರುವ ಆಯಕಟ್ಟಿನ ಸ್ಥಳ.
ಹೀಗೆ ಕೃಷಿಯೇತರ ಪರಿವರ್ತನೆ ಮಾಡಿದ ಸ್ಥಳವನ್ನು ಮಾರಾಟ ಮಾಡಿದಾಗ ಪಹಣಿ ಪತ್ರಿಕೆಗಳಲ್ಲಿ ಮಾರಾಟ ಮಾಡಿದವನ ಹೆಸರೇ ಇರುತ್ತದೆ.
ಗ್ರಾಮಾಂತರ ಪ್ರದೇಶದಲ್ಲಿ ಗ್ರಾ.ಪಂ.ಗಳು 9/11 ದಾಖಲೆಯಲ್ಲಿ ಖರೀದಿದಾರನ ಹೆಸರು, ನಗರ ಪ್ರದೇಶದಲ್ಲಿ ನಗರ ಸಂಸ್ಥೆಗಳು ಖಾತಾ ನಕಲಿನಲ್ಲಿ ಹೆಸರು ದಾಖಲಿಸು ತ್ತದೆ. ಪಹಣಿ ಪತ್ರಿಕೆಗಳಲ್ಲಿ ಮಾರಾಟ ಮಾಡಿದವನ/ಳ ಹೆಸರೇ ಇರುವುದರಿಂದ ಇದು ಹಲವು ಸಂದರ್ಭಗಳಲ್ಲಿ ದುರ್ಬಳಕೆಯಾಗುವ ಸಾಧ್ಯತೆ ಇದೆ.
ನ್ಯಾಯಾಲಯಗಳಿಗೆ ಜಾಮೀನು ಅರ್ಜಿ ಸಲ್ಲಿಸುವಾಗ ಜಾಗ ವನ್ನು ಮಾರಿದ್ದರೂ ಪಹಣಿಯಲ್ಲಿ ಮಾರಾಟ ಮಾಡಿ ದವರ ಹೆಸರು ಇರುವುದರಿಂದ ಪಹಣಿ ಪತ್ರಿಕೆಗಳನ್ನು ಸಲ್ಲಿಸುವ ಸಾಧ್ಯತೆ ಇದೆ. ಸಾಲ ಪಡೆಯುವಾಗಲೂ ಬ್ಯಾಂಕ್ ಅಧಿಕಾರಿಗಳು ಪಹಣಿ ಪತ್ರಿಕೆಗಳನ್ನು ಕೇಳುತ್ತಾರೆ. ಮಾರಾಟ ಮಾಡಿದರೂ ಪಹಣಿ ಪತ್ರಿಕೆಗಳಲ್ಲಿರುವ ಹೆಸರು ಆಧರಿಸಿ ದಾಖಲೆಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ಸಲ್ಲಿಸುವ ಅಪಾಯವೂ ಇದೆ. ಈಗ ವಿವಿಧೆಡೆ ಅಕ್ರಮಗಳು ನಡೆಯುತ್ತಿರುವಾಗ ಇದೊಂದು ಅಕ್ರಮವೆಸಗಲು ಇರುವ ರಹದಾರಿಯಂತಿದೆ.
ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಭೂಮಿಗಳೂ ಒಂದೋ ಸರಕಾರಿ ಅಥವಾ ಖಾಸಗಿ ಪಟ್ಟಾ ಭೂಮಿ ಎಂದು ಕಾನೂನು ಹೇಳುತ್ತದೆ. ಪಹಣಿ ಪತ್ರಿಕೆಯ 9ನೇ ಕಲಂನಲ್ಲಿ ಕಬ್ಬೆ / ಸ್ವಾಧೀನದಾರರ ಹೆಸರು ಇರುವಲ್ಲಿ “ಎ ಕರಾಬ್’ ಎಂದು ಮಾಡಿಸುವ ವ್ಯವಸ್ಥೆಯಾದಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ.
ಪಹಣಿ ಪತ್ರಿಕೆಗಳಲ್ಲಿರುವ ಹೆಸರೇ ಮಾಲಕತ್ವಕ್ಕೆ ಅಂತಿಮ ದಾಖಲೆ ಅಲ್ಲ ಎಂದು ಕಾನೂನು ಹೇಳಿದರೂ ಪಹಣಿ ಇನ್ನೂ ವ್ಯವಹಾರದಲ್ಲಿ ಜೀವಂತ ಇದೆ. ಸಬ್‌ರಿಜಿಸ್ಟ್ರಾರ್ ಕಚೇರಿಯ ಋಣಭಾರ ಪತ್ರದಲ್ಲಿ (ಎನ್‌ಕಂಬ್ರೆನ್ಸ್ ಸರ್ಟಿಫಿಕೇಟ್) ಎಲ್ಲ ವಿವರಗಳು ದಾಖಲಾಗುತ್ತವೆಯಾದರೂ ಎಲ್ಲರೂ ಇದನ್ನು ಕೊಂಡುಕೊಳ್ಳುವುದಿಲ್ಲ. ಈ ದಾಖಲೆ ಇಲ್ಲದೆ ಬ್ಯಾಂಕ್ ಅಧಿಕಾರಿಗಳು ಸಾಲ ಕೊಡುವುದೂ ಇದೆ.
ಸಾರ್ವಜನಿಕರು ಮ್ಯುಟೇಶನ್ ಅರ್ಜಿ ಸಲ್ಲಿಸಿದರೂ ಸಬ್‌ರಿಜಿಸ್ಟ್ರಾರ್ ಕಚೇರಿಯಿಂದ ಗ್ರಾ.ಪಂ. ಕಚೇರಿಗೆ ದಾಖಲೆಗಳು ಹೋಗುತ್ತವೆಯೇ ಹೊರತು ಕಂದಾಯ ಇಲಾಖೆಗೆ ಆನ್‌ಲೈನ್‌ನಲ್ಲಿ ದಾಖಲೆಗಳು ಹೋಗದ ಕಾರಣ ಕಂದಾಯ ಇಲಾಖಾಧಿಕಾರಿಗಳು ಮಾನ್ಯ ಮಾಡುವುದಿಲ್ಲ. ಸಹಾಯಕ ಕಮಿಷನರರಿಗೆ ಮೇಲ್ಮನವಿ ಸಲ್ಲಿಸಿದರೂ ಅವರೂ ತಿರಸ್ಕರಿಸುತ್ತಾರೆ.
ಇತ್ತೀಚಿನ ನಿಯಮಾವಳಿ ಪ್ರಕಾರ 15 ಸೆಂಟ್ಸ್‌ಗಿಂತ ಕಡಿಮೆ ಜಾಗವನ್ನು ಪರಿವರ್ತನೆ ಮಾಡಿದ್ದಲ್ಲಿ ಸರ್ವೇಯರ್ ನಕ್ಷೆ ಮಾಡಿ ಕೊಡುತ್ತಾರೆ. ಅದಕ್ಕಿಂತ ಹೆಚ್ಚಿನ ಜಾಗವಿದ್ದರೆ 11 ಇ ನಕ್ಷೆ ಮಾಡಿಸಿಕೊಡಬೇಕಾಗುತ್ತದೆ. ಆದರೆ ಆರ್‌ಟಿಸಿಯಲ್ಲಿ ಹೆಸರು ತಿದ್ದುಪಡಿ ಆಗುತ್ತಿಲ್ಲ.
ಕರಾವಳಿ ಹೊರತುಪಡಿಸಿದ ಘಟ್ಟದ ಮೇಲಿನ ಪ್ರದೇಶದಲ್ಲಿ ಈ ಸಮಸ್ಯೆ ಇಲ್ಲ. ಹೀಗಾಗಿ ಪಹಣಿ ಪತ್ರಿಕೆಯ 9ನೇ ಕಲಂನಲ್ಲಿ ಮಾರಾಟಗಾರನ/ಳ ಹೆಸರು ಇಲ್ಲದಂತೆ ಮಾಡುವ ಅಗತ್ಯವಿದೆ. ಇದಕ್ಕೆ ಬೇಕಾದ ತಿದ್ದುಪಡಿಗಳನ್ನು ಸರಕಾರ ಮಾಡಬೇಕಾಗಿದೆ.
- ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.