ಡಾ| ಟಿಎಂಎ ಪೈ 121ನೆಯ ಜನ್ಮದಿನಾಚರಣೆ
Team Udayavani, May 1, 2019, 6:03 AM IST
ಉಡುಪಿ: ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ|ಟಿಎಂಎ ಪೈಯವರ 121ನೆಯ ಜನ್ಮದಿನವನ್ನು ಮಂಗಳವಾರ ಆಚರಿಸಲಾಯಿತು.
ಮಣಿಪಾಲ ಸಿಟಿಜನ್ ಫೋರಂ, ಮಣಿಪಾಲ ಮಾಹೆ ವತಿಯಿಂದ ಮಣಿಪಾಲದ ಮಾಧವ ವಿಹಾರ ಉದ್ಯಾನವನದ ಆ್ಯಂಪಿ ತಿಯೇಟರ್‌ನಲ್ಲಿ ಮಾಯಾ ಕಾಮತ್ ಮತ್ತು ಬಳಗದವರಿಂದ ಭಜನೆ ಕಾರ್ಯಕ್ರಮ ಜರುಗಿತು. ಡಾ| ಟಿಎಂಎ ಪೈಯವರು ವಾಸವಿದ್ದ ಸ್ಮತಿ ಭವನದಲ್ಲಿ (ಡಾ| ಟಿಎಂಎ ಪೈ ಮ್ಯೂಸಿಯಂ) ಉಡುಪಿಯ ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಫೈನ್ ಆರ್ಟ್ಸ್ನ ವಿದ್ವಾನ್ ಮಹಾಬಲೇಶ್ವರ ಭಾಗವತ್ ಮತ್ತು ಬಳಗದವರಿಂದ ಸುಗಮ ಸಂಗೀತ ನಡೆಯಿತು.
ಮಾಧವ ವಿಹಾರದಲ್ಲಿ ಡಾ|ಟಿಎಂಎ ಪೈಯವರ ಪುತ್ಥಳಿಗೆ ಗೌರವ ಸಮರ್ಪಿಸಲಾಯಿತು. ಬಳಿಕ ಪಕ್ಕದಲ್ಲಿರುವ ಶಾರದಾ ಪೈ, ಟಿಎ ಪೈಯವರ ಅಂತಿಮ ಸಂಸ್ಕಾರ ನಡೆದ ಸ್ಥಳಕ್ಕೆ ಕುಟುಂಬಸ್ಥರು ಗೌರವ ಸಲ್ಲಿಸಿದರು.
ಮಣಿಪಾಲ ಮಾಹೆ ವಿ.ವಿ. ಕುಲಾಧಿಪತಿ ಡಾ|ರಾಮದಾಸ್ ಎಂ. ಪೈ, ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಪೈ, ಎಂಇಎಂಜಿ ಅಧ್ಯಕ್ಷ ಡಾ|ರಂಜನ್ ಪೈ, ಡಾ|ಟಿಎಂಎ ಪೈ ಫೌಂಡೇಶನ್ ಕಾರ್ಯದರ್ಶಿ ಟಿ.ಅಶೋಕ್ ಪೈ ಮೊದಲಾದವರು ಉಪಸ್ಥಿತರಿದ್ದರು.
ಮಾಹೆ ವಿ.ವಿ. ಆಡಳಿತ ಕಚೇರಿಯಲ್ಲಿ ಪುತ್ಥಳಿಗೆ ಗೌರವಾರ್ಪಣೆ ಮಾಡಿದ ಮಂಗಳೂರು, ಮಣಿಪಾಲ ಕೆಎಂಸಿ ನಿವೃತ್ತ ಪ್ರಾಧ್ಯಾಪಕ ಡಾ|ಲಕ್ಷ್ಮಣ ಪೈ ಅವರು ಡಾ|ಟಿಎಂಎ ಪೈಯವರ ಬಗೆಗೆ ಮಾತನಾಡಿದರು. ಡಾ|ರಂಜನ್ ಪೈ, ವಸಂತಿ ಪೈ, ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್, ಕುಲಸಚಿವ ಡಾ| ನಾರಾಯಣ ಸಭಾಹಿತ್, ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ, ಸಿಬಂದಿ ಉಪಸ್ಥಿತರಿದ್ದರು.
ಸಂಜೆ ಮಣಿಪಾಲದ ವ್ಯಾಲಿ ವ್ಯೂ ಹೊಟೇಲ್ ಸಭಾಂಗಣದಲ್ಲಿ ಸ್ಥಾಪಕರ ದಿನಾಚರಣೆ ನಡೆಯಿತು.ಮಾಧವ ವಿಹಾರದಲ್ಲಿ ಡಾ| ರಾಮದಾಸ್ ಪೈ ಮತ್ತಿತರರು ಗೌರವ ಸಮರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.