ಅಪಘಾತಗಳು ನಡೆದರೂ ಪಾಠ ಕಲಿಯದ ಸವಾರರು! 


Team Udayavani, Jan 17, 2019, 1:30 AM IST

accident.png

ಕಾಪು: ಮೂಳೂರಿನಿಂದ ಕಾಪುವಿನ ವರೆಗೆ ರಾಷ್ಟ್ರೀಯ ಹೆದ್ದಾರಿ 66 ನಿತ್ಯ ಅಪಘಾತಗಳ ಸರಮಾಲೆಯೇ ನಡೆಯುತ್ತಿದ್ದು ಇದಕ್ಕೆ ಅವೈಜ್ಞಾನಿಕ ಕಾಮಗಾರಿ ಒಂದು ಕಾರಣವಾದರೆ, ಇನ್ನೊಂದು  ಚಾಲಕರ ಬೇಜವಾಬ್ದಾರಿ ಚಾಲನೆಯೂ ಕಾರಣವಾಗಿದೆ.   ಹೆದ್ದಾರಿ ನಿರ್ಮಾಣ ಸಂದರ್ಭ ಅಗಲವಾದ ಡಿವೈಡರ್‌ ನಿರ್ಮಿಸಲಾಗಿದ್ದು, ಇದರ ನಡುವೆ ಮಳೆ ನೀರು ಹರಿದು ಹೋಗಲು ಬಿಟ್ಟ  ಪ್ರದೇಶದಲ್ಲೇ  ದ್ವಿಚಕ್ರ ವಾಹನಗಳನ್ನು ತೂರಿಸುವುದರಿಂದ ಅಪಘಾತಗಳು ನಡೆಯುತ್ತಿವೆ.

ಮೂರು ವರ್ಷದಲ್ಲಿ ಐದು ಸಾವು
ಕಳೆದ ಮೂರು ವರ್ಷಗಳಲ್ಲಿ ಡಿವೈಡರ್‌ ನಡುವೆ ದ್ವಿಚಕ್ರವಾಹನಗಳು ಹಾದುಹೋಗಿ ಡಿಕ್ಕಿ ಹೊಡೆದ ಪರಿಣಾಮ 23ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಇದರಿಂದಾಗಿ ಐದು ಮಂದಿ ಸಾವಿಗೀಡಾಗಿದ್ದಾರೆ.

ಎಲ್ಲೆಲ್ಲಿವೆ ಡೇಂಜರಸ್‌ ಸ್ಪಾಟ್‌
ರಾ.ಹೆ. 66ರ ಉದ್ಯಾವರ ಜನತಾ ಗ್ಯಾರೇಜ್‌, ಕಟಪಾಡಿ ತೇಕಲತೋಟ, ಕಲ್ಲಾಪು ಸೇತುವೆ, ಪಾಂಗಾಳ – ಮೂಡಬೆಟ್ಟು ಕ್ರಾಸ್‌, ಉಳಿಯಾರಗೋಳಿ ಬಿಕ್ಕೋ, ಮೂಳೂರು ಬಿಲ್ಲವ ಸಂಘ, ಮೂಳೂರು ಸುನ್ನಿ ಸೆಂಟರ್‌, ಉಚ್ಚಿಲ ಸಂತೆ ಮಾರ್ಕೆಟ್‌ ಬಳಿ  ದ್ವಿಚಕ್ರ ವಾಹನಗಳನ್ನು ನುಗ್ಗಿಸಿಕೊಂಡು ಹೋಗುವ ಅಪಾಯಕಾರಿ ಸರ್ಕಸ್‌ ನಡೆಯುತ್ತಿದೆ.

ತಾವೇ ಅಥವಾ ಮತ್ತೂಬ್ಬರ ಬಲಿಗೆ ಕಾರಣರಾಗುತ್ತಿರುವ ದ್ವಿಚಕ್ರ ವಾಹನ ಸವಾರರು   ವಾಹನಗಳನ್ನು ನುಗ್ಗಿಸಿಕೊಂಡು ನೇರವಾಗಿ ಹೆದ್ದಾರಿಯನ್ನು ಪ್ರವೇಶಿಸುತ್ತಿದ್ದು, ಈ ವೇಳೆ ಹೆದ್ದಾರಿಗೆ ಬರುವ ವಾಹನಗಳನ್ನು ಅಂದಾಜಿಸುವಲ್ಲಿ ವಿಫಲರಾಗಿ ವಾಹನಗಳಿಗೆ ಢಿಕ್ಕಿ ಹೊಡೆಯುತ್ತಾರೆ.   ಅಥವಾ ಆ ವಾಹನಗಳನ್ನು ತಪ್ಪಿಸಲು ಹೋಗಿ ಸ್ವತಃ ತಾವೇ ಅಪಘಾತಕ್ಕೊಳಗಾಗುತ್ತಾರೆ.

ಡಿವೈಡರ್‌ ನಡುವೆ ದ್ವಿಚಕ್ರ ವಾಹನ ಚಲಾಯಿಸಲು ಕಾರಣವೇನು?
ರಾ.ಹೆ. 66ರ ಚತುಷ್ಪಥ ಯೋಜನೆಯ ಕಾಮಗಾರಿ ವೇಳೆ ಹೆದ್ದಾರಿ ಇಲಾಖೆ ಮತ್ತು ಕಾಮಗಾರಿಯ ಗುತ್ತಿಗೆ ಕಂಪೆನಿಯು ಸ್ಥಳೀಯರ ಬೇಡಿಕೆಯನ್ನು ಬದಿಗಿರಿಸಿ ತಮ್ಮ ಇಚ್ಛೆಯಂತೆ ಪ್ರತಿ ಒಂದೂವರೆ ಕಿ.ಮೀ. ಅಂತರದಲ್ಲಿ ಡೈವರ್ಷನ್‌ಗಳನ್ನು ತೆಗೆದುಕೊಟ್ಟಿರುವುದೇ ದ್ವಿಚಕ್ರ ವಾಹನ ಸವಾರರ ಡಿವೈಡರ್‌ ನಡುವೆ ವಾಹನಗಳನ್ನು ತೂರಿಸಿಕೊಂಡು ಹೋಗಲು ಕಾರಣವಾಗಿದೆ. 

ನೂರು ಮೀ. ಓಡಾಡುವವರು ಕೂಡ ಕನಿಷ್ಠ ಒಂದೂವರೆ ಕಿ.ಮೀ. ದೂರದಲ್ಲಿರುವ ಡೈವರ್ಶನ್‌ ಬಳಿಗೆ ತೆರಳಿದಲ್ಲಿ ಸಮಯ ಮತ್ತು ಪೆಟ್ರೋಲಿನ ಖರ್ಚು ಉಳಿಸಲು ಸಾಧ್ಯವಾಗುತ್ತದೆ ಎನ್ನುವುದು ದ್ವಿಚಕ್ರ ವಾಹನ ಸವಾರರ ಅಭಿಪ್ರಾಯವಾಗಿದೆ.

ದ್ವಿಚಕ್ರ ವಾಹನ ಸವಾರರೇ ಯೋಚಿಸಿ  
 ರಾಷ್ಟ್ರೀಯ ಹೆದ್ದಾರಿಯಲ್ಲಿ  ಯಾವುದೇ ಅಪಘತಾ ಸಂಭವಿಸಿದರೂ ಹೆಚ್ಚಾಗಿ ಸಾವು – ನೋವಿಗೆ ಗುರಿಯಾಗುವವರು ದ್ವಿಚಕ್ರ ವಾಹನ ಸವಾರರೇ ಆಗಿರುತ್ತಾರೆ. ಜತೆಗೆ ಎಷ್ಟೇ ಅಪಘಾತ  ಟ್ರಾಫಿಕ್‌ ನಿಯಮ, ಸಂಚಾರ ನಿಯಮಗಳನ್ನು ಉಲ್ಲಂಘಿಸಿಕೊಂಡು ವಾಹನ ಚಲಾಯಿಸುವುದರಲ್ಲಿ ದ್ವಿಚಕ್ರ ವಾಹನ ಸವಾರರದ್ದೇ ಮೇಲುಗೈ ಆಗಿರುತ್ತದೆ. ಸ್ವತಃ ಸವಾರರೇ ಈ ಬಗ್ಗೆ ಆಲೋಚಿಸುವ ಅಗತ್ಯವಿದೆ ಎನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.

ಪೊಲೀಸ್‌ ಇಲಾಖೆ ಮತ್ತೆ ಎಚ್ಚರ ವಹಿಸಲಿ
ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಡಿವೈಡರ್‌ ನಡುವಿನ ವಾಹನ ಸಂಚಾರದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಬಹಳಷ್ಟು ಅಪಘಾತಗಳು ನಡೆಯುತ್ತಿದ್ದು, ಅದನ್ನು ಮನಗಂಡು ಹಿಂದಿನ ಪೊಲೀಸ್‌ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರು ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಹೆದ್ದಾರಿ ಇಲಾಖೆಗೆ ಪತ್ರ ಬರೆದು ಇಂತಹ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ, ಕೆಲವೆಡೆ ಕಲ್ಲು ಮತ್ತು ಮಣ್ಣುಗಳನ್ನು ಹಾಕಿ ದ್ವಿಚಕ್ರ ವಾಹನ ಸವಾರರನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತು. ಇದರಿಂದಾಗಿ ಇಂತಹ ವಾಹನ ಅಪಘಾತಗಳು ನಿಯಂತ್ರಣಕ್ಕೆ ಬಂದಿತ್ತು. ಆದರೆ ಇದೀಗ ಮತ್ತೆ ಅಂತಹ ಪ್ರವೃತ್ತಿ ಮುಂದುವರಿದಿದೆ. ಪೊಲೀಸ್‌ ಇಲಾಖೆ ಎಚ್ಚರ ವಹಿಸಲಿ.
– ಹರೀಶ್‌ ನಾಯಕ್‌, ಉದ್ಯಮಿ ಕಾಪು

ಹೆದ್ದಾರಿ ಇಲಾಖೆಗೆ ಮತ್ತೆ ಪತ್ರ ಬರೆಯಲಾಗುವುದು
ಉದ್ಯಾವರದಿಂದ ಉಚ್ಚಿಲದವರೆಗಿನ  ಹೆದಾರಿ  ಡಿವೈಡರ್‌ ನಡುವೆ ದ್ವಿಚಕ್ರ ವಾಹನಗಳನ್ನು ನುಗ್ಗಿಸುವ ಹಲವಾರು ಪ್ರದೇಶಗಳಿವೆ.  ಇಲ್ಲಿ ಹಿಂದೆ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದ ಪರಿಣಾಮ ಪೊಲೀಸ್‌ ಇಲಾಖೆ ಹೆದ್ದಾರಿ ಇಲಾಖೆಗೆ ಪತ್ರ ಬರೆದು ಮಳೆ ನೀರು ಹರಿಯುವ ಪ್ರದೇಶಗಳಲ್ಲಿ ಬೇರೊಂದು ರೀತಿ ಕಾಮಗಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಅದನ್ನು ಕೂಡ ಸ್ಥಳೀಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಿತ್ತು ಹಾಕಿ ವಾಹನ ಚಲಾಯಿಸಿಕೊಂಡು ಹೋಗುತ್ತಿರುವುದು ದುರದೃಷ್ಟಕರವಾಗಿದೆ. ಇಂತಹ ಕಡೆಗಳಲ್ಲಿ ಮತ್ತೆ ಸಂಚಾರ ತಡೆಯುವ ಕಾಮಗಾರಿ ನಡೆಸಲು ಹೆದ್ದಾರಿ ಇಲಾಖೆಗೆ ಪತ್ರ ಬರೆದು ವಿನಂತಿಸಲಾಗುವುದು.
-ಮಹೇಶ್‌ ಪ್ರಸಾದ್‌, ಕಾಪು ಪೊಲೀಸ್‌ ವೃತ್ತ ನಿರೀಕ್ಷಕರು

-ರಾಕೇಶ್ ಕುಂಜೂರು

ಟಾಪ್ ನ್ಯೂಸ್

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.